ಕೇವಲ 3 ಕೋಟಿ ಬಜೆಟ್, 86 ಕೋಟಿಗೂ ಅಧಿಕ ಕಲೆಕ್ಷನ್: ಜೈಲರ್ 2 ಅಬ್ಬರದ ನಡುವೆಯೂ 100 ಕೋಟಿ ಕ್ಲಬ್‌ನತ್ತ ‘ಪ್ರೇಮದ ಊರಲಿ’!

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರ ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ನಡುವೆಯೂ, ಪ್ರೇಮದ ಊರಲಿ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಕಡೆಗೆ ಹೆಜ್ಜೆ ಇಟ್ಟಿದೆ! ಆ ಕುರಿತ ವರದಿ ಇಲ್ಲಿದೆ:
Premada Oorali
ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ಪ್ರೇಮದ ಊರಲಿ’Online Desk
Updated on: 

Premada Oorali: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ಜೈಲರ್ 2 ಅಕ್ಟೋಬರ್ 15 ರಂದು ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ನಡುವೆಯೂ, ಫೀಲ್ ಗುಡ್ ಲವ್ ಸ್ಟೋರಿ ಹೊಂದಿರುವ ‘ಪ್ರೇಮದ ಊರಲಿ’ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಾ ನೂರು ಕೋಟಿ ಕ್ಲಬ್ ಕಡೆಗೆ ಹೆಜ್ಜೆ ಇಟ್ಟಿದೆ! ಆ ಕುರಿತ ವರದಿ ಇಲ್ಲಿದೆ:

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ ಕೇವಲ ₹2 ರಿಂದ ₹3 ಕೋಟಿ ಬಜೆಟ್‌ನಲ್ಲಿ ತಯಾರಾಗಿ ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. ಅದರಂತೆ, ಸಿನಿಮಾ ಬಿಡುಗಡೆಯಾದ 23ನೇ ದಿನವಾದ ಶನಿವಾರದಂದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದ್ದು, ಒಂದೇ ದಿನ ಸುಮಾರು ₹4.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಒಟ್ಟು  23 ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟಾರೆಯಾಗಿ ಬರೋಬ್ಬರಿ ₹86.72 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Premada Oorali
ಪ್ರೇಮದ ಊರಲಿ ಯಶಸ್ಸಿಗೆ ಗಣೇಶ್ ಸಾಥ್: ಬೃಂದಾವಿಹಾರಿ ರಿಲೀಸ್ ದಿನಾಂಕ ದಿಢೀರ್ ಬದಲಾವಣೆ

ಕರ್ನಾಟಕದಲ್ಲೇ ಒಟ್ಟು ₹72.52 ಕೋಟಿಗೂ ಅಧಿಕ ಕಲೆಕ್ಷನ್

ಮುಂದುವರೆದು, ಕರ್ನಾಟಕದ ಬಾಕ್ಸ್ ಆಫೀಸ್ ಲೆಕ್ಕಾಚಾರಗಳ ಪ್ರಕಾರ, ಸಿನಿಮಾ ನಮ್ಮ ರಾಜ್ಯವೊಂದರಲ್ಲೇ ಒಟ್ಟು ₹72.52 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದು, ಸದ್ಯದಲ್ಲೇ ₹100 ಕೋಟಿ ಕ್ಲಬ್ ತಲುಪುವತ್ತ ಮುನ್ನುಗ್ಗುತ್ತಿದೆ. ಅದರಲ್ಲೂ, ಒಂದು ಲೆಕ್ಕಾಚಾರಗಳ ಪ್ರಕಾರ, ಇನ್ನ ಎರಡು ಮೂರು ದಿನಗಳಲ್ಲೇ ನೂರು ಕೋಟಿ ಕಲೆಕ್ಟ್ ಮಾಡಬಹುದು ಎನ್ನಲಾಗಿದೆ. ಏತನ್ಮಧ್ಯೆ, ಈ ಚಿತ್ರದ ಯಶಸ್ಸು ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ಮತ್ತು ರಮೇಶ್ ಅರವಿಂದ್ ಅವರಂತಹ ಪ್ರಮುಖ ಕನ್ನಡ ತಾರೆಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಟ ವಸಿಷ್ಠ ಎನ್. ಸಿಂಹ ಮತ್ತು ಅವರ ಪತ್ನಿ ಹರಿಪ್ರಿಯಾ ಚಿತ್ರವನ್ನು ವೀಕ್ಷಿಸಿ, ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಜೊತೆಗೆ, ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ನಟಿ ತಪಸ್ವಿನಿ ಪೂಣಚ್ಚ ಅವರ ಅಭಿನಯದ ಕುರಿತು ಮಾತನಾಡಲು ಅವರಿಗೆ ಕರೆ ಕೂಡ ಮಾಡಿದರು.

ಒಟ್ಟಾರೆಯಾಗಿ, ಯಾವುದೇ ಅದ್ಧೂರಿ ಪ್ರಚಾರವಿಲ್ಲದೆ ಸೆಪ್ಟೆಂಬರ್ 25ರಂದು ಕೇವಲ 60 ಶೋಗಳಿಂದ ಆರಂಭವಾದ ಪ್ರೇಮದ ಊರಲಿ, ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಾಗಿ ಇಂದು 1,300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಾ ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿದೆ.

Premada Oorali
ದಾಖಲೆ ಮಟ್ಟದ ಟಿಕೆಟ್ ಬುಕ್ಕಿಂಗ್‌: ಮೂರನೇ ವಾರಕ್ಕೆ ಕಾಲಿಟ್ಟ 'ಪ್ರೇಮದ ಊರಲಿ' ಚಿತ್ರ; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com