

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಬೆಳ್ಳಿಪರದೆಯ ಮೇಲೆ ಹೊಸ ಸಂಚಲನ ಸೃಷ್ಟಿಸಿರುವ ಸಿನಿಮಾದಲ್ಲಿ ಯಶ್ ಅವರ ಮಾಸ್ ಅವತಾರ ಹಾಗೂ ವಿಭಿನ್ನ ಮೇಕಿಂಗ್ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದ್ದು, ಕಲೆಕ್ಷನ್ ವಿಚಾರದಲ್ಲೂ ಹೊಸ ದಾಖಲೆಗಳತ್ತ ಮುನ್ನುಗ್ಗುತ್ತಿದೆ. ಅದರಂತೆ, ಸಿನಿಮಾ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗಿನ ಬಾಕ್ಸ್ ಆಫೀಸ್ ವರದಿ ಇಲ್ಲಿದೆ:
300ಕೋಟಿಗೂ ಅಧಿಕ...
ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಆಗಸ್ಟ್ 26, 2026 ರಂದು ತೆರೆಕಂಡ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹333.45 ಕೋಟಿಗೂ ಅಧಿಕ ಒಟ್ಟು ಗಳಿಕೆ ಮಾಡಿದೆ. ಅದರಂತೆ,
ವಿಶ್ವದಾದ್ಯಂತ ಒಟ್ಟು ಕಲೆಕ್ಷನ್: ₹334.50 ಕೋಟಿ
ಭಾರತದ ಒಟ್ಟು ಕಲೆಕ್ಷನ್: ₹290.64 ಕೋಟಿ
ಭಾರತದ ನಿವ್ವಳ ಕಲೆಕ್ಷನ್: ₹243.52 ಕೋಟಿ
ವಿದೇಶಿ ಗಳಿಕೆ: ₹44.00 ಕೋಟಿ
ಮುಂದುವರೆದು, ಸ್ವಾತಂತ್ರ್ಯೋತ್ತರ ಗೋವಾದ ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಒಟ್ಟಾರೆಯಾಗಿ, ಚಿತ್ರವು ಚಿತ್ರವು ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಚಿತ್ರವು ಭಾರತೀಯ ಮಾರುಕಟ್ಟೆಯಲ್ಲಿ ₹250 ಕೋಟಿ ನಿವ್ವಳ ಗಳಿಕೆಯ ಮೈಲಿಗಲ್ಲು ತಲುಪುವತ್ತ ಮುನ್ನುಗ್ಗುತ್ತಿದೆ.