ಚಿತ್ರರಂಗಕ್ಕೆ ಅನಂತ್ ನಾಗ್ ಗುಡ್ ಬೈ! ನಟನೆಯಿಂದ ದೂರ ಉಳಿದಿರುವ ಬಗ್ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಹೇಳಿದ್ದೇನು?

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಅನಂತ್ ನಾಗ್, ಚಿತ್ರರಂಗದಲ್ಲಿ ಕಥೆಗಳ ಗುಣಮಟ್ಟ ಕುಸಿಯುತ್ತಿರುವುದು, ಸೃಜನಶೀಲ ತೃಪ್ತಿಯ ಕೊರತೆ ಮತ್ತು ಇಂದಿನ ಸಿನಿಮಾಗಳ ಅತಿಯಾದ ವಾಣಿಜ್ಯೀಕರಣದ ಕಾರಣದಿಂದಾಗಿ ಮತ್ತೆ ನಟನೆಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Anant Nag
ಅನಂತ್ ನಾಗ್Online Desk
Updated on

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಪದ್ಮಭೂಷಣ ಅನಂತ್ ನಾಗ್ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಈ ವಿಷಯ ಹಂಚಿಕೊಂಡಿರುವ 78 ವರ್ಷದ ಹಿರಿಯ ನಟ, ತಮ್ಮ ನಿವೃತ್ತಿಯ ನಿರ್ಧಾರಕ್ಕೂ ತಮ್ಮ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ, ದಶಕಗಳ ಕಾಲ ತಮ್ಮ ನೈಜ ಅಭಿನಯದ ಮೂಲಕ ಜನಮನ ಗೆದ್ದಿದ್ದ ಈ ಅದ್ಭುತ ಪ್ರತಿಭೆ, ಇದ್ದಕ್ಕಿದ್ದಂತೆ ನಟನೆಯಿಂದ ದೂರವಾಗಲು ಕಾರಣವೇನು? ಆ ಕುರಿತ ವರದಿ ಇಲ್ಲಿದೆ:

ಅನಂತ್ ನಾಗ್ ಚಿತ್ರರಂಗದಿಂದ ದೂರವಾಗಿದ್ಯಾಕೆ?

ಕಳದೆ ಮೂರು ನಾಲ್ಕು ವರ್ಷಗಳಿಂದ ಅನಂತ್ ನಾಗ್ ಅವರು ಚಿತ್ರರಂಗದಿಂದ ದೂರ ಇರುವುದನ್ನು ನೋಡಿ ಅನೇಕರು ಅವರಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದುಕೊಂಡಿದ್ದರು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಅವರು, "ನನ್ನ ನಿರ್ಧಾರಕ್ಕೂ ನನ್ನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ, ನಾನು ಆರೋಗ್ಯವಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಇಂದಿನ ಸಿನಿಮಾಗಳು ಕೇವಲ ಕೋಟಿಗಟ್ಟಲೆ ಬಾಕ್ಸ್ ಆಫೀಸ್ ಕಲೆಕ್ಷನ್, ಕೋಟಿಗಳ ಲೆಕ್ಕಾಚಾರ ಮತ್ತು ಬಜೆಟ್ ಮೇಲಷ್ಟೇ ಗಮನ ಹರಿಸುತ್ತಿವೆಯೇ ಹೊರತು ಕಥೆಯ ಆಳಕ್ಕಲ್ಲ ಎಂದು ಬೇಸರ ವ್ಯಕ್ತಪಡಿಸಿ, "ಒಂದು ಕಾಲದಲ್ಲಿ ಸಿನಿಮಾಗಳು ಜ್ಞಾನ, ಶಿಕ್ಷಣ ಮತ್ತು ಮನರಂಜನೆಯ ಸಮತೋಲನವಾಗಿದ್ದವು, ಆದರೆ ಈಗ ಆ ಮೌಲ್ಯಗಳು ಕಣ್ಮರೆಯಾಗಿದ್ದು, ಈ ರೀತಿಯ ಕೇವಲ ಹಣದ ಬೆನ್ನಟ್ಟುವ ವಾತಾವರಣ ತಮಗೆ ಇಷ್ಟವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದುವರೆದು, 2021 ಮತ್ತು 2022 ರ ಅವಧಿಯಲ್ಲಿ ಅನಂತ್ ನಾಗ್ ನಟಿಸಿದ ಐದೂ ಸಿನಿಮಾಗಳು ವಾಣಿಜ್ಯಿಕವಾಗಿ ಸೋತವು. ಆ ಸಮಯದಲ್ಲಿ ಅವರು, "ಇಷ್ಟೇ ಸಾಕು, ಇನ್ಮುಂದೆ ನಾನು ನಟಿಸುವುದಿಲ್ಲ" ಎಂದು ತಾವಾಗಿಯೇ ಚಿತ್ರರಂಗದಿಂದ ದೂರ ಸರಿದರು ಎನ್ನಲಾಗಿದೆ. ಸದ್ಯ ಕಳೆದ 3 ವರ್ಷಗಳಿಂದ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

Anant Nag
'ಪ್ರಶಸ್ತಿಯನ್ನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ': ಹಿರಿಯ ನಟ ಅನಂತ್ ನಾಗ್

ಏತನ್ಮಧ್ಯೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರು 'ಅಂಕುರ್' ನಂತಹ ಕಲಾತ್ಮಕ ಸಿನಿಮಾಗಳಿಂದ ಹಿಡಿದು 'ಕೆಜಿಎಫ್: ಚಾಪ್ಟರ್ 1' ನಂತಹ ಬ್ಲಾಕ್‌ಬಸ್ಟರ್ ವಾಣಿಜ್ಯ ಸಿನಿಮಾಗಳವರೆಗೆ ತಮ್ಮ ಅದ್ಭುತ ನಟನೆಯಿಂದ ಮನೆಮಾತಾಗಿದ್ದಾರೆ. ಜೊತೆಗೆ, ಅವರ 50 ವರ್ಷಗಳ ಸುದೀರ್ಘ ಸಿನಿ ಪಯಣವನ್ನು ಗೌರವಿಸಿ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿದ್ದು, ಇದನ್ನು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

Anant Nag
ಸಜ್ಜನ-ಸರಳ ವ್ಯಕ್ತಿತ್ವದ ಅನಂತ್ ನಾಗ್ ಮೇಲೆ ಕೊಲೆ ಯತ್ನ: ಮಗಳನ್ನ ಶಾಲೆಗೆ ಕರೆದೊಯ್ಯುತ್ತಿದ್ದಾಗಲೇ ದಾಳಿ; ಅಂದು ನಡೆದ ಘಟನೆಗೆ ಬೆಚ್ಚಿ ಬಿದ್ದ ಕುಟುಂಬ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com