ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಸಿಡಿಸಿದ ಕೊಹ್ಲಿ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ನಾರ್ಥ್ ಸೌಂಡ್(ಆಂಟಿಗುವಾ): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲೂ ಮಾಸ್ಟರ್ ಕ್ಲಾಸ್ ಇನಿಂಗ್ಸ್ ಆಡು ಮೂಲಕ ವೃತ್ತಿಜೀನವದ ಚೊಚ್ಚಲ ದ್ವಿಶತಕ ಪೂರೈಸಿದ್ದಾರೆ. ಇನ್ನು 283 ಎಸೆತೆಗಳಲ್ಲಿ ಕೊಹ್ಲಿ 200 ರನ್ ಗಳಿಸಿ ಔಟ್ ಆದರು.

ಇದೇ ಕೊಹ್ಲಿಗೆ ಸಾಥ್ ನೀಡಿದ ಸ್ಪಿನ್ ಬೌಲರ್ ಆರ್ ಅಶ್ವಿನ್ ಸಹ ಬ್ಯಾಟಿಂಗ್ ನಲ್ಲಿ ಸಿಡಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 566 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ಬಂದ ವೆಸ್ಟ್ ಇಂಡೀಸ್ 16 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ.

ಭಾರತ ಪರ ವಿಜಯ್ 7, ಶಿಖರ್ ಧವನ್ 84, ಪೂಜಾರ 16, ವಿರಾಟ್ ಕೊಹ್ಲಿ 200, ಅಜಿಂಕ್ಯ ರಹಾನೆ 22, ಆರ್ ಅಶ್ವಿನ್ ಅಜೇಯ 106, ವೃದ್ಧಿಮಾನ್ ಸಹಾ 40, ಅಮಿತ್ ಮಿಶ್ರಾ ಅಜೇಯ 23 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್ ಪರ ಬಿಶೂ 3, ಶಾನೋನ್ ಗೇಬ್ರಿಯಲ್ 2 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com