ಜಿಂಬಾಬ್ವೆ 27 ರನ್ ಗಳಿಸುಷ್ಟರಲ್ಲೇ ಭಾರತದ ಪ್ರಮುಖ 3 ವಿಕೆಟ್ ಉರುಳಿಸುವ ಮೂಲಕ ಬ್ಯಾಟ್ಸ್ಮನ್ಗಳ ಮೇಲಿನ ಒತ್ತಡ ಹೆಚ್ಚಿಸಿತು. ಈ ಹಂತದಲ್ಲಿ ಕ್ರೀಸ್ಗೆ ಬಂದ ಕೇದಾರ್ ಜಾಧವ್ (58) ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಉಳಿದಂತೆ ಕೆ.ಎಲ್.ರಾಹುಲ್ (22), ಅಂಬಟಿ ರಾಯುಡು (20) ಮತ್ತು ಅಕ್ಷರ್ ಪಟೇಲ್ (20*) ಮಾತ್ರ ಎರಡಂಕಿ ಮೊತ್ತ ಗಳಿಸಿದರು.