ರಾಮಾಯಣದ 18ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಮೂರನೇ ಭಾನುವಾರವೂ ಭಾರತದಲ್ಲಿ ಭರ್ಜರಿ ಪ್ರದರ್ಶನ, 'ಧುರಂಧರ್ 2' ದಾಖಲೆ ಬ್ರೇಕ್!

ಭಾರತದಲ್ಲಿ 'ರಾಮಾಯಣ' ಸಿನಿಮಾದ ನಿವ್ವಳ ಗಳಿಕೆ 942.75 ಕೋಟಿ ರೂ. ಮತ್ತು ಒಟ್ಟಾರೇ 1,126.50 ಕೋಟಿ ರೂ. ಕಲೆಕ್ಷನ್ ಮಾಡಿದೆ. 18ನೇ ದಿನದ ಅಂತ್ಯಕ್ಕೆ, ಚಿತ್ರದ ಜಾಗತಿಕ ಒಟ್ಟು ಗಳಿಕೆ 1 ,693.50 ಕೋಟಿ ರೂ. ಆಗಿದೆ. ಇದು 'ಧುರಂಧರ್ 2' ಸಿನಿಮಾಕ್ಕಿಂತ 81 ಕೋಟಿ ರೂ. ಹೆಚ್ಚಾಗಿದೆ.
Ramayana
ರಾಮಾಯಣ
Updated on: 

ನಿತೇಶ್ ತಿವಾರಿ ನಿರ್ದೇಶನದ ಹಾಗೂ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ರಾಮಾಯಣ' ಸಿನಿಮಾ ವಾರದ ದಿನಗಳಲ್ಲಿ ಗಳಿಕೆ ತುಸು ನಿಧಾನಗೊಂಡಿದ್ದರೂ, ಮೂರನೇ ವಾರಾಂತ್ಯದಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡಿದೆ. ಭಾರತದಲ್ಲಿ 35.60 ಕೋಟಿ ರೂ.ಗಳನ್ನು ಗಳಿಸುವ ಮೂಲಕ, ಮೂರನೇ ಭಾನುವಾರದಂದು ಸಿನಿಮಾ ರಣವೀರ್ ಸಿಂಗ್ ಅವರ 'ಧುರಂಧರ್ 2' ಚಿತ್ರಕ್ಕಿಂತ ಹೆಚ್ಚಿನ ಆದಾಯವನ್ನು ದಾಖಲಿಸಿದೆ.

ಭಾರತದಲ್ಲಿ 'ರಾಮಾಯಣ' ಸಿನಿಮಾದ ನಿವ್ವಳ ಗಳಿಕೆ 942.75 ಕೋಟಿ ರೂ. ಮತ್ತು ಒಟ್ಟಾರೇ 1,126.50 ಕೋಟಿ ರೂ. ಕಲೆಕ್ಷನ್ ಮಾಡಿದೆ. 18ನೇ ದಿನದ ಅಂತ್ಯಕ್ಕೆ, ಚಿತ್ರದ ಜಾಗತಿಕ ಒಟ್ಟು ಗಳಿಕೆ 1 ,693.50 ಕೋಟಿ ರೂ. ಆಗಿದೆ. ಇದು 'ಧುರಂಧರ್ 2' ಸಿನಿಮಾಕ್ಕಿಂತ 81 ಕೋಟಿ ರೂ. ಹೆಚ್ಚಾಗಿದೆ.

ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ನೀಡುವ 'ಸ್ಯಾಕ್ನಿಲ್ಕ್' (Sacnilk) ವರದಿಯ ಪ್ರಕಾರ, 18ನೇ ದಿನದಂದು 'ರಾಮಾಯಣ' ಸಿನಿಮಾ 16,277 ಪ್ರದರ್ಶನಗಳ ಮೂಲಕ 35.60 ಕೋಟಿ ರೂ. (net) ಗಳಿಸಿದೆ. ವಿದೇಶಗಳಲ್ಲಿ ಇಲ್ಲಿಯವರೆಗೆ 567 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಸಿನಿಮಾದ ಜಾಗತಿಕ ಒಟ್ಟು ಗಳಿಕೆ 1,693.50 ಕೋಟಿ ರೂ.ಗೆ ಏರಿಕೆಯಾಗಿದೆ.

18ನೇ ದಿನದಂದು ಹಿಂದಿ ಆವೃತ್ತಿಯು 13,852 ಪ್ರದರ್ಶನಗಳ ಮೂಲಕ ಒಟ್ಟು ಮೊತ್ತಕ್ಕೆ 26.25 ಕೋಟಿ ರೂ. ಕೊಡುಗೆ ನೀಡಿದೆ. ಉಳಿದಂತೆ, ಕನ್ನಡದಲ್ಲಿ 2.50 ಕೋಟಿ ರೂ. ತಮಿಳಿನಲ್ಲಿ 2.40 ಕೋಟಿ ರೂ, ತೆಲುಗಿನಲ್ಲಿ 1.05 ಕೋಟಿ ರೂ. ಮತ್ತು ಮಲಯಾಳಂನಲ್ಲಿ 3.40 ಕೋಟಿ ರೂ. ಗಳಿಕೆ ದಾಖಲಾಗಿದೆ.

ಸಿನಿಮಾ ಬಿಡುಗಡೆಯಾದಾಗಿನಿಂದ ಅದರ ಹಿಂದಿ ಆವೃತ್ತಿಯ ವ್ಯವಹಾರವನ್ನು ಗಮನಿಸುತ್ತಿರುವ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್, ವಾರಾಂತ್ಯದಲ್ಲಿ ಸಿನಿಮಾ ಅದ್ಭುತ ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಿದ್ದಾರೆ. ರಾಮಾಯಣ ಹಿಂದಿ ಆವೃತ್ತಿ ಮೂರನೇ ಶನಿವಾರದಂದು ಭರ್ಜರಿ ಚೇತರಿಕೆ ಕಂಡಿದ್ದು, ಗಳಿಕೆಯಲ್ಲಿ 78.04% ಏರಿಕೆ ದಾಖಲಿಸಿದೆ. ಭಾನುವಾರವೂ ಅತ್ಯುತ್ತಮ ಪ್ರದರ್ಶನ ಕಂಡಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬರೆದುಕೊಂಡಿದ್ದಾರೆ.

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಹಿಂದಿ ಭಾಷೆಯ ನಿವ್ವಳ ಗಳಿಕೆಯ (net collection) ವಿಷಯಕ್ಕೆ ಬಂದರೆ, ಇದು ಶೀಘ್ರದಲ್ಲೇ 700 ಕೋಟಿ ರೂಪಾಯಿಗಳ ಗಡಿಯನ್ನು ದಾಟಲಿದೆ. 'ಧುರಂಧರ್ 2' (Dhurandhar 2) ಕೇವಲ 10 ದಿನಗಳಲ್ಲಿ ಈ ಸಾಧನೆ ಮಾಡಿದ್ದರೆ, 'ರಾಮಾಯಣ' (Ramayana) ಸುಮಾರು 18 ದಿನಗಳನ್ನು ತೆಗೆದುಕೊಂಡು ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದರ ನಂತರ 'ಪುಷ್ಪ 2' (Pushpa 2) ಬರುತ್ತದೆ, ಇದು 700 ಕೋಟಿ ರೂಪಾಯಿಗಳ (ಹಿಂದಿ) ನಿವ್ವಳ ಗಳಿಕೆಯನ್ನು ತಲುಪಲು 20 ದಿನಗಳನ್ನು ತೆಗೆದುಕೊಂಡಿತು. ಹಾಗೆಯೇ 'ಧುರಂಧರ್' (Dhurandhar) ಈ ಮೈಲಿಗಲ್ಲನ್ನು ತಲುಪಲು 25 ದಿನಗಳನ್ನು ತೆಗೆದುಕೊಂಡಿತು.

Ramayana
'ರಾಮಾಯಣ' ಸಂಗೀತಕ್ಕಾಗಿ 3 ವರ್ಷ ಮೀಸಲು; 10-12 ಸಿನಿಮಾಗಳ ಆಫರ್ ತಿರಸ್ಕರಿಸಿದ್ದೆ: ಎ.ಆರ್. ರೆಹಮಾನ್

ಶನಿವಾರ ರಾಮಾಯಣ' ಚಿತ್ರವು 'ಧುರಂಧರ್ 2' ನಂತರ, 650 ಕೋಟಿ ರೂ. ನಿವ್ವಳ ಗಳಿಕೆ ಕಂಡ ಹಿಂದಿಯ ಎರಡನೇ ಚಲನಚಿತ್ರವಾಯಿತು. ಗಮನಾರ್ಹ ಸಂಗತಿಯೆಂದರೆ, ಭಾರತೀಯ ಭಾಷೆಗಳ ಪೈಕಿ ಹಿಂದಿ ಮಾರುಕಟ್ಟೆಯಲ್ಲಿ ಮಾತ್ರ ಸಿನಿಮಾಗಳು ಈ ಸಾಧನೆ ಮಾಡಿವೆ. ನಂತರದ ಸ್ಥಾನದಲ್ಲಿ ತೆಲುಗು ಭಾಷೆಯಿದ್ದು, 'ಆರ್‌ಆರ್‌ಆರ್' (RRR) ಚಿತ್ರವು 16 ದಿನಗಳಲ್ಲಿ 400 ಕೋಟಿ ರೂ. ನಿವ್ವಳ ಗಳಿಕೆ ಕಂಡ ಏಕೈಕ ಚಿತ್ರವಾಗಿದೆ. ಇದು ಅಂತಿಮವಾಗಿ 431.01 ಕೋಟಿ ರೂಪಾಯಿಗಳನ್ನು ಗಳಿಸಿತು. ತಮಿಳು, ಕನ್ನಡ ಅಥವಾ ಮಲಯಾಳಂ ಭಾಷೆಯ ಯಾವುದೇ ಚಿತ್ರವು ಇಲ್ಲಿಯವರೆಗೆ ಈ ಮಟ್ಟವನ್ನು ತಲುಪಿಲ್ಲ ಎಂದು 'ಸ್ಯಾಕ್ನಿಲ್ಕ್' (Sacnilk) ವರದಿ ಮಾಡಿದೆ.

4,000 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾಗಿರುವ 'ರಾಮಾಯಣ', ಭಾರತೀಯ ಚಿತ್ರರಂಗ ಕಂಡ ಅತ್ಯಂತ ಮಹತ್ವಾಕಾಂಕ್ಷೆಯ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಈ ಚಿತ್ರವನ್ನು ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಅಕ್ಟೋಬರ್ 27 ರಂದು ಚಿತ್ರತಂಡ ಲಾಸ್ ಏಂಜಲೀಸ್‌ನಲ್ಲಿ ವಿಶೇಷ ಪ್ರದರ್ಶನವನ್ನು (special screening) ಏರ್ಪಡಿಸಿತ್ತು. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತಾ ಸೇರಿದಂತೆ ಅನೇಕ ಪ್ರಮುಖ ನಟ-ನಟಿಯರು ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X