ಪ್ರೀತಿ ಝಿಂಟಾ ಸಹ ಮಾಲೀಕತ್ವದ ಕಿ೦ಗ್ಸ್ ಇಲೆವೆನ್‍ಗೆ ಮುರಳಿ ವಿಜಯ್ ಸಾರಥ್ಯ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಕಿ೦ಗ್ಸ್ ಇಲೆವೆನ್ ಪ೦ಜಾಬ್ ತ೦ಡದ ನಾಯಕ ಡೇವಿಡ್ ಮಿಲ್ಲರ್ ನಾಯಕತ್ವದಲ್ಲಿ ತಂಡ 5 ಪಂದ್ಯಗಳಲ್ಲಿ...
ಮುರಳಿ ವಿಜಯ್
ಮುರಳಿ ವಿಜಯ್
Updated on: 

ಮೊಹಾಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಕಿ೦ಗ್ಸ್ ಇಲೆವೆನ್ ಪ೦ಜಾಬ್ ತ೦ಡದ ನಾಯಕ ಡೇವಿಡ್ ಮಿಲ್ಲರ್ ನಾಯಕತ್ವದಲ್ಲಿ ತಂಡ 5 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಪ್ರೀತಿ ಪಡೆಗೆ ಅನುಭವಿ ಆಟಗಾರ ಮುರಳಿ ವಿಜಯ್ ಸಾರಥ್ಯ ವಹಿಸುವ ಸಾಧ್ಯತೆ ಇದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 6 ಪಂದ್ಯಗಳ ಪೈಕಿ 1 ರಲ್ಲಿ ಮಾತ್ರ ಗೆಲುವು ಸಾಧಿಸಿ, ಇನ್ನು 5 ಪಂದ್ಯಗಳಲ್ಲಿ ಸೋತಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಮುರಳಿ ವಿಜಯ್ ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ. ಆದರೆ ಇನ್ನು ಪ್ರೀತಿ ಝಿಂಟಾ ಸಹ ಮಾಲೀಕತ್ವದ ಫ್ರಾಂಚೈಸಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.

ದಕ್ಷಿಣ ಆಫ್ರಿಕಾದ 26 ವಷ೯ದ ಆಟಗಾರ ಮಿಲ್ಲರ್ ಸಹ ಪ್ರಸಕ್ತ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ನಾಯಕತ್ವ ಬದಲಾವಣೆಗೆ ಕಾರಣವಾಗಿದೆ. 6 ಪ೦ದ್ಯಗಳನ್ನಾಡಿರುವ ಡೇವಿಡ್ ಕೇವಲ 76 ರನ್ ಸಿಡಿಸಿದ್ದಾರೆ.

ಗುಜರಾತ್ ಲಯನ್ಸ್ ವಿರುದ್ಧ ನಾಳೆ ರಾಜ್‍ಕೋಟ್‍ನಲ್ಲಿ ನಡೆಯಲಿರುವ ಪ೦ದ್ಯದಲ್ಲಿ ಮುರಳಿ ವಿಜಯ್ ನಾಯಕರಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com