ನಟ ಜಗ್ಗೇಶ್​​ ಕೈಗೆ ದುಬಾರಿ ವಾಚ್ ಗಿಫ್ಟ್ ನೀಡಿದ ಶಿವರಾಜ್ ಕುಮಾರ್- ಗೀತಾ ದಂಪತಿ! ಇದರ ಬೆಲೆ ಎಷ್ಟು ಗೊತ್ತಾ?

ಇತ್ತೀಚಿಗೆ ಶಿವರಾಜ್ ಕುಮಾರ್ ಮನೆಗೆ ತೆರಳಿದ ಜಗ್ಗೇಶ್ ಅವರು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಜಗ್ಗೇಶ್ ಕೈಗೆ ದುಬಾರಿ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ.
Expensive Watch
ಜಗ್ಗೇಶ್ ಗೆ ಗಿಫ್ಟ್ ನೀಡಿದ ವಾಚ್ ಚಿತ್ರ
Updated on

ಸಾಂಡಲ್ ವುಡ್ ನ ಹಿರಿಯ ನಟರಾದ ಶಿವರಾಜ್ ಕುಮಾರ್ ಹಾಗೂ ಜಗ್ಗೇಶ್ ನಡುವಿನ ಆತ್ಮೀಯತೆಗೆ ಸಾಕ್ಷಿಯಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇತ್ತೀಚಿಗೆ ಶಿವರಾಜ್ ಕುಮಾರ್ ಮನೆಗೆ ತೆರಳಿದ ಜಗ್ಗೇಶ್ ಅವರು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಜಗ್ಗೇಶ್ ಕೈಗೆ ದುಬಾರಿ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ. ಈ ವಾಚ್ ನ ಫೋಟೋವನ್ನು ಜಗ್ಗೇಶ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಅನೇಕರು ಶಿವಣ್ಣನನ್ನು ಹಿರಿಯ ಅಣ್ಣನಂತೆ ಭಾವಿಸುತ್ತಾರೆ. ಅದೇ ರೀತಿಯಲ್ಲಿ ಜಗ್ಗೇಶ್ ಅವರು ರಕ್ಷಾಬಂಧನವನ್ನು ಶಿವರಾಜ್ ಕುಮಾರ್ ಅವರಿಗೆ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಕ್ಕ ಅವರು 2.60 ಲಕ್ಷ ರೂ. ಬೆಲೆಯ ಐಷಾರಾಮಿ ವರ್ಸಾಶೆಯ ಗ್ರೆಸಾ ರಿಯಾಕ್ಷನ್ ವಾಚನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋವನ್ನು ಜಗ್ಗೇಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶಿವರಾಜ್ ಕುಮಾರ್ ನಡುವಿನ ನಾಲ್ಕು ದಶಗಳ ಆತ್ಮೀಯತೆ ಕುರಿತು ಬರೆದುಕೊಂಡಿದ್ದಾರೆ.

ಇಂದು ನನ್ನ ನಲ್ಮೆಯ ಸಹೋದರ ಶಿವರಾಜ್ ಕುಮಾರ್ ರವರ ಮನೆಗೆ ನನ್ನ ಆತ್ಮೀಯ ಮಿತ್ರ ಶ್ರೀನಿಧಿ ರವರೊಂದಿಗೆ ತೆರಳಿ ಅರ್ಧಘಂಟೆ ಕಾಲಕಳೆದು ಬಂದೆ, 40ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗೆ ಉಳಿದಿದೆ. ಅವರ ಶ್ರೀಮತಿ ಗೀತ ಮನೆಗೆ ಬಂದ ಅಣ್ಣನಂತೆ ತಮ್ಮ ಮಮತೆ ನನಗೆ ವ್ಯೆಕ್ತಪಡಿಸಿ ಕೈಗಡಿಯಾರ ಕೊಡಿಸಿದ್ದು ಕಂಡು ಭಾವುಕನಾದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ಪ್ರೀತಿಯ ರಾಜಣ್ಣ ಅವರ ಸರ್ವಗುಣ ಮಗನಿಗೆ ಧಾರೆ ಎರೆದು ಹೋಗಿದ್ದಾರೆ. ರಾಜಣ್ಣನ ಜೊತೆ ಕೂತ ದಿನಗಳು ಮನಸ್ಸಿನಲ್ಲಿ ತರಂಗದಂತೆ ಮರುಕಳಿಸಿದವು, ಅವರ ಕುಟುಂಬಕ್ಕೆ ಸಂತೋಷ ಸಡಗರ ಚಿರಾಸ್ಥಿಯಂತೆ ನಿತ್ಯ ನಿರಂತರ ರಾಯರಕೃಪೆಯಿಂದ ಸಿಗಲಿ’ ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.

Expensive Watch
ಶಿವಣ್ಣ ಇನ್ಮುಂದೆ ಕೇವಲ ಶಿವರಾಜ್‌ಕುಮಾರ್ ಅಲ್ಲ: ವೋಟರ್ ಐಡಿಯಲ್ಲಿ ಹೆಸರು ತಿದ್ದುಪಡಿಗೆ ಮುಂದಾದ ಹ್ಯಾಟ್ರಿಕ್ ಹೀರೋ! ಶಿವಣ್ಣನ ಹೊಸ ಹೆಸರೇನು ಗೊತ್ತಾ?

ಜಗ್ಗೇಶ್ ಮತ್ತು ಶಿವರಾಜ್ ಕುಮಾರ್ ಅವರದ್ದು ದಶಕಗಳ ಅನುಬಂಧ ಮತ್ತು ಸ್ನೇಹ. ಜಗ್ಗೇಶ್ ಅವರು ಹಲವು ವೇದಿಕೆಗಳನ್ನು ಶಿವಣ್ಣನನ್ನು ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಜಗ್ಗೇಶ್ ಅವರು, ಡಾ ರಾಜ್​​ಕುಮಾರ್ ಅವರ ಅಪ್ಪಟ ಅಭಿಮಾನಿಯೂ ಆಗಿರುವ ಜಗ್ಗೇಶ್ ಅವರು ಅವರೊಟ್ಟಿಗೆ ತಾವು ಕಳೆದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಿವಣ್ಣನ ಬಗ್ಗೆ ಅವರ ಉದಾರತೆಯ ಬಗ್ಗೆಯೂ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com