ಸ೦ದಶ೯ನಕ್ಕೆ ಆಹ್ವಾನವೇ ಬಂದಿಲ್ಲ: ಸ೦ದೀಪ್ ಪಾಟೀಲ್

ಟೀಂ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗಾಗಿ ಬಿಸಿಸಿಐನ ಸಲಹಾ ಸಮಿತಿ ನಡೆಸುತ್ತಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಲು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರಿಗೆ ಅಹ್ವಾನವನ್ನೇ ನೀಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮಾಜಿ ಆಟಗಾರ ಸಂದೀಪ್ ಪಾಟೀಲ್ (ಸಂಗ್ರಹ ಚಿತ್ರ)
ಮಾಜಿ ಆಟಗಾರ ಸಂದೀಪ್ ಪಾಟೀಲ್ (ಸಂಗ್ರಹ ಚಿತ್ರ)

ಕೋಲ್ಕತಾ: ಟೀಂ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗಾಗಿ ಬಿಸಿಸಿಐನ ಸಲಹಾ ಸಮಿತಿ ನಡೆಸುತ್ತಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಲು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರಿಗೆ  ಅಹ್ವಾನವನ್ನೇ ನೀಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ವಿಚಾರವನ್ನು ಸ್ವತಃ ಸಂದೀಪ್ ಪಾಟೀಲ್ ಅವರು ಹೇಳಿಕೊಂಡಿದ್ದು, ಕೋಚ್ ಹುದ್ದೆ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಸಂದೀಪ್ ಪಾಟೀಲ್ ಅವರಿಗೆ ಸಂದರ್ಶನದ ಆಹ್ವಾನ ನೀಡದೇ  ಇರುವುದು ಅಚ್ಚರಿಗೆ ಕಾರಣವಾಗಿದೆ. ಹಾಲಿ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರು ಕೂಡ ಆಗಿರುವ ಸ೦ದೀಪ್ ಪಾಟೀಲ್ ಕೋಚ್ ಹುದ್ದೆಗೆ ಅಜಿ೯ ಸಲ್ಲಿಸಿದ್ದರೂ, ಅವರನ್ನು ಸ೦ದಶ೯ನಕ್ಕೆ  ಕರೆಯದೆ ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ.

ಸ೦ದಶ೯ನಕ್ಕೆ ಹಾಜರಾಗಲು ತಮಗೆ ಯಾವುದೇ ಆಹ್ವಾನ ಬ೦ದಿರಲಿಲ್ಲ ಎ೦ದು ಪಾಟೀಲ್ ಸ್ವತಃ ದೃಢಪಡಿಸಿದ್ದು, ತಮ್ಮನ್ನು ಕಡೆಗಣಿಸಿದ್ದರೂ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು  ವಿವಿಎಸ್ ಲಕ್ಷ್ಮಣ್ ನೇತೃತ್ವದ ತ್ರಿಸದಸ್ಯ ಸಲಹಾ ಸಮಿತಿ ಅಹ೯ರನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.

ಇನ್ನು ಬಿಸಿಸಿಐನ ಈ ಕ್ರಮದ ಹಿಂದೆ ಹಲವು ಅನುಮಾನಗಳು ಮೂಡುತ್ತಿದ್ದು, ಮು೦ಬರುವ ವೆಸ್ಟ್ ಇ೦ಡೀಸ್ ಪ್ರವಾಸಕ್ಕೆ ತ೦ಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ ಅಧ್ಯಕ್ಷರೇ ನ೦ತರ ಆ  ತ೦ಡದ ಕೋಚ್ ಆಗಿ ನೇಮಕಗೊಳ್ಳುವುದು ಸರಿಯಲ್ಲ ಎ೦ಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಸಂದೀಪ್ ಪಾಟೀಲ್ ರನ್ನು ಸಂದರ್ಶನದಿಂದ ದೂರವುಳಿಸಲಾಗಿದೆ ಎಂಬ ಅಭಿಪ್ರಾಯಗಳ  ಕೂಡ ಬಿಸಿಸಿಐ ವಲಯದಲ್ಲಿ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಸಂದೀಪ್ ಪಾಟೀಲ್ ರನ್ನು ಕೋಚ್ ಹುದ್ದೆಯಿಂದ ತಿರಸ್ಕರಿಸಲಾಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಸಂದೀಪ್ ಪಾಟೀಲ್ ಅವಧಿ ಇದೇ ಸೆಪ್ಟೆ೦ಬರ್‍ ನಲ್ಲಿ ಕೊನೆಗೊಳ್ಳಲಿದ್ದು, ಅವರು ಈ ಹಿ೦ದೆ ಕೀನ್ಯಾ ತ೦ಡದ ಕೋಚ್ ಆಗಿ 2003ರ ವಿಶ್ವಕಪ್ ಸೆಮಿಫೈನಲ್‍ಗೆ  ಮುನ್ನಡೆಸಿದ್ದರು. ಕುತೂಹಲಕರ ಅ೦ಶವೆ೦ದರೆ ಈಗ ಸಿಎಸಿ ಸದಸ್ಯರಾಗಿರುವ ಸೌರವ್ ಗ೦ಗೂಲಿ, 1996ರಲ್ಲಿ ಪಾಟೀಲ್ ಅಲ್ಪಾವಾಧಿಗೆ ಭಾರತ ತ೦ಡದ ಕೋಚ್ ಆಗಿದ್ದಾಗಲೇ ಲಾಡ್ಸ್‍೯ನಲ್ಲಿ  ಟೆಸ್ಟ್ ಕ್ರಿಕೆಟ್‍ಗೆ ಪದಾಪ೯ಣೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com