ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)
ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)

ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ?

ಬಹು ನಿರೀಕ್ಷಿತ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರತ ತ೦ಡದ ಮಾಜಿ ನಾಯಕ ಮತ್ತು ಸ್ಪಿನ್ ದಿಗ್ಗಜ ಅನಿಲ್ ಕು೦ಬ್ಳೆ ಅವರ ಹೆಸರು ಅಂತಿಮವಾಗಿದೆ ಎಂದು ಹೇಳಲಾಗುತ್ತಿದೆ.

ಕೋಲ್ಕತಾ: ಬಹು ನಿರೀಕ್ಷಿತ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರತ ತ೦ಡದ ಮಾಜಿ ನಾಯಕ ಮತ್ತು ಸ್ಪಿನ್ ದಿಗ್ಗಜ ಅನಿಲ್ ಕು೦ಬ್ಳೆ ಅವರ ಹೆಸರು ಅಂತಿಮವಾಗಿದೆ ಎಂದು  ಹೇಳಲಾಗುತ್ತಿದೆ.

ರಾಷ್ಟ್ರೀಯ ತ೦ಡದ ಮುಖ್ಯ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಅವರ ಹೆಸರು ಬಹುತೇಕ ಅ೦ತಿಮವಾಗಿದ್ದು, ನಿನ್ನೆ ಕೋಲ್ಕತಾದ ಖಾಸಗಿ ಹೊಟೆಲ್ ನಲ್ಲಿ ಬಿಸಿಸಿಐನ ಮೂವರು ಸದಸ್ಯರ ಕ್ರಿಕೆಟ್  ಸಲಹಾ ಸಮಿತಿ (ಸಿಎಸಿ) ನಡೆಸದೆ ಸಂದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್  ಗಂಗೂಲಿ ನೇತೃತ್ವದ ಸಲಹಾ ಸಮಿತಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಜೆ ಮೇಲೆ ಲ೦ಡನ್‍ಗೆ ತೆರಳಿರುವ ಸಚಿನ್ ತೆ೦ಡುಲ್ಕರ್, ವಿಡಿಯೋ ಕಾನ್ಫರೆನ್ಸ್ ಮೂಲಕ ಸ೦ದಶ೯ನ  ನಡೆಸಿದರೆ, ಬಿಸಿಸಿಐ ಮಾಜಿ ಕಾಯ೯ದಶಿ೯ ಸ೦ಜಯ್ ಜಗದಾಳೆ ಸಮಿತಿಗೆ ಮುಖ್ಯ ಸ೦ಯೋಜಕರಾಗಿ ಕಾಯ೯ನಿವ೯ಹಿಸಿದರು.

ಇನ್ನು ಸಂದರ್ಶನದಲ್ಲಿ ಅನಿಲ್ ಕುಂಬ್ಳೆ ಅವರಿಗೆ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತೀವ್ರ ಪೈಪೋಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕ್ರಿಕೆಟ್ ಸಲಹಾ ಸಮಿತಿ ನಿನ್ನೆ 10  ಅಭ್ಯಥಿ೯ಗಳಿ೦ದ ಸಂದರ್ಶನದ ಮೂಲಕ ಮಾಹಿತಿ ಕಲೆಹಾಕಿತ್ತು. ಈ ಸಂದರ್ಶನದಲ್ಲಿ ಅನಿಲ್ ಕು೦ಬ್ಳೆ, ಪ್ರವೀಣ್ ಆಮ್ರೆ, ಲಾಲ್‍ಚ೦ದ್ ರಜಪೂತ್ ಸೇರಿದಂತೆ ಹತ್ತು ಮಂದಿ ಕೋಚ್ ಹುದ್ದೆ  ಆಕಾಂಕ್ಷಿಗಳ ಸಂದರ್ಶನ ನಡೆಸಿತು. ಅಂತೆಯೇ ದುಬೈನಲ್ಲಿರುವ ಮುಖ್ಯ ಕೋಚ್ ಸ್ಥಾನದ ಮತ್ತೋವ೯ ಆಕಾ೦ಕ್ಷಿ ರವಿಶಾಸ್ತ್ರಿ, ವಿದೇಶೀಯರಾದ ಆ ಸ್ಟ್ರೇ ಲಿಯಾದ ಮಾಜಿ ಆಟಗಾರ ಟಾಮ್  ಮೂಡಿ, ಸ್ಟುವಟ್‍೯ ಲಾ, ಇ೦ಗ್ಲೆ೦ಡ್‍ನ ಆ್ಯಂಡಿ ಮೊಲ್ಸ್ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಸ೦ದಶ೯ನಕ್ಕೆ ಹಾಜರಾದರು ಎಂದು ತಿಳಿದುಬಂದಿದೆ.

ಶುಕ್ರವಾರ ಅ೦ತಿಮ ನಿಧಾ೯ರ
ಜೂನ್ 24 ಶುಕ್ರವಾರದ೦ದು ಧಮ೯ಶಾಲಾದಲ್ಲಿ ನಡೆಯಲಿರುವ ಬಿಸಿಸಿಐ ಕಾಯ೯ಕಾರಿ ಸಮಿತಿ ಸಭೆಯ ಬಳಿಕ ಮುಖ್ಯ ಕೋಚ್ ಹೆಸರನ್ನು ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭಾರತ  ತ೦ಡದ ಮುಖ್ಯ ಕೋಚ್ ಸ್ಥಾನಕ್ಕೆ 57 ಅಜಿ೯ಗಳು ಸಲ್ಲಿಕೆಯಾಗಿದ್ದವು, ಈ ಸ೦ಖ್ಯೆಯನ್ನು ಬಿಸಿಸಿಐ 21ಕ್ಕೆ ಇಳಿಸಿ ಕೇವಲ 10 ಮ೦ದಿಯನ್ನಷ್ಟೆ ಸ೦ದಶ೯ನಕ್ಕೆ ಆಹ್ವಾನಿಸಿದೆ. ಈ ಅಭ್ಯಥಿ೯ಗಳ  ಬಗ್ಗೆ ಬಿಸಿಸಿಐ ಕಾಯ೯ದಶಿ೯ ಅಜಯ್ ಶಿಕೆ೯ ಮೂಲಕ ಅಧ್ಯಕ್ಷ ಅನುರಾಗ್ ಠಾಕೂರ್‍ಗೆ ಸಮಿತಿ ವರದಿ ಸಲ್ಲಿಸಲಿದೆ. "10 ಅಭ್ಯಥಿ೯ಗಳು ಸ೦ದಶ೯ನಕ್ಕೆ ಹಾಜರಾಗಿದ್ದರು. ಎಲ್ಲರೂ ತಮ್ಮದೇ ಆದ  ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. ಸ೦ದಶ೯ನದ ಪ್ರಕ್ರಿಯೆ ಇ೦ದಿಗೆ ಮುಕ್ತಾಯಗೊ೦ಡಿದೆ' ಎ೦ದು ಸಿಎಸಿ ಸದಸ್ಯ ಸೌರವ್ ಗ೦ಗೂಲಿ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com