ಅಸಾಧ್ಯವಾಗಿದ್ದ ಶತಕ ಸಾಧ್ಯ: ದಾಖಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ರಾಹುಲ್

ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಮತ್ತು ಕನ್ನಡಿಗ ಕೆಎಲ್ ರಾಹುಲ್ ತಮ್ಮ ಶತಕದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ...
ಕೆಎಲ್ ರಾಹುಲ್ (ಸಂಗ್ರಹ ಚಿತ್ರ)
ಕೆಎಲ್ ರಾಹುಲ್ (ಸಂಗ್ರಹ ಚಿತ್ರ)

ಹರಾರೆ: ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಮತ್ತು ಕನ್ನಡಿಗ ಕೆಎಲ್ ರಾಹುಲ್ ತಮ್ಮ ಶತಕದ ಹಿಂದಿನ  ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಕನ್ನಡಿಗ ಕೆಎಲ್ ರಾಹುಲ್,  ತಮ್ಮ ಶತಕದ ಹಿಂದಿನ ರಹಸ್ಯ ಬಿಚಿಟ್ಟಿದ್ದಾರೆ. ಜಿಂಬಾಬ್ವೆ ನೀಡಿದ್ದ 168 ರನ್ ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ್ದ ಭಾರತ ತಂಡ 42.3 ಓವರ್ ಗಳಲ್ಲಿ 173 ರನ್ ಗಳಿಸಿ 9 ವಿಕೆಟ್ ಗಳ  ಅಂತರದಲ್ಲಿ ಜಯಭೇರಿ ಭಾರಿಸಿತ್ತು. 43ನೇ ಓವರ್ ನಲ್ಲಿ ರಾಹುಲ್ 92 ರನ್ ಗಳಿಸಿ ಶತಕದ ಅಂಚಿನಲ್ಲಿದ್ದರು. ಆದರೆ ಪಂದ್ಯ ಗೆಲ್ಲಲು 4 ರನ್ ಗಳ ಮಾತ್ರ ಬೇಕಿತ್ತು. ಈ ನಾಲ್ಕೂ ರನ್ ಗಳನ್ನು  ರಾಹುಲ್ ಒಬ್ಬರೇ ಗಳಿಸದರೂ ಶತಕ ಸಾಧನೆ ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಸಮಯ ಪ್ರಜ್ಞೆ ಮೆರೆದೆ ರಾಹುಲ್ 43ನೇ ಓವರ್ ನ 2 ಎಸೆತದಲ್ಲಿ 2 ರನ್ ಪಡೆದರು. ಆಗ ಭಾರತ ತಂಡ ಗೆಲ್ಲಲು 2 ರನ್ ಗಳ ಅವಶ್ಯಕತೆ ಇದ್ದರೆ, ರಾಹುಲ್ ಶತಕ ಸಾಧನೆಗೆ 6 ರನ್ ಗಳ  ಅವಶ್ಯಕತೆ ಇತ್ತು. ಹೀಗಾಗಿ ಮಸಕಡ್ಜಾ ಎಸೆದ ಬಳಿಕದ ಎಸೆತ ಫುಲ್ ಟಾಸ್ ಎಸೆತವನ್ನು ಕ್ಷಣಾರ್ಧದಲ್ಲಿ ರಾಹುಲ್ ಲಾಂಗ್ ಆನ್ ನತ್ತ ಸಿಕ್ಸರ್ ಭಾರಿಸಿದರು. ಆ ಮೂಲಕ ರಾಹುಲ್ ತಮ್ಮ  ಪದಾರ್ಪಣೆ ಪಂದ್ಯವನ್ನು ದಾಖಲೆ ಪುಟಗಳಿಗೆ ಸೇರಿಸಿದರು.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರಾಹುಲ್, "ತಾವು ಯಾವುದೇ ವೈಯುಕ್ತಿಕ ಸಾಧೆನೆಗಾಗಿ ಇಲ್ಲಿಗೆ ಬಂದಿಲ್ಲ. ವಿದೇಶದಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವುದು  ತಂಡದ ಮತ್ತು ತಮ್ಮ ಉದ್ದೇಶವಾಗಿತ್ತು. ದೇಸೀ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಡುವಣ ವ್ಯತ್ಯಾಸವನ್ನು ಕಲಿತುಕೊಳ್ಳಲು ನಾವಿಲ್ಲಿಗೆ ಬಂದಿದ್ದೇವೆ. ಶತಕ ಸಿಡಿಸಿದ್ದು ದೊಡ್ಡ ಸಾಧನೆಯಲ್ಲ,  ನನ್ನ ಮುಂದಿದ್ದ ಗುರಿ ಅಷ್ಟೇನು ದೊಡ್ಡ ಮೊತ್ತದ್ದಾಗಿರಲಿಲ್ಲ, ನಿಧಾನಗತಿಯ ಆಟಕ್ಕೆ ಒಗ್ಗಿಕೊಂಡು ಹಂತ ಹಂತವಾಗಿ ಇನಿಂಗ್ಸ್ ಕಟ್ಟಲು ನೆರವಾಯಿತು. ದೇಸಿ ಕ್ರಿಕೆಟ್ ಹಾಗೂ ಐಪಿಎಲ್​ನಲ್ಲಿ  ಆಡಿದ ಅನುಭವ ಈ ಶತಕ ಗಳಿಸಲು ನೆರವಾಯಿತು.

ಅಂತಾರಾಷ್ಟ್ರೀಯ ಪಂದ್ಯಗಳ ವಾತಾವರಣಕ್ಕೆ ಹೊಂದಿಕೊಳ್ಳಲು ಉತ್ತಮ ಆಟ ಅವಶ್ಯಕ ಎಂದ ರಾಹುಲ್ ಸಿಕ್ಸರ್ ಸಿಡಿಸಿದೇ ಬೇರೆ ಮಾರ್ಗವಿರಲಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ನಾನು  90ರ ಗಡಿದಾಟಿದ್ದಾಗಲೇ ಶತಕದಂಚಿಗೆ ಬಂದಿದ್ದೇನೆ ಎಂದು ತಿಳಿಯಿತು. ಹೀಗಾಗಿ ನನಗೆ ಸಿಕ್ಸರ್ ಸಿಡಿಸದೇ ಬೇರೆ ಮಾರ್ಗವೇ ಇರಲಿಲ್ಲ. ಇದೇ ವೇಳೆ ಮಸಕಡ್ಜಾ ಎಸೆದ ಎಸೆತ ನನಗೆ  ಪೂರಕವಾಗಿತ್ತು. ಹೀಗಾಗಿ ಸಿಕ್ಸರ್ ನತ್ತ ಎತ್ತಿದೆ ಎಂದು ರಾಹುಲ್ ಹೇಳಿದ್ದಾರೆ.

ಧೋನಿ ನಾಯಕತ್ವ ಶ್ಲಾಘಿಸಿದ ರಾಹುಲ್
ಇದೇ ವೇಳೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಶ್ಲಾಘಿಸಿದ ರಾಹುಲ್, "ನಾಯಕ ಧೋನಿಯ ಮಾರ್ಗದರ್ಶನ ಮತ್ತು ತಂಡದ ಸದಸ್ಯರ ಒಗ್ಗಟ್ಟು ತಮ್ಮ ಶತಕಕ್ಕೆ ಕಾರಣ.  ಉತ್ತಮ ಫಾರ್ಮ್​ನಲ್ಲಿರುವ ಎಲ್ಲ ಯುವ ಆಟಗಾರರು ಸರಣಿಯಲ್ಲಿ ವಿಶ್ವಾಸಯುತ ಪ್ರದರ್ಶನ ನೀಡುವತ್ತ ಗಮನ ಹರಿಸಲಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com