ಚಾಂಪಿಯನ್ ಪಟ್ಟ ಗೆದ್ದ ಕೆರಿಬಿಯನ್ನರಿಗೆ ಅಭಿನಂದನೆಗಳ ಮಹಾಪೂರ

ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಫೈನಲ್ ಗೆದ್ದು ಚಾಂಪಿಯನ್ ಪಟ್ಟ ಪಡೆದುಕೊಂಡು ವೆಸ್ಟ್ ಇಂಡೀಸ್ ತಂಡಕ್ಕೆ ವಿಶ್ವಾದ್ಯಂತ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದು..
ಟ್ವಿಟರ್ ಪ್ರತಿಕ್ರಿಯೆ
ಟ್ವಿಟರ್ ಪ್ರತಿಕ್ರಿಯೆ

ಕೋಲ್ಕತಾ: ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಫೈನಲ್ ಗೆದ್ದು ಚಾಂಪಿಯನ್ ಪಟ್ಟ ಪಡೆದುಕೊಂಡು ವೆಸ್ಟ್ ಇಂಡೀಸ್ ತಂಡಕ್ಕೆ ವಿಶ್ವಾದ್ಯಂತ ಅಭಿನಂದನೆಗಳ ಮಹಾಪೂರ  ಹರಿದುಬರುತ್ತಿದ್ದು, ಕ್ರಿಕೆಟ್ ಜಗತ್ತಿನ ಖ್ಯಾತನಾಮರು ಶುಭಾಶಯ ತಿಳಿಸಿದ್ದಾರೆ.

ಈ ಟೂರ್ನಿಯಲ್ಲಿ ಎರಡು ಪ್ರಶಸ್ತಿ ಗೆದ್ದ ಏಕೈಕ ತಂಡ ಎನ್ನುವ ಐತಿಹಾಸಿಕ ಸಾಧನೆ ಮಾಡಿರುವ ವಿಂಡೀಸ್‌ ತಂಡಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೆಲ  ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಅಭಿನಂದಿಸಿದ್ದಾರೆ. ‘ಇದೇ ವರ್ಷದ ಜನವರಿಯಲ್ಲಿ 19 ವರ್ಷದ ಒಳಗಿವನರ ಟೂರ್ನಿಯಲ್ಲಿ ನಮ್ಮ ದೇಶವೇ ಪ್ರಶಸ್ತಿ ಗೆದ್ದಿತು. ಟ್ವೆಂಟಿ–20 ವಿಶ್ವ ಟೂರ್ನಿಯಲ್ಲಿ ಪುರುಷ  ಮತ್ತು ಮಹಿಳಾ ತಂಡಗಳು ಪ್ರಶಸ್ತಿ ಗೆದ್ದ ವಿಷಯ ಪ್ರತಿಯೊಬ್ಬ ಕ್ರಿಕೆಟ್‌ ಪ್ರೇಮಿಗೂ ಹೆಮ್ಮೆ ಮೂಡಿಸುತ್ತದೆ. ಕೋಲ್ಕತ್ತದಲ್ಲಿ ಅಭಿಮಾನಿಗಳು ನೀಡಿದ ಬೆಂಬಲವನ್ನು ಎಂದಿಗೂ ಮರೆಯಲಾಗದು’ ಎಂದು  ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ನ ಸಿಇಒ ಡಾಮಿನ್ ಡೊನಾಹೊಯೆ ಶ್ಲಾಘಿಸಿದ್ದಾರೆ.

ಉಳಿದಂತೆ ಕ್ರಿಕೆಟ್ ಜಗತ್ತಿನ ಖ್ಯಾತನಾಮರು ನೀಡಿರುವ ವಿವಿಧ ಪ್ರತಿಕ್ರಿಯೆಗಳು ಈ ರೀತಿ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com