ಪಾರಿವಾಳಗಳ ಒಳಕಿವಿಯಲ್ಲಿ 'ಚುಂಬಕ ಸಂವೇದಕ': ಸಂಶೋಧನೆಗಳಿಂದ ಹೊಸ ಸುಳಿವು ಪತ್ತೆ (ವಿಜ್ಞಾನ ವಿಶೇಷ)

ಚುಂಬಕ ಸಂವೇದನೆಯ ಬಗ್ಗೆ ವಿಜ್ಞಾನಿಗಳಿಗೆ ಅಚ್ಚರಿಯಾಗುವಷ್ಟು ಕಡಿಮೆ ಮಾಹಿತಿ ಇದೆ. ಕಾರಣ, ಪ್ರಾಣಿಗಳು ಚುಂಬಕ ಕ್ಷೇತ್ರಗಳನ್ನು ಹೇಗೆ ಕಂಡುಹಿಡಿಯುತ್ತವೆ?
Pigeons
ಪಾರಿವಾಳಗಳುWilliam Chen / Pexels.com
Updated on

ಚುಂಬಕ ಸಂವೇದನೆಯ ಅಸ್ತಿತ್ವವನ್ನು ಮೊದಲಿಗೆ 1882ರಲ್ಲಿ ಫ್ರೆಂಚ್ ನೈಸರ್ಗಿಕ ವಿಜ್ಞಾನಿ Camille Viguier ಅವರು ಬಯಲಿಗೆಳೆದರು. ಅನೇಕ ಪ್ರಾಣಿಗಳು, ಬಾವಲಿಗಳು, ವಲಸೆ ಹಕ್ಕಿಗಳು, ಸಮುದ್ರ ಆಮೆಗಳು ಭೂಮಿಯ ಚುಂಬಕ ಕ್ಷೇತ್ರವನ್ನು ದಿಕ್ಕುನಿರ್ಣಯಕ್ಕೆ ಬಳಸುತ್ತವೆ ಎಂಬ ಅವರ ಊಹೆ ಸರಿ ಎಂದು ಸಂಶೋಧನೆಗಳ ಮೂಲಕ ಹೊರಹೊಮ್ಮಿದೆ. ಆದರೆ, ದಶಕಗಳ ಅಧ್ಯಯನದ ನಂತರವೂ, ಚುಂಬಕ ಸಂವೇದನೆಯ ಬಗ್ಗೆ ವಿಜ್ಞಾನಿಗಳಿಗೆ ಅಚ್ಚರಿಯಾಗುವಷ್ಟು ಕಡಿಮೆ ಮಾಹಿತಿ ಇದೆ. ಕಾರಣ, ಪ್ರಾಣಿಗಳು ಚುಂಬಕ ಕ್ಷೇತ್ರಗಳನ್ನು ಹೇಗೆ ಕಂಡುಹಿಡಿಯುತ್ತವೆ? ಮೆದುಳಿನ ಯಾವ ವಲಯಗಳು ಆ ಮಾಹಿತಿಯನ್ನು ಸಂಸ್ಕರಿಸುತ್ತವೆ? ಈ ಸಂವೇದನಾ ವ್ಯವಸ್ಥೆ ದೇಹದ ಯಾವ ಭಾಗದಲ್ಲಿದೆ? ಎಂಬ ನಿಖರ ಉತ್ತರವಿಲ್ಲದ ಪ್ರಶ್ನೆಗಳು!.

Viguier, ಅವರು ನಿರ್ಭಯವಾಗಿ, ಚುಂಬಕ ಸಂವೇದನೆಯು ಒಳಕಿವಿಯಲ್ಲಿ ಉಂಟಾಗುವ ಅತಿ ಸಣ್ಣ ವಿದ್ಯುತ್ ಪ್ರವಾಹಗಳ ಮೇಲೆ ಅವಲಂಬಿತವಾಗಿರಬಹುದು ಎಂದು ಪ್ರಸ್ತಾಪಿಸಿದ್ದರು. ಈ ಕಲ್ಪನೆ ನಿರ್ಲಕ್ಷ್ಯಗೊಂಡು, ಕಾಲಕ್ರಮೇಣ ಸಂಪೂರ್ಣವಾಗಿ ಮರೆಮಾಚಲ್ಪಟ್ಟಿತು. ಆದರೆ, ನೂರಕ್ಕೂ ಹೆಚ್ಚು ವರ್ಷಗಳ ನಂತರ, Ludwig Maximilian University, (LMU) Munich,ನ ನರವಿಜ್ಞಾನಿಗಳೊಬ್ಬರ ತಂಡ ಅದನ್ನು ಪುನರುಜ್ಜೀವನಗೊಳಿಸಿದೆ. “ಪಾರಿವಾಳದ ಮೆದುಳಿನಲ್ಲಿ ಚುಂಬಕದಿಂದ ಪ್ರೇರಿತವಾದ ನರಕೋಶಗಳಲ್ಲಿ (Neural Activities) ಚಟುವಟಿಕೆಗಳ ಜಾಗತಿಕ ಪರಿಶೀಲನೆ” ಎಂಬ ಶೀರ್ಷಿಕೆಯಲ್ಲಿರುವ ಅವರ ಪ್ರಬಂಧವನ್ನು Science ಪತ್ರಿಕೆಯಲ್ಲಿ ಪ್ರಕಟಪಡಿಸಿದ್ದಾರೆ.

Pigeons
ಮಾನವ ಮೆದುಳು 'ಖಾಲಿ ಸ್ಲೇಟ್' ಅಲ್ಲ; ಜನನಕ್ಕೂ ಮುನ್ನವೇ ರೂಪುಗೊಳ್ಳುವ ಜ್ಞಾನ ರಚನೆ (ವಿಜ್ಞಾನ ವಿಶೇಷ)

ಪ್ರೊಫೆಸರ್ David Keays, ಅವರ ನೇತೃತ್ವದ ತಂಡವು ಚುಂಬಕ ಕ್ಷೇತ್ರಗಳಿಗೆ ಒಳಪಡಿಸಿದ ಪಾರಿವಾಳಗಳ ಮೆದುಳನ್ನು ಅಧ್ಯಯನ ಮಾಡಲು ನಿಷ್ಪಕ್ಷಪಾತ ವಿಧಾನವನ್ನು ಅನುಸರಿಸಿ, “ಅತ್ಯಾಧುನಿಕ ಸೂಕ್ಷ್ಮವೀಕ್ಷಣಾ ವಿಧಾನನಮಗೆ ಚುಂಬಕ ಮಾಹಿತಿಯನ್ನು ಸಂಸ್ಕರಿಸುವ ವಿಶೇಷ ವಲಯಗಳನ್ನು ಗುರುತಿಸಲು ಅನುಕೂಲ ಮಾಡಿಕೊಡುವುದರೊಂದಿಗೆ, ಮೂಲಚುಂಬಕ ಸಂವೇದಕಗಳು ̧(Primary Magnetic Sensors) ದೇಹದ ಯಾವ ಭಾಗದಲ್ಲಿ ಇರಬಹುದು ಎಂಬುದಕ್ಕೆ ಮುಖ್ಯ ಸುಳಿವನ್ನು ನೀಡಿತು ಎಂದಿದ್ದಾರೆ.”

ಇವರ ಸಂಶೋಧನಾ ವಿದ್ಯಾರ್ಥಿಗಳಾದ Grégory Nordmann ಮತ್ತು Spencer Balay, ಅವರು ಒಳಕಿವಿಗೆ ಸಂಪರ್ಕಿತವಾಗಿರುವ ಸಮತೋಲನ ಕೇಂದ್ರ (Vestibular nucleus) ಎಂಬ ಮೆದುಳಿನ ಭಾಗದಲ್ಲಿ ಬಲವಾದ ನರಚಟುವಟಿಕೆಗಳನ್ನು ಗಮನಿಸಿ, ಒಳಕಿವಿ ಕೂತ್ರೆಗಳ (Tissues) ಜನ್ಯ ವಿಶ್ಲೇಷಣೆ (Genetic Analysis) ಮಾಡುತ್ತಿದ್ದಾಗ, ಅತೀಸಂವೇದನಾಶೀಲ ವಿದ್ಯುತ್ ಸಂವೇದಕಗಳನ್ನು ̧(Highly Sensitive Electric Sensors) ಹೊಂದಿರುವ ಕೋಶಗಳನ್ನು ಪತ್ತೆಹಚ್ಚಿದರು. ಇವೇಸಮುದ್ರದಲ್ಲಿ ಜೀವಿಸುವ, ಬಲಿಷ್ಠ ದಂತಗಳುಳ್ಳ (Shork Fish) ಮೀನುಗಳು, ತಮ್ಮ ಆಹಾರವನ್ನು ಗುರುತಿಸಲು ಬಳಸುವ ಸಂವೇದಕಗಳು.

ಪಾರಿವಾಳಗಳ ಒಳಕಿವಿ
ಪಾರಿವಾಳಗಳ ಒಳಕಿವಿ

ಈ ಕೋಶಗಳು ವಿದ್ಯುತ್ಚುಂಭಕ (electromagnetic induction) ಪ್ರೇರಣೆಯ ಮೂಲಕ ಚುಂಬಕ ಕ್ಷೇತ್ರಗಳನ್ನು ಗುರುತಿಸಲು ಸಮರ್ಪಕತೆಯಿಂದ ಕೂಡಿವೆ. ಇವು ಪಾರಿವಾಳಗಳಿಗೆ ತಮ್ಮ ಮನೆಗೆ ಹಿಂತಿರುಗಿ ಹೋಗುವ ದಾರಿಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜಂಗಮವಾಣಿಗಳಿಗೆ ತಂತಿಯಿಲ್ಲದೆ ವಿದ್ಯುತ್ (Charging) ತುಂಬುವಂತೆ ಮಾಡಲು ಅನುಮತಿಸುವ ಭೌತಿಕ ತತ್ತ್ವ ಇದೇ! ಈ ಎರಡೂ ಸಂದರ್ಭಗಳಲ್ಲಿ, ಚುಂಬಕ ಸ್ಪಂದನವನ್ನು ವಿದ್ಯುತ್ (Electrical Singals)ಸಂಕೇತಗಳಾಗಿ ಪರಿವರ್ತಿಸಲಾಗುತ್ತದೆ. ಪಾರಿವಾಳದ ಸಂದರ್ಭದಲ್ಲಿ, ಇದು ಅದರ ನೈಸರ್ಗಿಕ ಜಾಗತಿಕ ಸ್ಥಾನದ ನಿರ್ಧಾರ ವ್ಯವಸ್ಥೆ (Natural GPS: Global Positioning System)ಗೆ ಶಕ್ತಿ ನೀಡುತ್ತದೆ.

ಅಂದರೆ, ಇದು ಪಾರಿವಾಳಕ್ಕೆ ‘ನೈಸರ್ಗಿಕ GPS’ ಆಗಿ ಕೆಲಸ ಮಾಡುತ್ತದೆ. ಸಂಶೋಧಕರು, ಪ್ರಕೃತಿಯಲ್ಲಿ ಇದೊಂದೇ ಚುಂಬಕ ಸಂವೇದನಾ ವಿಧಾನವಲ್ಲ ಎಂದು ಒತ್ತಿ ಹೇಳುತ್ತಾರೆ. 'ನಮ್ಮ ದತ್ತಾಂಶವು ಒಳಕಿವಿಯಲ್ಲಿ ಅಜ್ಞಾತ ದಿಕ್ಕು ಸೂಚಕ' (Dark Compass) ಇರುವುದನ್ನು ಸೂಚಿಸುತ್ತದೆ; ಕೆಲ ಇತರ ಅಧ್ಯಯನಗಳು ಹಕ್ಕಿಗಳ ಕಣ್ಣುಗಳಲ್ಲಿ ಬೆಳಕಿನ ಮೇಲೆ ಅವಲಂಬಿತವಾದ 'ಪ್ರಕಾಶ ಆಧಾರಿತ ದಿಕ್ಕು ಸೂಚಕ' (Light Compass)ದ ಅಸ್ತಿತ್ವವನ್ನೂ ಸೂಚಿಸುತ್ತವೆ,” ಎಂದು Keays ವಿವರಿಸಿದ್ದಾರೆ. ಎಲ್ಲಾ ಸಾಧ್ಯತೆಯಲ್ಲಿಯೂ, ಚುಂಬಕ ಗ್ರಹಣ ಶಕ್ತಿ (magnetoreception)ಯು ವಿಭಿನ್ನ ಜೀವಿಗಳಲ್ಲಿ ಸ್ವತಃಸಾದೃಶ್ಯವಾಗಿ ವಿಭಿನ್ನ ರೀತಿಯಲ್ಲಿ ವಿಕಾಸಗೊಂಡಿರಬಹುದು. ಈ ರಹಸ್ಯದ ಬಗ್ಗೆ ಇನ್ನೂ ಅನೇಕ ಸಂಗತಿಗಳು ಪತ್ತೆಯಾಗಬೇಕಿವೆ ಮತ್ತು ಅನಾವರಣ ಮಾಡಬೇಕಾಗಿದೆ ಎಂದು Keays ಹೇಳಿದ್ದಾರೆ.

Pigeons
ಪಕ್ಷಿಗಳ ಹಿಂಡುಗಳಿಂದ ಭೌತಶಾಸ್ತ್ರಕ್ಕೆ ಹೊಸ ಪ್ರಶ್ನೆಗಳು (ವಿಜ್ಞಾನ ವಿಶೇಷ)

ಪ್ರೊ. ಸತೀಶ್. ಎಲ್.ಎ

ಭೌತಶಾಸ್ತ್ರ ಪ್ರಾಧ್ಯಾಪಕರು

lasgayit@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com