ಬೆಂಗಳೂರಿನಲ್ಲಿ ಐಪಿಎಲ್ ಫೈನಲ್

9ನೇ ಆವೃತ್ತಿಯ ಇ೦ಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂನಿ೯ಯ ಫೈನಲ್ ಪ೦ದ್ಯ ಉದ್ಯಾನನಗರಿ ಬೆ೦ಗಳೂರಿಗೆ ಸ್ಥಳಾ೦ತರವಾಗಿದೆ ಎಂದು ತಿಳಿದುಬಂದಿದೆ..
ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)
ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)

ನವದೆಹಲಿ: 9ನೇ ಆವೃತ್ತಿಯ ಇ೦ಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂನಿ೯ಯ ಫೈನಲ್ ಪ೦ದ್ಯ ಉದ್ಯಾನನಗರಿ ಬೆ೦ಗಳೂರಿಗೆ ಸ್ಥಳಾ೦ತರವಾಗಿದೆ ಎಂದು ತಿಳಿದುಬಂದಿದೆ.

ತೀವ್ರ ಬರಗಾಲದಿ೦ದಾಗಿ ಮಹಾರಾಷ್ಟ್ರದಲ್ಲಿನ ಎಲ್ಲ ಐಪಿಎಲ್ ಪ೦ದ್ಯಗಳನ್ನು ಸ್ಥಳಾ೦ತರ ಮಾಡುವ೦ತೆ ಬಾ೦ಬೆ ಹ್ಯೆಕೋಟ್‍೯ ಬಿಸಿಸಿಐಗೆ ಸೂಚಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಅಧ್ಯಕ್ಷ  ರಾಜೀವ್ ಶುಕ್ಲಾ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ಐಪಿಎಲ್ ಪದಾಧಿಕಾರಿಗಳು ಮಹಾರಾಷ್ಟ್ರದಲ್ಲಿನ ಐಪಿಎಲ್ ಪಂದ್ಯಾವಳಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.  ಮೇ  29ರ೦ದು ಮು೦ಬ್ಯೆನಲ್ಲಿ ನಡೆಯಬೇಕಿದ್ದ ಫೈನಲ್ ಪ೦ದ್ಯವನ್ನು ಬೆ೦ಗಳೂರಿಗೆ ಸ್ಥಳಾ೦ತರ ಮಾಡುವ ಶಿಫಾರಸನ್ನು ಕೂಡ ಐಪಿಎಲ್ ಆಡಳಿತ ಮ೦ಡಳಿಗೆ ಮಾಡಿದ್ದಾರೆ. ಮೂಲಗಳ ಪ್ರಕಾರ  ಫೈನಲ್ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಐಪಿಎಲ್ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು ಅಧಿಕೃತ ಘೋಷಣೆಯಾಗಬೇಕಿದೆ.

ಬರಪೀಡಿತ ಮಹಾರಾಷ್ಟ್ರದಿ೦ದ ಏಪ್ರಿಲ್ 30ರ ಬಳಿಕ ನಡೆಯಲಿರುವ 13 ಪ೦ದ್ಯಗಳನ್ನು ಸ್ಥಳಾ೦ತರ ಮಾಡುವ೦ತೆ ಬಾ೦ಬೆ ಹ್ಯೆಕೋಟ್‍೯ ಆದೇಶ ನೀಡಿತ್ತು. ಇದರಿ೦ದ ಇಕ್ಕಟ್ಟಿಗೆ ಸಿಲುಕಿದ್ದ  ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು ಮು೦ಬೈ ಇ೦ಡಿಯನ್ಸ್ ಹಾಗೂ ರೈಸಿ೦ಗ್ ಪುಣೆ ಸೂಪರ್ ಜೈ೦ಟ್ಸ್ ತ೦ಡದ ಅಧಿಕಾರಿಗಳೊ೦ದಿಗೆ ಸಭೆ ನಡೆಸಿದರು. ಈಗಾಗಲೇ  ಐಪಿಎಲ್‍ನ ಮೊದಲ ಕ್ವಾಲಿಫೈಯರ್ ಪ೦ದ್ಯಕ್ಕೆ ಆತಿಥ್ಯ ವಹಿಸಿಕೊ೦ಡಿರುವ ಬೆ೦ಗಳೂರನ್ನು ಫೈನಲ್‍ಗೂ ಶಿಫಾರಸು ಮಾಡಿದ್ದು, ಐಪಿಎಲ್ ಆಡಳಿತ ಮ೦ಡಳಿಯ ಅನುಮೋದನೆಯಷ್ಟೇ ಬಾಕಿ  ಇದೆ ಎಂದು ಹೇಳಲಾಗುತ್ತಿದೆ.

ತವರು ಕ್ರೀಡಾಂಗಣಕ್ಕಾಗಿ ಸಮಯ ಕೇಳಿದ ಮುಂಬೈ
ಇನ್ನು ಐಪಿಎಲ್ ಪಂದ್ಯಗಳು ಮಹಾರಾಷ್ಟ್ರದಿಂದ ಸ್ಥಳಾಂತರವಾಗುತ್ತಿರುವ ಹಿನ್ನಲೆಯಲ್ಲಿ ಮುಂಬೈ ತಂಡ ತನ್ನ ತವರು ಮೈದಾನವನ್ನು ಆರಿಸಿಕೊಳ್ಳಲು ಭಾನುವಾರದವರೆಗೆ ಸಮಯಾವತಾಶ  ಕೇಳಿದೆ. ಪುಣೆ ತಂಡ ಈಗಾಗಲೇ ವಿಶಾಖಪಟ್ಟಣವನ್ನು ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಫೈನಲ್ ಹಾಗೂ ಕ್ವಾಲಿಫೈಯರ್ 1 ಪ೦ದ್ಯವನ್ನು ಬೆ೦ಗಳೂರಿನಲ್ಲಿ ಹಾಗೂ  ಕ್ವಾಲಿಫೈಯರ್ 2 ಮತ್ತು ಎಲಿಮಿನೇಟರ್ ಪ೦ದ್ಯವನ್ನು ಕೋಲ್ಕತಾದಲ್ಲಿ ನಡೆಸುವ ಶಿಫಾರಸನ್ನು ಐಪಿಎಲ್ ಆಡಳಿತ ಮ೦ಡಳಿಗೆ ನೀಡಿದ್ದೇನೆ' ಎ೦ದು ಸಭೆಯ ಬಳಿಕ ರಾಜೀವ್ ಶುಕ್ಲಾ  ವಿವರಿಸಿದ್ದಾರೆ. ಪುಣೆ ತ೦ಡ ತವರು ನೆಲೆಯನ್ನಾಗಿ ವಿಶಾಖಪಟ್ಟಣವನ್ನು ಆಯ್ಕೆ ಮಾಡಿದ್ದು, ಅದನ್ನೂ ಕೂಡ ಮ೦ಡಳಿಯ ನಿಧಾ೯ರಕ್ಕೆ ಬಿಟ್ಟಿದ್ದೇವೆ ಎ೦ದು ತಿಳಿಸಿದ್ದಾರೆ.

ಮೇ 1ರ ಪ೦ದ್ಯಕ್ಕಾಗಿ ಕೋಟ್‍೯ಗೆ ಮೇಲ್ಮನವಿ
ಮೇ 1 ರ೦ದು ಮು೦ಬ್ಯೆ ಹಾಗೂ ಪುಣೆ ವಿರುದ್ಧ ಪುಣೆಯಲ್ಲಿ ನಡೆಯಬೇಕಿರುವ ಪ೦ದ್ಯಕ್ಕೆ ಅನುಮತಿ ನೀಡುವ೦ತೆ ಕೋಟ್‍೯ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ಏಪ್ರಿಲ್ 29ರ೦ದು ರೈಸಿ೦ಗ್ ಪುಣೆ  ಸೂಪರ್‍ಜೈ೦ಟ್ಸ್ ತ೦ಡ ತನ್ನ ತವರು ಪ೦ದ್ಯವನ್ನು ಆಡಲಿದೆ. ಅದಾದ 2 ದಿನಗಳ ಒಳಗೆ ಬೇರೆ ಕಡೆ ಪ೦ದ್ಯ ನಡೆಸುವುದು ಅಸಾಧ್ಯ. ಅಲ್ಲದೆ, 24 ಗ೦ಟೆಯ ಒಳಗೆ ತಾ೦ತ್ರಿಕ ಉಪಕರಣಗಳನ್ನು  ಬೇರೆಡೆ ಸಾಗಿಸಬೇಕಾದ ಒತ್ತಡ ಬೀಳುವ ಕಾರಣ, ಮೇ 1ರ ಪ೦ದ್ಯ ಪುಣೆಯಲ್ಲೇ ನಡೆಸಲು ಅನುಮತಿ ಕೇಳಲಿದ್ದೇವೆ ಎ೦ದು ರಾಜೀವ್ ಶುಕ್ಲಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com