

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮತ್ತೊಂದು ದೊಡ್ಡ ಉಲ್ಟಾ-ಪಲ್ಟಾ ನಡೆದಿದೆ. ಪ್ರೇಕ್ಷಕರು ಹಾಗೂ ಮನೆಯ ಸದಸ್ಯರು ನಿರೀಕ್ಷಿಸದ ದೊಡ್ಡ ತಿರುವೊಂದರಲ್ಲಿ, ಕಿರುತೆರೆಯ ಜನಪ್ರಿಯ ನಟ ಹಾಗೂ ಕುಸ್ತಿಪಟು ತಾಂಡವ್ ರಾಮ್ ಅವರು ಬಿಗ್ ಬಾಸ್ ಮನೆಯಿಂದ ಮಿಡ್-ವೀಕ್ ಎಲಿಮಿನೇಷನ್ ಮೂಲಕ ಹೊರಬಿದ್ದಿದ್ದಾರೆ.
ಟಾಸ್ಕ್ ಗೆದ್ದಿದ್ದ ನಾಲ್ವರು ಸ್ಪರ್ಧಿಗಳು ಆಸಿಯಾ, ಕಾವ್ಯಾ, ಧನುಷ್ ಹಾಗೂ ಕಿರಣ್ ಶಾಸ್ತ್ರಿ ಜಗದೀಶ್, ಲಿಖಿತ್, ತಾಂಡವ್ ಹಾಗೂ ಸೌಂದರ್ಯ ಅವರ ಶೇ.50 ವೋಟನ್ನು ಪಡೆದು ಅಡ್ವಂಟೇಜ್ ಪಡೆದುಕೊಂಡಿದ್ದರು.
ಇದರಂತೆ ಜಗದೀಶ್, ಲಿಖಿತ್, ತಾಂಡವ್ ಹಾಗೂ ಸೌಂದರ್ಯ ಅವರ ಪೈಕಿ ಬಿಗ್ ಬಾಸ್ ಮನೆಯಿಂದ ತಾಂಡವ್ ಅವರು ಆಚೆ ಬಂದಿದ್ದಾರೆ. ಆ ಮೂಲಕ ಶಾಕಿಂಗ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.
ತಾಂಡವ್ ಅವರು ಹೋಗುತ್ತಿದ್ದಂತೆ ಅವರ ಆಪ್ತ ಸ್ನೇಹಿತ ಗಗನ್ ಸೇರಿದಂತೆ ಮನೆಯ ಇತರೆ ಸ್ನೇಹಿತರು ಆಘಾತಗೊಂಡು ಕಣ್ಣೀರಿಟ್ಟಿದ್ದಾರೆ.
ತಾಂಡವ್ ಅವರ ಅನಿರೀಕ್ಷಿತ ಎಲಿಮಿನೇಷನ್‌ಗೆ ಇಡೀ ಮನೆಯೇ ಕಣ್ಣೀರಿಟ್ಟಿದ್ದಾರೆ. ಗಗನ್ ʼಬಿಗ್ ಬಾಸ್ʼ ಇದನ್ನು ದಯವಿಟ್ಟು ಚೇಂಜ್ ಮಾಡಿ ಎಂದು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.
ಈ ಹಠಾತ್ ನಿರ್ಗಮನದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೈಹಿಕವಾಗಿ ಬಲಿಷ್ಠವಾಗಿದ್ದ ಮತ್ತು ಪ್ರಾಮಾಣಿಕವಾಗಿ ಆಡುತ್ತಿದ್ದ ಒಬ್ಬ ಉತ್ತಮ ಆಟಗಾರನನ್ನು ಇಷ್ಟು ಬೇಗ, ಅದೂ ಮಿಡ್-ವೀಕ್ ಟ್ವಿಸ್ಟ್ ಮೂಲಕ ಹೊರಹಾಕಿರುವುದು "ಅನ್ಯಾಯ" ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ತಾಂಡವ್ ಅವರು ಪ್ರಬಲ ಸ್ಪರ್ಧಿಯಾಗಿದ್ದು, ಮತ್ತೆ ಮನೆಗೆ ಬರುತ್ತಾರೆ ಎನ್ನುವ ನಿರೀಕ್ಷೆಯೂ ವೀಕ್ಷಕರಲ್ಲಿ ಮೂಡತೊಡಗಿದೆ.