Bigg Boss Telugu 10: ನಟ ನಾಗಾರ್ಜುನ ನಡೆಸಿಕೊಡುವ ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಚೈತ್ರಾ ರೈ ಎಂಟ್ರಿ!

ಚೈತ್ರಾ ರೈ ಅವರು ಮೂಲತಃ ಕನ್ನಡದವರಾಗಿದ್ದು, ತೆಲುಗು ಟೆಲಿವಿಷನ್ ಲೋಕದಲ್ಲಿಯೂ ತಮ್ಮ ಅಭಿನಯದ ಮೂಲಕ ಸಖತ್ ಹೆಸರು ಮಾಡಿದ್ದಾರೆ.
Chaitra Rai
ಚೈತ್ರಾ ರೈ
Updated on

ತೆಲುಗಿನ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ಸ್ಟಾರ್ ಮಾ ಚಾನೆಲ್‌ನ ಬಿಗ್ ಬಾಸ್ ತೆಲುಗು ಸೀಸನ್ 10 ಆರಂಭವಾಗಿದೆ. ಕನ್ನಡದ ನಟಿ ಚೈತ್ರಾ ರೈ ಆರನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.

ಚೈತ್ರಾ ರೈ ಅವರು ಮೂಲತಃ ಕನ್ನಡದವರಾಗಿದ್ದು, ತೆಲುಗು ಟೆಲಿವಿಷನ್ ಲೋಕದಲ್ಲಿಯೂ ತಮ್ಮ ಅಭಿನಯದ ಮೂಲಕ ಸಖತ್ ಹೆಸರು ಮಾಡಿದ್ದಾರೆ. ಇವರು ತೆಲುಗಿನ ಜನಪ್ರಿಯ ಧಾರಾವಾಹಿ 'ಅತ್ತರಿಂಟ್ಲೋ ಅಕ್ಕಚೆಲ್ಲೆಲ್ಲು' (Attarintlo Akkachellellu) ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಕನ್ನಡಿಗರಿಗೂ ಹಾಗೂ ತೆಲುಗು ವೀಕ್ಷಕರಿಗೂ ಚಿರಪರಿಚಿತರಾಗಿದ್ದಾರೆ.

ಕನ್ನಡ, ತೆಲುಗು ಭಾಷೆಯಲ್ಲಿ ಚೈತ್ರಾ ಗುರುತಿಸಿಕೊಂಡಿರುವ ನಟಿ. ಈಗಲೂ ಕನ್ನಡಕ್ಕಿಂತ ಹೆಚ್ಚು ತೆಲುಗಿನಲ್ಲೇ ಇವರು ಬ್ಯುಸಿಯಾಗಿದ್ದಾರೆ. ಬೆಂಗಳೂರು, ಹೈದ್ರಾಬಾದ್‌ ಎರಡೂ ಪ್ರದೇಶಗಳಲ್ಲೂ ಚೈತ್ರಾ ಗೂಡು ಕಟ್ಟಿಕೊಂಡಿದ್ದಾರೆ.

Chaitra Rai
Bigg Boss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ!

ಇನ್ನೂ ಕನ್ನಡದ ‘ಕುಸುಮಾಂಜಲಿ,’ ‘ಬೊಂಬೆಯಾಟವಯ್ಯಾ,’ ‘ಯುಗಾದಿ’, ‘ಗೆಜ್ಜೆಪೂಜೆ’, ‘ನಾಗಮಣಿ’, ‘ರಾಧಾ ಕಲ್ಯಾಣ’ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಚೈತ್ರಾ ರೈ ಅಭಿನಯಿಸಿದ್ದಾರೆ. ಆದ್ರೆ 'ರಾಧಾ ಕಲ್ಯಾಣ' ಧಾರಾವಾಹಿಯ ವಿಶಾಖ ಪಾತ್ರ ವೀಕ್ಷಕರ ಮನಸ್ಸಲ್ಲಿ ಅಚ್ಚೊತ್ತಿದೆ. ಈ ಪಾತ್ರ ನೆಗೆಟಿವ್‌ ಆಗಿತ್ತು. ತಂಗಿ ರಾಧಾಗೆ ಕೆಟ್ಟದನ್ನ ಬಯಸುವ ವಿಶಾಖ ಪಾತ್ರ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com