ಕುಡಿದು ಬಂದಿದ್ದೀಯಾ? ಸರಿಯಾಗಿ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದು ಹೇಗೆ? ಗಾಯಕ ದಲೇರ್ ಮೆಹಂದಿಗೆ ವೇದಿಕೆಯಲ್ಲೇ ಕ್ಲಾಸ್!

ನರೇಂದ್ರ ನಗರದ ಶಾಸಕರಾಗಿರುವ ಉನಿಯಾಲ್, ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಮೆಹಂದಿಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದರು.
daler mehandi
ಗಾಯಕ ದಲೇರ್ ಮೆಹಂದಿ
Updated on: 

90ರ ದಶಕದಲ್ಲಿ ತಮ್ಮ ಬೋಲೋ ತರರಾರಾ ಹಾಡಿನ ಮೂಲಕ ಪಂಜಾಬ್ ನ ಬಾಂಗ್ರಾ ನೃತ್ಯವನ್ನು ವಿಶ್ವವಿಖ್ಯಾತ ಮಾಡಿದ ಮಾಡಿದ್ದ ಗಾಯಕ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸಚಿವರೊಬ್ಬರು ವೇದಿಕೆ ಮೇಲೇರಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಉತ್ತರಾಖಂಡದ ತೆಹ್ರಿಯಿಂದ ವರದಿಯಾಗಿದೆ

ಉತ್ತರಾಖಂಡದ ಟೆಹ್ರಿ ಜಿಲ್ಲೆಯಲ್ಲಿ ನಡೆದ 'ಕುಂಜಪುರಿ ಮೇಳದಲ್ಲಿ'ಯಲ್ಲಿ ಈ ಜನಪ್ರಿಯ ಪಂಜಾಬಿ ಗಾಯಕ ಪ್ರದರ್ಶನ ನೀಡುತ್ತಿದ್ದರು. ಆದರೆ ಅವರು ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ, ವೇದಿಕೆಯ ಮೇಲೆಯೇ ಅವರನ್ನು ತಡೆದು ನಿಲ್ಲಿಸಿದ ಉತ್ತರಾಖಂಡ ಸಚಿವ ಸುಬೋಧ್ ಉನಿಯಾಲ್ ನಿಮಗೆ ಸರಿಯಾಗಿ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದು ಹೇಗೆ?" ಎಂದು ಪ್ರಶ್ನಿಸಿದರು.

ನರೇಂದ್ರ ನಗರದ ಶಾಸಕರಾಗಿರುವ ಉನಿಯಾಲ್, ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಮೆಹಂದಿಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದರು.

daler mehandi
ಹಾಡುವುದಷ್ಟೇ ಅಲ್ಲ, ನಾನೂ ಅತ್ಯುತ್ತಮವಾಗಿ ನಟಿಸಬಲ್ಲೆ: ಮಹಾ CM ಪತ್ನಿ ಅಮೃತಾ ಫಡ್ನವೀಸ್

ಈ ಕಾರ್ಯಕ್ರಮವು ದುರ್ಗಾ ದೇವಿಯ ಆರಾಧನೆಗೆ ಮೀಸಲಾದದ್ದು ಎಂದು ಹೇಳಿದ ಅವರು, ಇಂತಹ ಸಂದರ್ಭದಲ್ಲಿ ಮದ್ಯಪಾನದ ಅಮಲಿನಲ್ಲಿ ಪ್ರದರ್ಶನ ನೀಡುವುದು ಸೂಕ್ತವಲ್ಲ ಎಂದು ಮೆಹಂದಿ ಅವರಿಗೆ ತಿಳಿಸಿದರು. ಈ ಆಚರಣೆಯು ಧಾರ್ಮಿಕ ಸ್ವರೂಪದ್ದಾಗಿರುವುದರಿಂದ, ಕಲಾವಿದರು ಈ ಸಂದರ್ಭದ ಘನತೆ ಮತ್ತು ಮರ್ಯಾದೆಯನ್ನು ಗೌರವಿಸಬೇಕು ಎಂದು ಉನಿಯಾಲ್ ಒತ್ತಿ ಹೇಳಿದರು.

ನಮ್ಮ ಜನರಿಗೆ ಮನರಂಜನೆ ಸಿಗಲಿ ಎಂದು ನಾವು ನಿಮ್ಮನ್ನು ಕರೆಸಿದ್ದೆವು. ಆದರೆ ನೀವು ನಮ್ಮನ್ನೇ ಮೂರ್ಖರನ್ನಾಗಿಸುತ್ತಿದ್ದೀರಿ. ಇದು ತಪ್ಪು, ತಪ್ಪು. ನಿಮಗೆ ದೊಡ್ಡ ಹೆಸರಿದೆ, ನಾವು ಅದನ್ನು ಗೌರವಿಸುತ್ತೇವೆ. ಆ ದೊಡ್ಡ ಹೆಸರಿಗಾಗಿ ನಿಮ್ಮನ್ನು ಇಲ್ಲಿಗೆ ಕರೆಯಲಾಗಿತ್ತು." " ಎಂದು ಉನಿಯಾಲ್ ಆಕ್ರೋಶ ವ್ಯಕ್ತಪಡಜಿಸಿದರು.

ಈ ವೇಳೆ ಮೆಹಂದಿ ಅವರು ಮಧ್ಯಪ್ರವೇಶಿಸಿ, "ಸರ್, ಕೈಮುಗಿದು ಕೇಳಿಕೊಳ್ಳುತ್ತೇನೆ ದಯವಿಟ್ಟು ವೇದಿಕೆಯಿಂದ ಕೆಳಗಿಳಿಯಿರಿ," ಎಂದು ಹೇಳಿದ್ದಾರೆ. ಬಳಿಕ ಜೊತೆಯಲ್ಲಿದ್ದವರು ಸಚಿವರನ್ನು ವೇದಿಕೆಯಿಂದ ಕೆಳಗಿಳಿಸಿದ್ದು ವಿಡಿಯೋದಲ್ಲಿ ಕಂಡುಬಂದಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯು ಆ ಪ್ರದೇಶದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮರ್ಯಾದೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಲು ಸಚಿವರ ಈ ಮಧ್ಯಪ್ರವೇಶ ಅಗತ್ಯವಿತ್ತು ಎಂದು ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com