5 ಬಾರಿ ಗರ್ಭಪಾತ; ಕ್ಯಾನ್ಸರ್ ಗೆದ್ದು ಬೀಗಿದ 'ಶಾಸ್ತ್ರಿ' ನಟಿ ಮಾನ್ಯಗೆ ಇಂದು ಅಮೆರಿಕದಲ್ಲಿ ₹6 ಕೋಟಿ ಸಂಬಳದ ಉನ್ನತ ಹುದ್ದೆ!

14ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, 16ನೇ ವಯಸ್ಸಿನಲ್ಲಿ 'ಸೀತಾರಾಮರಾಜು' ತೆಲುಗು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಾನ್ಯ ನಾಯ್ಡು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾದ ಕಠಿಣ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Surviving Five Failed IVFs, Stage 3 Brain Cancer: 'Shastri' Actress Manya Naidu's Triumphant Battle to Earning ₹6 Cr Salary!
ನಟಿ ಮಾನ್ಯ
Updated on: 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಶಾಸ್ತ್ರಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ದಕ್ಷಿಣ ಭಾರತದ ಖ್ಯಾತ ನಟಿ ಮಾನ್ಯ ನಾಯ್ಡು ಅವರು ಒಟ್ಟು 41 ಸಿನಿಮಾಗಳಲ್ಲಿ ಅಭಿನಯಿಸಿದ್ದು, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ಹೆಸರು ಮಾಡಿದ್ದರು.

14ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, 16ನೇ ವಯಸ್ಸಿನಲ್ಲಿ 'ಸೀತಾರಾಮರಾಜು' ತೆಲುಗು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಾನ್ಯ ನಾಯ್ಡು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾದ ಕಠಿಣ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಐದು ಬಾರಿ ಗರ್ಭಪಾತ, ಕ್ಯಾನ್ಸರ್, ಐವಿಎಫ್ ನೋವು, ತಂದೆಯ ಅಗಲಿಕೆ… ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಬದುಕಿನಲ್ಲಿ ಸೋಲದೆ ಗೆದ್ದ ಮಾನ್ಯ ನಾಯ್ಡು ಅವರ ಕಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ.

Surviving Five Failed IVFs, Stage 3 Brain Cancer: 'Shastri' Actress Manya Naidu's Triumphant Battle to Earning ₹6 Cr Salary!
'ನನಗೆ ದೇವರ ಮೇಲೆ ನಂಬಿಕೆ ಇಲ್ಲ': ಸಂಚಲನ ಸೃಷ್ಟಿಸಿದ ರಾಧಿಕಾ ಆಪ್ಟೆ ಹೇಳಿಕೆ; ಆದ್ರೆ ಕೀರ್ತಿ ಸುರೇಶ್ ವಾದವೇ ಬೇರೆ!

ಸದ್ಯ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿರುವ ಮಾನ್ಯ ಅವರು, ಇತ್ತೀಚೆಗೆ ತೆಲುಗಿನ ಹಿರಿಯ ಪತ್ರಕರ್ತೆ ಪ್ರೇಮಾ ಅವರು ನ್ಯೂಯಾರ್ಕ್‌ನಲ್ಲಿರುವ ಮಾನ್ಯ ಅವರ ಮನೆಯಲ್ಲೇ ನಡೆಸಿದ ವಿಶೇಷ ಸಂದರ್ಶನದಲ್ಲಿ, ನಟಿ ತಮ್ಮ ವೈಯಕ್ತಿಕ ಜೀವನದ ಕಣ್ಣೀರಿನ ಕಥೆ, ಬದುಕಿನ ಹೋರಾಟವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

14ನೇ ವಯಸ್ಸಿನಲ್ಲೇ ತಂದೆ ಕಳೆದುಕೊಂಡ ನಟಿ

ಮಾನ್ಯ ನಾಯ್ಡು ಅವರ ತಂದೆ ಲಂಡನ್‌ನಲ್ಲಿ ಪ್ರಸಿದ್ಧ ಕಾರ್ಡಿಯಾಕ್ (ಹೃದಯರೋಗ) ವೈದ್ಯರಾಗಿದ್ದರು. ಅವರ ಕುಟುಂಬಕ್ಕೆ ಕರ್ನಾಟಕದ ಬಳ್ಳಾರಿಯಲ್ಲಿ ಮೈನ್ಸ್ ಬ್ಯುಸಿನೆಸ್ ಇದ್ದಿದ್ದರಿಂದ ಹಳ್ಳಿಯ ಜನರಿಗೆ ಆಸ್ಪತ್ರೆ ಕಟ್ಟಿಸಬೇಕು ಎಂಬ ಆಸೆಯಿಂದ ಲಂಡನ್ ತೊರೆದು ಭಾರತಕ್ಕೆ ಬಂದಿದ್ದರು. ಆದರೆ, ವೈದ್ಯರಾಗಿದ್ದರೂ ಅತಿಯಾಗಿ ಸಿಗರೇಟ್ ಸೇವಿಸುವ ಅಭ್ಯಾಸವಿದ್ದ ಕಾರಣ, 42ನೇ ವಯಸ್ಸಿಗೆ ತಂದೆ ದಿಢೀರ್ ಹೃದಯಾಘಾತದಿಂದ ನಿಧನರಾದರು. ಆ ವೇಳೆ ಮಾನ್ಯ ಅವರಿಗೆ ಕೇವಲ 14 ವರ್ಷ.

ಬಾಲ್ಯದಲ್ಲೇ ತಂದೆಯ ಅಗಲಿಕೆಯ ನೋವು ಅನುಭವಿಸಿದ ಮಾನ್ಯ ನಾಯ್ಡು ಅವರ ಕುಟುಂಬದ ಜವಾಬ್ದಾರಿ ಚಿಕ್ಕ ವಯಸ್ಸಿನಲ್ಲೇ ಅವರ ಹೆಗಲೇರಿತು. ತಾಯಿ ಮತ್ತು ತಂಗಿಯ ಭವಿಷ್ಯಕ್ಕಾಗಿ ದುಡಿಯಬೇಕಾದ ಅನಿವಾರ್ಯತೆ ಎದುರಾಯಿತು.

16ನೇ ವಯಸ್ಸಿಗೆ ಚಿತ್ರರಂಗಕ್ಕೆ ಪ್ರವೇಶ

ತೆಲುಗಿನ ನಾಗಾರ್ಜುನ ಅವರೊಂದಿಗೆ 'ಸೀತಾರಾಮರಾಜು' ಸಿನಿಮಾದಲ್ಲಿ ನಟಿಸಿ ಗಮನ ಸೆಳೆದ ಮಾನ್ಯ, ನಂತರ ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರು.

ಐದು ಬಾರಿ ಗರ್ಭಪಾತ

2013ರಲ್ಲಿ ವಿಕಾಸ್ ಬಾಜಪೈ ಅವರನ್ನು ವಿವಾಹವಾದ ಮಾನ್ಯ ಅವರಿಗೆ ಹಾರ್ಮೋನಗಳ ಅಸಮತೋಲನದಿಂದ ಐದು ಬಾರಿ ಗರ್ಭಪಾತವಾಗಿತ್ತು. ತಾಯಿಯಾಗುವ ಕನಸಿಗಾಗಿ ಹಲವು ಬಾರಿ ಐವಿಎಫ್ ಚಿಕಿತ್ಸೆಗೆ ಒಳಗಾದರು. ಕೊನೆಗೂ 2016ರಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ಈಗ ಮಗಳು ಒಮಿಷ್ಕಾಗೆ 10 ವರ್ಷ.

ಮೆದುಳಿನ ಕ್ಯಾನ್ಸರ್!

ಮಗಳು ಹುಟ್ಟಿದ ನಂತರ ಬದುಕು ಸುಗಮವಾಯಿತು ಎನ್ನುವಷ್ಟರಲ್ಲಿ ಅವರಿಗೆ ಮತ್ತೊಂದು ಆಘಾತ ಎದುರಾಯಿತು. ಮಾನ್ಯ ಅವರಿಗೆ ಮೂರನೇ ಹಂತದ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತುಯ.

ಅತ್ತೆ-ಮಾವ ದುಬೈನಲ್ಲಿ ಇದ್ದಿದ್ದರಿಂದ ಪತಿ ವಿಕಾಸ್ ಕೆಲಸದ ನಿಮಿತ್ತ ದುಬೈನಲ್ಲಿದ್ದರೆ, ನ್ಯೂಯಾರ್ಕ್‌ನ ಮನೆಯಲ್ಲಿ ಮಾನ್ಯ ಹಾಗೂ 8 ವರ್ಷದ ಮಗಳು ಒಮಿಷ್ಕಾ ಮಾತ್ರ ಇರುತ್ತಿದ್ದರು. ಅದೊಂದು ದಿನ ಮಾನ್ಯ ಇದ್ದಕ್ಕಿದ್ದಂತೆ ಬಾತ್‌ರೂಮ್‌ನಲ್ಲಿ ಕುಸಿದುಬಿದ್ದರು. 8 ವರ್ಷದ ಪುಟ್ಟ ಮಗಳು ಒಮಿಷ್ಕಾ ತಕ್ಷಣವೇ ತಾಯಿಯ ಫೋನ್‌ನಿಂದ ಆಸ್ಪತ್ರೆಗೆ ಕರೆ ಮಾಡಿ ವಿಷಯ ತಿಳಿಸಿ ಪ್ರಾಣ ಉಳಿಸಿದಳು. ತಪಾಸಣೆಯ ವೇಳೆ ಮಾನ್ಯಗೆ ಮೂರನೇ ಹಂತದ ಮಿದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ವೈದ್ಯರು ಆತಂಕ ವ್ಯಕ್ತಪಡಿಸಿದರೂ, ದೃಢವಿಶ್ವಾಸ, ಆಧ್ಯಾತ್ಮಿಕ ನಂಬಿಕೆ ಹಾಗೂ ಮಗಳ ಪ್ರೀತಿಯಿಂದ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾದರು.

₹6 ಕೋಟಿ ಸಂಬಳದ ಉನ್ನತ ಹುದ್ದೆ

ಸಿನಿಮಾ ರಂಗವನ್ನು ಸಂಪೂರ್ಣ ತೊರೆದು ಶೈಕ್ಷಣಿಕವಾಗಿ ಬೆಳೆದ ಮಾನ್ಯ ನಾಯ್ಡು, ಪ್ರಸ್ತುತ ಅಮೆರಿಕದ ನ್ಯೂಯಾರ್ಕ್ ಸೆಂಟ್ರಲ್ ಸಿಟಿಯಲ್ಲಿ ಸ್ವಂತ ಮನೆ ಹೊಂದಿದ್ದು, ಜಗತ್ತಿನ ಪ್ರಮುಖ ಹಣಕಾಸು ಸಂಸ್ಥೆಯಾದ 'ಸಿಟಿ ಬ್ಯಾಂಕ್'ನಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪ್ರಸ್ತುತ ವಾರ್ಷಿಕ ಸಂಭಾವನೆಯು 6 ಕೋಟಿ ರೂಪಾಯಿಗೂ ಅಧಿಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X