ಉಪ್ಪಿ ಇಂಟೆಲಿಜೆನ್ಸ್ ಮುಂದೆ AI ಕೂಡ ಡಲ್! 'ನಾನು, ನಾನು' ಎನ್ನುತ್ತಾ ಚಾಟ್‌ಜಿಪಿಟಿ ಜತೆ ಉಪೇಂದ್ರ ಮಾತು: ವೈರಲ್ ಆಯ್ತು ಹೊಸ ರೀಲ್

ರಿಯಲ್ ಸ್ಟಾರ್ ಉಪೇಂದ್ರ ಅವರು ಚಾಟ್‌ಜಿಪಿಟಿ ಸಹಯೋಗದ ಹೊಸ ಜಾಹೀರಾತು ರೀಲ್‌ನಲ್ಲಿಯೂ ತಮ್ಮದೇ ವಿಶಿಷ್ಟ ನಾನು ನಾನು ಎಂಬ ಯುಐ ಶೈಲಿಯ ಸಂಭಾಷಣೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Not AI, It Is Uppi Intelligence: Upendra ChatGPT Ad Reel Sparks Viral Buzz
'ನಾನು, ನಾನು' ಎನ್ನುತ್ತಾ ಚಾಟ್‌ಜಿಪಿಟಿ ಜತೆ ಉಪೇಂದ್ರ ಮಾತುOnline Desk
Updated on: 

ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಎಂದರೆ ಕೇವಲ ಸಿನಿಮಾ ಕಥೆ ಹೇಳುವ ನಿರ್ದೇಶಕರಲ್ಲ, ಬದಲಿಗೆ ಪ್ರೇಕ್ಷಕರ ಆಲೋಚನಾ ಲಹರಿಯನ್ನೇ ಬದಲಾಯಿಸಿ ತಲೆಗೆ ಹುಳ ಬಿಡುವ ವಿಶಿಷ್ಟ ಪ್ರತಿಭೆ. ಇದೀಗ ಉಪೇಂದ್ರ ಅವರ ವಿಭಿನ್ನ ಚಿಂತನೆ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕುವ ಶೈಲಿಗೆ ಹೊಂದುವಂತೆ ಚಾಟ್‌ಜಿಪಿಟಿ ಜೊತೆ ಹೊಸ ಜಾಹೀರಾತು ಬಿಡುಗಡೆಯಾಗಿದ್ದು, 'ನಾನು ನಾನು' ಹಾಗೂ 'ಉಪ್ಪಿ ಇಂಟೆಲಿಜೆನ್ಸ್' (UI) ಪರಿಕಲ್ಪನೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ, ಎಐ ತಂತ್ರಜ್ಞಾನವನ್ನೇ ಪರೀಕ್ಷಿಸಲು ನಮ್ಮ ಉಪ್ಪಿಯೇ ಬರಬೇಕಾಯಿತು ಎಂದು ಅಭಿಮಾನಿಗಳು ಸಂಭ್ರಮಿಸುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ:

ಎಐ ಅಲ್ಲ ಯುಐ

ನವೆಂಬರ್ 20ರಂದು ಬಿಡುಗಡೆಯಾದ ಈ ಜಾಹೀರಾತಿನಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನಕ್ಕೆ ಉಪೇಂದ್ರ ಅವರ ತತ್ವಶಾಸ್ತ್ರದ ಸ್ಪರ್ಶ ನೀಡಿ, AI ಬದಲಿಗೆ 'UI' (Uppi Intelligence) ಎಂಬ ತಮಾಷೆಯ ಮತ್ತು ಬುದ್ಧಿವಂತಿಕೆಯ ಕಲ್ಪನೆಯನ್ನು ಬಳಸಿಕೊಳ್ಳಲಾಗಿದೆ. ಅದರಲ್ಲೂ, ವಿಡಿಯೋದಲ್ಲಿ ಸೂಪರ್ ಸ್ಟಾರ್, ತಮ್ಮ ಉಪೇಂದ್ರ ಮತ್ತು ಯುಐ ಸಿನಿಮಾಗಳಲ್ಲಿ ಬಳಸುವ "ನಾನು, ನೀನು" ಎಂಬ ವಿಶಿಷ್ಟ ಚಿಂತನಾ ಶೈಲಿಯಲ್ಲೇ ಚಾಟ್‌ಜಿಪಿಟಿ ಜೊತೆ ಮಾತನಾಡಿದ್ದು, ಎಐ ತಲೆಗೂ ಹುಳಬಿಡುವಂತೆ ಪ್ರಶ್ನೆಗಳನ್ನು ಕೇಳಿ ವೀಕ್ಷಕರನ್ನು ರಂಜಿಸಿದ್ದಾರೆ.

ಮುಂದುವರೆದು, ಈ ರೀಲ್ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಇಷ್ಟು ದಿನ ಮನುಷ್ಯರ ತಲೆಗೆ ಹುಳ ಬಿಡುತ್ತಿದ್ದ ಉಪ್ಪಿ, ಈಗ AI ತಲೆಗೂ ಹುಳ ಬಿಟ್ಟಿದ್ದಾರೆ", "ಉಪ್ಪಿ ಪ್ರಶ್ನೆಗಳಿಗೆ ಉತ್ತರ ಕೊಡಲು ಚಾಟ್‌ಜಿಪಿಟಿ ಕೂಡ ಹ್ಯಾಂಗ್ ಆಗಬಹುದು" ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X