ನವದೆಹಲಿ: ಕೆಲವು ದಿನಗಳ ಬ್ರೇಕಪ್ ನಂತರ ಮತ್ತೆ ಒಂದಾಗಿರುವ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಏಕಾಂಗಿಯಾಗಿರಲು ಬಿಡಿ ಎಂದು ಸಹ ಅಟಗಾರ ಹರ್ಭಜನ್ ಸಿಂಗ್ ಅವರು ಮಾಧ್ಯಮಕ್ಕೆ ಮನವಿ ಮಾಡಿದ್ದಾರೆ.
'ವಿರಾಟ್ ಕೊಹ್ಲಿ ಹಾಗೂ ಅನಷ್ಕಾ ಶರ್ಮಾ ಅವರ ಖಾಸಗಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ ಎಂದಿರುವ ಭಜ್ಜಿ, ಅದು ಅವರ ಖಾಸಗಿತನವನ್ನು ಮತ್ತು ನಾನು ಅದನ್ನು ಗೌರವಿಸುತ್ತೇನೆ' ಎಂದು ಹೇಳಿದ್ದಾರೆ. ಅಲ್ಲದೆ ಅವರ ಖಾಸಗಿ ಜೀವನದಿಂದ ದೂರವಿರುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
'ಅವರು ಏನು ಮಾಡುತ್ತಿದ್ದಾರೆ ಅಂತ ನನಗೆ ನಿಜಕ್ಕೂ ಗೊತ್ತಿಲ್ಲ. ಆದರೆ ಪ್ರತಿಯೊಬ್ಬರಿಗೂ ಅವರದ್ದೇಯಾದ ಖಾಸಗಿ ಜೀವನವಿರುತ್ತದೆ. ಹೀಗಾಗಿ ನಾವು ಅವರ ಖಾಸಗಿತನವನ್ನು ಗೌರವಿಸಬೇಕು' ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಈ ಲವ್ ಬರ್ಡ್ಸ್ ಇತ್ತೀಚಿಗಷ್ಟೇ ಮುಂಬೈನ ಬಾಂದ್ರಾದಲ್ಲಿರುವ ಹಾಕ್ಸನ್ ಕ್ಲಬ್ ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಮತ್ತೆ ಪ್ರಣಯ ಗೀತೆ ಹಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.