ವಿಚಿತ್ರ ರೀತಿಯಲ್ಲಿ 'ಚೈನಾಮ್ಯಾನ್‌' ಬೌಲಿಂಗ್ ಮಾಡುವ ಶಿವಿಲ್ ಕೌಶಿಕ್

ಶಿವಿಲ್ ವಿಚಿತ್ರ ರೀತಿಯಲ್ಲಿ ಮೈ ಮುರಿಯುಂತೆ ಮಾಡಿ ಬೌಲಿಂಗ್ ಮಾಡುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿತ್ತು. ಕ್ರಿಕೆಟ್ ನಲ್ಲಿ ಹೆಚ್ಚಾಗಿ...
ಶಿವಿಲ್ ಕೌಶಿಕ್
ಶಿವಿಲ್ ಕೌಶಿಕ್
ಪುಣೆ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಲ್ಲಿ ಹೊಸ ಟೀಂಗಳಾದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಪುಣೆ ಸೂಪರ್ ಜೈಂಟ್ಸ್ ಮತ್ತು ಸುರೇಶ್ ರೈನಾ ನಾಯಕತ್ವದ ಗುಜರಾತ್ ಲಯನ್ಸ್ ನಡುವಿನ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದದ್ದು ಗುಜರಾತ್ ತಂಡದ ಶಿವಿಲ್ ಕೌಶಿಕ್ ಎಂಬ ಬೌಲರ್. 
ಶಿವಿಲ್ ವಿಚಿತ್ರ ರೀತಿಯಲ್ಲಿ ಮೈ ಮುರಿಯುಂತೆ ಮಾಡಿ ಬೌಲಿಂಗ್ ಮಾಡುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿತ್ತು. ಕ್ರಿಕೆಟ್ ನಲ್ಲಿ ಹೆಚ್ಚಾಗಿ ಕಾಣಲ್ಪಡದ ಚೈನಾಮ್ಯಾನ್ ಬೌಲಿಂಗ್ ಆಕ್ಷನ್ ಮೂಲಕ ಶಿವಿಲ್ ಕೌಶಿಕ್ ಸುದ್ದಿಯಾದರು.
20ರ ಹರೆಯದ ಶಿವಿಲ್ ಸ್ಪಿನ್ನರ್ ಆಗಿ ಗುಜರಾತ್ ಟೀಂನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಹುಬ್ಳಿ  ಟೈಗರ್ಸ್ ತಂಡದಲ್ಲಿ ಆಡಿದ್ದ ಶಿವಿಲ್  ಅಲ್ಲಿಂದ ಗುಜರಾತ್ ಲಯನ್ಸ್ ತಂಡದ ಮಾಲೀಕರ ಗಮನಕ್ಕೆ ಬಂದಿದ್ದರು.
ಬೌಲಿಂಗ್ ಮಾಡುವಾಗ ಬಾಲ್ ತಿರುಗುವುದಕ್ಕಿಂತ ಹೆಚ್ಚು ಶಿವಿಲ್‌ನ ದೇಹ ತಿರುಗುವುದೇ ಎಲ್ಲರಿಗೂ ಅಚ್ಚರಿ ಹುಟ್ಟಿಸುವ ವಿಷಯವಾಗಿದೆ.
ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಪೌಲ್ ಆಂಡಮ್ಸ್‌ನ ಬೌಲಿಂಗ್ ಆಕ್ಷನ್ ನ್ನು ಶಿವಿಲ್ ನೆನಪಿಸುತ್ತಿದ್ದಾರೆ. ಈತ ಬೌಲಿಂಗ್ ಮಾಡುವಾಗ ಸರಿಸುಮಾರು 360 ಡಿಗ್ರಿಯಲ್ಲಿ ಶರೀರವನ್ನು ತಿರುಗಿಸಿ ಬೌಲಿಂಗ್ ಮಾಡುವ ಶೈಲಿಯೇ ಹೆಚ್ಚು ಗಮನ ಸೆಳೆದಿದೆ. ತನ್ನಂತೆಯೇ ಬೌಲಿಂಗ್ ಆಕ್ಷನ್ ಮಾಡುತ್ತಿದ್ದಿ, ಇದನ್ನು ನೋಡಿ ಖುಷಿಯಾಯಿತು ಎಂದು ಪೌಲ್ ಆ್ಯಡಮ್ಸ್ ಕೂಡಾ ಶಿವಿಲ್ ನ ಬೆನ್ನು ತಟ್ಟಿದ್ದಾರೆ.
ಸಾಮಾನ್ಯವಾಗಿ ಬೌಲರ್‌ಗಳು ಎಸೆತದ ನಂತರ ಬ್ಯಾಟ್ಸ್‌ಮೆನ್‌ಗೆ ಅಭಿಮುಖವಾಗಿ ನಿಂತರೆ ಶಿವಿಲ್ ಬೌಲಿಂಗ್ ಮಾಡಿದ ನಂತರ ಕವರ್‌ನ ನೇರಕ್ಕೆ ಅವರ ಮುಖ ಇರುತ್ತದೆ. 
ಪುಣೆ ವಿರುದ್ಧದ ಪಂದ್ಯದಲ್ಲಿ ಮೂರು ಓವರ್‌ಗಳನ್ನು ಎಸೆದ ಶಿವಿಲ್‌ಗೆ ಯಾವುದೇ ವಿಕೆಟ್ ದಕ್ಕಲಿಲ್ಲ.  ಪುಣೆಗಾಗಿ ಶತಕ ಬಾರಿಸಿದ ಆಸ್ಟ್ರೇಲಿಯಾ ದಾಂಡಿಗ ಸ್ಟೀವನ್ ಸ್ಮಿತ್ ಅನ್ನು ಕೌಶಿಕ್ ಕ್ಲೀನ್ ಬೌಲ್ಡ್  ಮಾಡಿದರೂ ಆ ಎಸೆತ ನೋ ಬಾಲ್ ಆಗಿತ್ತು. ಪ್ರಸ್ತುತ ಪಂದ್ಯದಲ್ಲಿ ಗುಜರಾತ್ ಮೂರು ವಿಕೆಟ್‌ಗಳಿಂದ ಪಂದ್ಯವನ್ನೂ ಗೆದ್ದುಕೊಂಡಿತ್ತು.
ಚೈನಾಮ್ಯಾನ್ ಶೈಲಿ ಎಂದರೇನು?
ಆಫ್ ಸ್ಪಿನ್ನರ್‌ಗಳು -ಬಲಗೈ ಬೌಲರ್‌ಗಳಾದ ಇವರು ಬಲಗೈ ದಾಂಡಿಗರಿಗೆ ಬೌಲ್ ಮಾಡುವಾಗ ಚೆಂಡನ್ನು ಲೆಗ್ ಸೈಡ್‌ಗೆ ತಿರುಗಿಸುತ್ತಾರೆ. ಲೆಫ್ಟ್ ಆರ್ಮ್ ಸ್ಪಿನ್ನರ್ ಗಳು -ಎಡಗೈ ಬೌಲರ್‌ಗಳಾಗಿದ್ದು,  ಬಲಗೈ ದಾಂಡಿಗರಿಗೆ ಬೌಲಿಂಗ್ ಮಾಡುವಾಗ ಲೆಗ್ ಗಿಂತ ದೂರಕ್ಕೆ ಚೆಂಡನ್ನು ತಿರುಗಿಸುತ್ತಾರೆ. ಲೆಗ್ ಸ್ಪಿನ್ನರ್ ಗಳು-ಬಲ ಗೈ ಬೌಲರ್‌ಗಳಾದ ಇವರು ಬಲಗೈ ದಾಂಡಿಗರಿಗೆ ಬೌಲಿಂಗ್ ಮಾಡುವಾಗ ಮಣಿಕಟ್ಟು ತಿರುಗಿಸಿ ಲೆಗ್ ಸೈಡ್‌ಗಿಂತ ಚೆಂಡನ್ನು ದೂರಕ್ಕೆ ತಿರುಗುವಂತೆ ಮಾಡುತ್ತಾರೆ. 
ಚೈನಾಮ್ಯಾನ್ ಅಂದರೆ ಲೆಗ್ ಸ್ಪಿನ್ನರ್‌ಗಳಾಗಿದ್ದು ಇವರು ಎಡಗೈ ಬೌಲಿಂಗ್ ಮಾಡುತ್ತಾರೆ. ಇವರು ಬಲಗೈ ದಾಂಡಿಗರಿಗೆ ಬೌಲಿಂಗ್ ಮಾಡುವಾಗ ಲೆಗ್‌ಗಿಂತ ದೂರಕ್ಕೆ ಚೆಂಡನ್ನು ತಿರುಗಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com