Toxic Box Office Collection: ಬಾಕ್ಸ್ ಆಫೀಸ್‌ನಲ್ಲಿ ಮಂಕಾದ ಟಾಕ್ಸಿಕ್; 14ನೇ ದಿನದ ಗಳಿಕೆ ಎಷ್ಟು?

ಮೊದಲ ವಾರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್, 14ನೇ ದಿನದಂದು ಅತಿ ಕಡಿಮೆ ಗಳಿಕೆ ದಾಖಲಿಸಿದೆ.
Toxic Box Office Collection: Yash Starrer Keeps The Big-Screen Run Alive
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ನಟ ಯಶ್
Updated on

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ 15ನೇ ದಿನವಾದ ಬುಧವಾರವೂ ಥಿಯೇಟ್ರಿಕಲ್ ಪ್ರದರ್ಶನ ಮುಂದುವರೆಸಿದೆ. ಆದರೆ ಟಾಕ್ಸಿಕ್ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಸಿನಿಮಾ ಭರ್ಜರಿ ಓಪನಿಂಗ್ ಪಡೆದರೂ, ಬಳಿಕ ಮಿಶ್ರ ಪ್ರತಿಕ್ರಿಯೆಯಿಂದ ಕಲೆಕ್ಷನಲ್ಲಿ ಕುಸಿತವಾಗಿದೆ.

ಮೊದಲ ವಾರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್, 14ನೇ ದಿನದಂದು ಅತಿ ಕಡಿಮೆ ಗಳಿಕೆ ದಾಖಲಿಸಿದೆ.

ಟಾಕ್ಸಿಕ್ ಮಂಗಳವಾರ(14ನೇ ದಿನ) ಭಾರತದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೇವಲ 0.73 ಕೋಟಿ(ನೆಟ್) ಕಲೆಕ್ಷನ್ ಮಾಡಿದೆ. ಈ ಮೂಲಕ ದೇಶಾದ್ಯಂತ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 247.23 ಕೋಟಿ ರೂ. ತಲುಪಿದೆ.

Toxic Box Office Collection: Yash Starrer Keeps The Big-Screen Run Alive
'ಚಿಂತೆ ಮಾಡುತ್ತ ಕೂರಬೇಡಿ'; ಟಾಕ್ಸಿಕ್ ಸೋಲು ಒಪ್ಪಿಕೊಂಡ ಯಶ್‌: ಆಪ್ತನ ಬಳಿ ರಾಕಿಂಗ್ ಸ್ಟಾರ್ ಹೇಳಿದ್ದೇನು?

14ನೇ ದಿನ ದೇಶಾದ್ಯಂತ ಒಟ್ಟು 1,290 ಶೋಗಳು ನಡೆದಿದ್ದು, ಕೇವಲ ಶೇ. 18.7 ರಷ್ಟು ಆಸನಗಳು ಮಾತ್ರ ಭರ್ತಿಯಾಗಿದ್ದವು.

ಭಾಷಾವಾರು ಗಳಿಕೆ (Day 14)

ಕನ್ನಡ ಆವೃತ್ತಿ: 603 ಶೋಗಳಿಂದ ₹0.48 ಕೋಟಿ (ಶೇ. 15 ಆಕ್ಯುಪೆನ್ಸಿ)

ಹಿಂದಿ ಆವೃತ್ತಿ: 687 ಶೋಗಳಿಂದ ₹0.25 ಕೋಟಿ (ಶೇ. 22 ಆಕ್ಯುಪೆನ್ಸಿ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com