ಬೇಲ್ ಚಿತ್ರದ ಪ್ರಚಾರ ಕಾರ್ಯಕ್ರಮ ವೇಳೆ ಪಟಾಕಿ ಸ್ಫೋಟ: ಶಿವಣ್ಣ ಕೂದಲೆಳೆ ಅಂತರದಲ್ಲಿ ಪಾರು!

ಸ್ಫೋಟದ ತೀವ್ರತೆಗೆ ದೊಡ್ಡ ಶಬ್ದ ಉಂಟಾಗಿ ಶೋರೂಮ್ ಒಳಗಡೆ ದಟ್ಟ ಹೊಗೆ ಆವರಿಸಿಕೊಂಡಿತು. ಇದರಿಂದಾಗಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
Shivanna
ಶಿವಣ್ಣ
Updated on: 

ಚಿತ್ರದುರ್ಗ: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಂಭವಿಸಬಹುದಾದ ಅವಘಡವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ತಮ್ಮ ಬಹುನಿರೀಕ್ಷಿತ ಬೇಲ್ ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ಇದು ನಡೆದಿದೆ.

ಚಿತ್ರದುರ್ಗದ ಖಾಸಗಿ ಶೋರೂಮ್ ಒಂದರಲ್ಲಿ ನಟ ಡಾ. ಶಿವರಾಜ್‌ಕುಮಾರ್ ಅವರು ಭಾಗಿಯಾಗಿದ್ದ ಕಾರ್ಯಕ್ರಮದ ವೇಳೆ ಪಟಾಕಿ ಸಿಡಿದು ಅವಘಡ ಸಂಭವಿಸಿದೆ. ಶಿವರಾಜ್‌ಕುಮಾರ್ ಅವರು ಶೋರೂಮ್‌ಗೆ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಶೋರೂಮ್ ಬಾಗಿಲ ಬಳಿ ಹಚ್ಚಲಾಗಿದ್ದ ಫ್ಲವರ್ ಪಾಟ್ (ಹೂಬಾಣ) ಏಕಾಏಕಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ದೊಡ್ಡ ಶಬ್ದ ಉಂಟಾಗಿ ಶೋರೂಮ್ ಒಳಗಡೆ ದಟ್ಟ ಹೊಗೆ ಆವರಿಸಿಕೊಂಡಿತು. ಇದರಿಂದಾಗಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮುನ್ನೆಚ್ಚರಿಕೆಯಾಗಿ ಶಿವಣ್ಣನ ಜೊತೆಗೆಯಿದ್ದ ಗಾರ್ಡ್‌ಗಳು, ಅವರನ್ನ ಮುತ್ತಿಕೊಂಡು ಅನಾಹುತ ತಪ್ಪಿಸಿದ್ದಾರೆ.

Shivanna
ಬೇಲ್ ಚಿತ್ರದ ಟೀಸರ್

ಅದೃಷ್ಟವಶಾತ್ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಮತ್ತು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಅಲ್ಲಿದ್ದವರು ಅವರ ರಕ್ಷಣೆಗೆ ಮುಂದಾಗಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಘಟನೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದೊಂದು ಸಂಪೂರ್ಣ ಫ್ಯಾಮಿಲಿ ಎಂಟರ್‌ಟೈನರ್ ಎಂದರು.ಸಿನಿಮಾವನ್ನು ಬಿಗ್ ಬಜೆಟ್, ಸ್ಮಾಲ್ ಬಜೆಟ್ ಎಂದು ಅಳೆಯಬಾರದು. ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ ಮಾತ್ರಕ್ಕೆ ಅದು ಗೆಲ್ಲುತ್ತದೆ ಎಂಬುದು ಸುಳ್ಳು. ಸಿನಿಮಾದ ಕಥೆ ಜನರಿಗೆ ಇಷ್ಟವಾಗಬೇಕು ಮತ್ತು ಕುಟುಂಬ ಸಮೇತರಾಗಿ ಕುಳಿತು ನೋಡುವಂತಿರಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com