ಚಳಿ ಚಳಿ ತಾಳೆನು ಈ ಚಳಿಯಾ! ಹಿರಿಯ ನಟಿ ಅಂಬಿಕಾ ವಿರುದ್ಧ 46 ಕೋಟಿ ರೂ. ಮೌಲ್ಯದ ಚೆಕ್ ವಂಚನೆ ಪ್ರಕರಣ, ದೂರು ದಾಖಲು

ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇರಿಸಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಗಮನಕ್ಕೆ ಬಾರದೆ ತೆಗೆದುಕೊಂಡು, ಸುಮಾರು 46 ಕೋಟಿ ರೂ. ಪಡೆಯಲು ಪ್ರಯತ್ನಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Veteran actor Radha and ambhika
ಸಹೋದರಿ ರಾಧಾ ಜೊತೆಗೆ ಅಂಬಿಕಾ
Updated on

ಚೆನ್ನೈ: ಚಕ್ರವ್ಯೂಹ ಸಿನಿಮಾದಲ್ಲಿ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಜೊತೆಗೆ ಚಳಿ ಚಳಿ ತಾಳೆನು ಈ ಚಳಿಯಾ ಎಂದು ಮೈಚಳಿ ಬಿಟ್ಟು ಕುಣಿಯುವ ಮೂಲಕ ಇಂದಿಗೂ ಕನ್ನಡಿಗರ ಮನದಲ್ಲಿ ನೆಲೆಸಿರುವ ಹಿರಿಯ ನಟಿ ಅಂಬಿಕಾ ವಿರುದ್ಧ ಚೆಕ್ ವಂಚನೆ ಪ್ರಕರಣ ದಾಖಲಾಗಿದೆ. ಅವರ ಸಹೋದರಿ ಹಾಗೂ ಹಿರಿಯ ನಟಿ ಆಗಿರುವ ರಾಧಾ ಅವರೇ ದೂರು ದಾಖಲಿಸಿದ್ದಾರೆ.

ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇರಿಸಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಗಮನಕ್ಕೆ ಬಾರದೆ ತೆಗೆದುಕೊಂಡು, ಸುಮಾರು 46 ಕೋಟಿ ರೂ. ಪಡೆಯಲು ಪ್ರಯತ್ನಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಂಬಿಕಾ ಮತ್ತು ಅವರ ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ಅವರ ಹೆಸರನ್ನು ಉಲ್ಲೇಖಿಸಿರುವ ಈ ದೂರನ್ನು ಸೆಪ್ಟೆಂಬರ್ 21 ರಂದು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ.

ರಾಧಾ ಅವರ ದೂರಿನ ಪ್ರಕಾರ, ತಾನು ವ್ಯವಹಾರ ಸಂಬಂಧಿತ ವೆಚ್ಚಗಳಿಗಾಗಿ ಐಡಿಬಿಐ (IDBI) ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆಯನ್ನು (current account) ಹೊಂದಿದ್ದು, ಚೆನ್ನೈ ನಿವಾಸದಲ್ಲಿರುವ ತಮ್ಮ ಕೊಠಡಿಯಲ್ಲಿ ಸಹಿ ಮಾಡಿದ ಕೆಲವು ಖಾಲಿ ಚೆಕ್‌ಗಳನ್ನು ಇರಿಸಿದ್ದೆ. ಪ್ರಯಾಣದಲ್ಲಿರುವಾಗ ವೇತನ, ಉಪಯುಕ್ತ ಸೇವೆಗಳ ಬಿಲ್‌ಗಳು, ತೆರಿಗೆಗಳು ಮತ್ತು ತೋಟದ ನಿರ್ವಹಣೆಯಂತಹ ದಿನನಿತ್ಯದ ಪಾವತಿಗಳಿಗಾಗಿ ಈ ಚೆಕ್‌ಗಳನ್ನು ಇರಿಸಲಾಗಿತ್ತು.

ಆರಂಭದಲ್ಲಿ 'ARS ಗಾರ್ಡನ್ ಸ್ಟುಡಿಯೋ' ಹೆಸರಿನಲ್ಲಿ ಈ ಖಾತೆಯನ್ನು ನಿರ್ವಹಿಸಲಾಗುತ್ತಿತ್ತು. ಜನವರಿ 2025 ರಲ್ಲಿ ವ್ಯವಹಾರದ ಹೆಸರನ್ನು 'RR ಗಾರ್ಡನ್ಸ್' ಎಂದು ಬದಲಾಯಿಸಿದ ನಂತರ, ಅವರಿಗೆ ಹೊಸ ಚೆಕ್ ಬುಕ್ ಸಿಕ್ಕಿತು. ಹಾಗಾಗಿ ಹಿಂದಿನ ಚೆಕ್ ಬುಕ್ ಬಳಕೆಯನ್ನು ನಿಲ್ಲಿಸಿದ್ದೆ. ಮನೆಯಲ್ಲಿದ್ದ ಹಳೆಯ ಚೆಕ್‌ಗಳ ಬಗ್ಗೆ ತಾವು ಮರೆತಿದ್ದಾಗಿ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಬ್ಯಾಂಕ್ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದು,. ಹಳೆಯ ಚೆಕ್‌ಗಳ ಪೈಕಿ ಐದು ಚೆಕ್‌ಗಳನ್ನು ಅಂಬಿಕಾ ಅವರ ಹೆಸರಿನಲ್ಲಿ ಒಟ್ಟು 46 ಕೋಟಿ ರೂ. ಪಡೆಯಲು ಬ್ಯಾಂಕ್‌ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂಬಿಕಾ ಅವರಿಗೆ ತಾವು ಯಾವುದೇ ಚೆಕ್‌ಗಳನ್ನು ನೀಡಿರಲಿಲ್ಲ ಅಥವಾ ಅಂತಹ ಪಾವತಿಗಳಿಗೆ ಕಾರಣವಾಗುವ ಯಾವುದೇ ಆರ್ಥಿಕ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿರಲಿಲ್ಲ ಎಂದು ಹೇಳಿರುವ ರಾಧಾ, ತಕ್ಷಣವೇ ಪಾವತಿಯನ್ನು ತಡೆಯುವಂತೆ ಬ್ಯಾಂಕ್‌ಗೆ ಸೂಚಿಸಿದ್ದಾರೆ. ಆ ಚೆಕ್‌ಗಳನ್ನು ತಮ್ಮ ಸಹೋದರ ಮಲ್ಲಿಕಾರ್ಜುನ ಭರ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾನೂನುಬಾಹಿರ ಆರ್ಥಿಕ ಲಾಭಕ್ಕಾಗಿ ಆ ದಾಖಲೆಗಳನ್ನು ಬಳಸಲು ಅಂಬಿಕಾ ಮತ್ತು ಮಲ್ಲಿಕಾರ್ಜುನ ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ತಾವು ಚೆನ್ನೈನಿಂದ ಹೊರಗಿದ್ದಾಗ ತಮ್ಮ ಕೊಠಡಿಯಿಂದ ಆ ಚೆಕ್‌ಗಳನ್ನು ಪಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕುಟುಂಬದ ಆಸ್ತಿ ವಿಚಾರದಲ್ಲಿಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದೂವರೆ ವರ್ಷದಿಂದ ತನ್ನ ಆಸ್ತಿಯನ್ನು ಪ್ರವೇಶಿಸದಂತೆ ತಡೆಯಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ. ಅಲ್ಲಿ ಬೆಲೆಬಾಳುವ ವಸ್ತುಗಳು, ಆಭರಣಗಳು, ಆಸ್ತಿ ದಾಖಲೆಗಳು ಮತ್ತು ಇತರ ದಾಖಲೆಗಳನ್ನು ಇಡಲಾಗಿದೆ ಎಂದು ಅವರು ಹೇಳಿದ್ದಾರೆ. ಆರೋಪಗಳ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದರೆ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಧಾ ಪೊಲೀಸರಿಗೆ ಸೂಚಿಸಿದ್ದಾರೆ.

Veteran actor Radha and ambhika
'ವಿಜಯ್ ಜೊತೆಗೆ ತ್ರಿಶಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು'; ನಾನೇನಾದರೂ ಅವರ ಸ್ಥಾನದಲ್ಲಿದ್ದರೆ...: ಹಿರಿಯ ನಟಿ ಅಂಬಿಕಾ

ರಾಧಾ 1981 ರಲ್ಲಿ ಭಾರತಿರಾಜ ಅವರ ಅಲೈಗಲ್ ಒಯಿವತಿಲ್ಲೈ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು 1980 ರ ದಶಕದಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿದ್ದರು. ಅವರು ಕಮಲ್ ಹಾಸನ್, ರಜನಿಕಾಂತ್, ಶಿವಾಜಿ ಗಣೇಶನ್ ಮತ್ತು ಕಾರ್ತಿಕ್ ಮತ್ತಿತರ ಸ್ಟಾರ್ ಗಳೊಂದಿಗೆ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಮುತಾಲ್ ಮರಿಯಾತೈ, ಅಮ್ಮನ್ ಕೋವಿಲ್ ಕಿಜಕಲೆ, ರಾಜಾಧಿ ರಾಜ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದು, ಇರಕಲ್ ಅವರ ಗಮನಾರ್ಹ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ.

ರಾಧಾ ಅವರ ಅಕ್ಕ ಅಂಬಿಕಾ ಮಲಯಾಳಂ, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಹೆಸರುವಾಸಿಯಾಗಿದ್ದರು. ಕನ್ನಡದಲ್ಲಿ ಅಂಬರೀಶ್, ರವಿಚಂದ್ರನ್, ಸುದೀಪ್ ಮತ್ತಿತರ ನಟರ ಜೊತೆಗೆ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com