
ನವದೆಹಲಿ: ಸುರೈಶ್ ರೈನಾ ಬಳಿಕ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಭಜ್ಜಿ ಪತ್ನಿ ಗೀತಾ ಬಸ್ರಾ ಗರ್ಭಿಣಿಯಾಗಿದ್ದು, ಈ ವರ್ಷದ ಭಜ್ಜಿ ಕುಟುಂಬ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಶುಕ್ರವಾರ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಭಜ್ಜಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೀತಾ ಮಾಧ್ಯಮಗಳಿಂದ ದೂರ ಉಳಿಯಲು ಪ್ರಯತ್ನಿಸಿದರಾದರೂ, ಮಾಧ್ಯಮಗಳ ಕಣ್ತಪ್ಪಿಸಲು ಆಗಲಿಲ್ಲ. ಆಗಲೇ ಗೀತಾ ಗರ್ಭಿಣಿಯಾಗಿದ್ದಾರೆ ಎಂದು ತಿಳಿದಿದ್ದು. ಬಳಿಕ ಗೀತಾ ಮತ್ತು ಭಜ್ಜಿ ಕುಟುಂಬದ ಮೂಲಗಳು ಕೂಡ ಗೀತಾ ಗರ್ಭಿಣಿಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಸ್ತುತ ತಮ್ಮ ತಂದೆ-ತಾಯಿಯೊಂದಿಗೆ ಸಮಯ ಕಳೆಯುವ ಸಲುವಾಗಿ ಭಜ್ಜಿ ಪತ್ನಿ ಗೀತಾ ಬಸ್ರಾ ಶೀಘ್ರದಲ್ಲಿಯೇ ಲಂಡನ್ ಗೆ ಪ್ರಯಾಣ ಬೆಳೆಸಲಿದ್ದಾರೆ ತಿಳಿದುಬಂದಿದೆ. ಕಳೆದ 2015ರ ಅಕ್ಟೋಬರ್‌ನಲ್ಲಿ ಹರ್ಭಜನ್, ಗೀತಾರನ್ನು ವಿವಾಹವಾಗಿದ್ದರು.
Advertisement