

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಉಸ್ತುವಾರಿಗಳ ನಡೆ ಹಾಗೂ ಬಳಿಕ ಗಾನವಿಗೆ ನೀಡಲಾದ ಕಳಪೆ ಪಟ್ಟ ಚರ್ಚೆಗೆ ಗ್ರಾಸವಾಗಿದೆ.
ಟಾಸ್ಕ್‌ನ ಜವಾಬ್ದಾರಿ ವಹಿಸಿದ್ದ ಮಂಜು ಹಾಗೂ ಲಿಖಿತ್ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ನಿರ್ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಟಾಸ್ಕ್‌ನ್ನೇ ರದ್ದು ಮಾಡಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಉಸ್ತುವಾರಿಗಳಾಗಿ ಮಂಜು ಮತ್ತು ಲಿಖಿತ್ ಅವರಿಗೆ ಆಟವನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಟಾಸ್ಕ್‌ನ ನಿಯಮಗಳನ್ನು ಅನುಸರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿ, ಆಟದ ವೇಳೆ ಹಲವು ಸಮಸ್ಯೆಗಳು ಎದುರಾದವು.
ಕೊನೆಗೆ ಟಾಸ್ಕ್ ಅನ್ನು ಮುಂದುವರಿಸಲು ಸಾಧ್ಯವಾಗದೆ ರದ್ದುಪಡಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವಿಚಾರ ಇದೀಗ ಬಿಗ್ ಬಾಸ್ ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಇದರ ನಡುವೆ ಟಾಸ್ಕ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿಗೆ ಮನೆಯವರು ಕಳಪೆ ಪಟ್ಟ ನೀಡಿರುವುದು ಮತ್ತೊಂದು ಚರ್ಚೆಯ ವಿಷಯವಾಗಿದೆ.
ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ನೀಡಿರುವ ಗಾನವಿ, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ತಂಡದ ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಟಾಸ್ಕ್‌ನ ಒಂದು ಹಂತದಲ್ಲಿ ಭಾರವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಅವರ ಮೇಲಿತ್ತು. ಈ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು ಎನ್ನಲಾಗಿದೆ.
ಆದರೂ ಟಾಸ್ಕ್ ಮುಗಿದ ಬಳಿಕ ಗಾನವಿ ಮನೆಯವರಿಂದ ಟೀಕೆಗೆ ಗುರಿಯಾದರು. ಸೌಂದರ್ಯಾ ಶೆಟ್ಟಿ ಸೇರಿದಂತೆ ಕೆಲವರು ಅವರ ಆಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ವಾರದ ಕಳಪೆ ನೀಡುವ ಟಾಸ್ಕ್ ನಲ್ಲಿ ಹಲವರು ಗಾನವಿ ಹಾಗೂ ಮಂಜುನಾಥ್ ಅವರಿಗೆ ಕಳಪೆ ನೀಡಿದ್ದಾರೆ.
ತಂಡದ ನಾಯಕಿಯಾಗಿ ಸ್ಪರ್ಧಿಗಳನ್ನು ಮುನ್ನಡೆಸಿ ಗೆಲುವು ತಂದುಕೊಟ್ಟಿದ್ದರೂ ಗಾನವಿಗೆ ಬೆಂಬಲ ಸಿಗಲಿಲ್ಲ ಎಂಬ ಅಭಿಪ್ರಾಯ ವೀಕ್ಷಕರಲ್ಲಿ ವ್ಯಕ್ತವಾಗುತ್ತಿದೆ. ಅದರಲ್ಲೂ ಮನೆಗೆ ಬಂದ ಮೊದಲ ವಾರದಲ್ಲೇ ಕಳಪೆ ಪಟ್ಟ ಪಡೆದಿರುವುದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಗಾನವಿ ಕಳಪೆಗೆ ಅರ್ಹರಾಗಿದ್ದಾರೆಯೇ ಎಂಬುದು ವೀಕ್ಷಕರ ವೈಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟ ವಿಚಾರ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಲು ಕಾರಣವಾದ ಉಸ್ತುವಾರಿಗಳ ನಿರ್ವಹಣೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಮಂಜು ಮತ್ತು ಲಿಖಿತ್ ಟಾಸ್ಕ್‌ನ್ನು ಸರಿಯಾಗಿ ನಿರ್ವಹಿಸಿದ್ದರೆ ಆಟ ಮುಂದುವರಿಯಬಹುದಿತ್ತು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಒಟ್ಟಿನಲ್ಲಿ, ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿರುವುದು, ಗಾನವಿಗೆ ನೀಡಲಾದ ಕಳಪೆ ಹಾಗೂ ಉಸ್ತುವಾರಿಗಳ ನಿರ್ವಹಣೆ ‘ಬಿಗ್ ಬಾಸ್ ಕನ್ನಡ 13’ರಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಟಾಸ್ಕ್‌ನಲ್ಲಿ ಗೆಲುವು ಸಾಧಿಸಿದ ತಂಡದಲ್ಲಿದ್ದರೂ ಗಾನವಿಗೆ ಸಿಕ್ಕ ಕಳಪೆ ಪಟ್ಟದ ಬಗ್ಗೆ ವೀಕ್ಷಕರು ತಮ್ಮದೇ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ