ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆ: ಹಿರಿಯ ನಟ ಅನಂತ್ ನಾಗ್ ಹೇಳಿದ್ದೇನು?

ಬಹಳ ವರ್ಷಗಳಿಂದ ಪ್ರಧಾನಿ ಮೋದಿ ಅವರನ್ನು ಫಾಲೋ ಮಾಡುತ್ತಾ ಬಂದಿದ್ದು, ಪ್ರಶಸ್ತಿ ವಿಚಾರವನ್ನು ಪ್ರಧಾನಿಗಳೇ ಟ್ವೀಟ್‌ ಮಾಡಿದ್ದು ಬಹಳ ವಿಶೇಷ ಎನ್ನುತ್ತಾರೆ.
Anant nag
ಅನಂತ್ ನಾಗ್
Updated on

ಬೆಂಗಳೂರು: ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಹಿರಿಯ ನಟ ಅನಂತ್‌ ನಾಗ್‌ ಪ್ರತಿಕ್ರಿಯಿಸಿದ್ದಾರೆ. ಫಾಲ್ಕೆ ಪ್ರಶಸ್ತಿಯನ್ನು ನಾಡಿನ ಜನತೆ ಮತ್ತು ಕರ್ನಾಟಕಕ್ಕೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಕನ್ನಡದ ಸುದ್ದಿವಾಹಿನಿಗಳೊಂದಿಗೆ ಮಾತನಾಡಿದ ಅನಂತ್ ನಾಗ್, ಪ್ರಶಸ್ತಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದು, ಬಹಳ ಖುಷಿ ಎನಿಸಿತು ಎಂದು ಹೇಳಿಕೊಂಡಿದ್ದಾರೆ.

ಬಹಳ ವರ್ಷಗಳಿಂದ ಪ್ರಧಾನಿ ಮೋದಿ ಅವರನ್ನು ಫಾಲೋ ಮಾಡುತ್ತಾ ಬಂದಿದ್ದು, ಪ್ರಶಸ್ತಿ ವಿಚಾರವನ್ನು ಪ್ರಧಾನಿಗಳೇ ಟ್ವೀಟ್‌ ಮಾಡಿದ್ದು ಬಹಳ ವಿಶೇಷ ಎನ್ನುತ್ತಾರೆ.

Anant nag
ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ಸುಮಾರು 21 ವರ್ಷ ನಾನು ರಾಜಕೀಯ ಪಕ್ಷದಲ್ಲಿದ್ದೆ. ಚುನಾವಣೆಯಲ್ಲಿ ಸೋತ ನಂತರ ಪಕ್ಷ ಬಿಟ್ಟೆ. ಜನತಾ ದಳದಲ್ಲೂ ಇದ್ದೆ. ಅದೇ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದರು. ಅಲ್ಲಿಂದಲೂ ನಾನು ಅವರನ್ನು ಫಾಲೋ ಮಾಡಿದ್ದೇನೆ. ಈ ರೀತಿಯ ವ್ಯಕ್ತಿ ಯಾವತ್ತೂ ರಾಜಕಾರಣಕ್ಕೆ ಸಿಕ್ಕಿರಲಿಲ್ಲ. ಮೋದಿ ಅವರನ್ನು ನಾನು ಮೆಚ್ಚುತ್ತೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com