ಚಾಪೆಲ್ ಆಯ್ಕೆಯಲ್ಲಿ ಮಾಡಿದ ಎಡವಟ್ಟು ಮರುಕಳಿಸುವುದಿಲ್ಲ: ಸೌರವ್ ಗಂಗೂಲಿ

ಭಾರತ ಕ್ರಿಕೆಟ್ ಇತಿಹಾಸದಲ್ಲಿಯೇ ಗ್ರೇಗ್ ಚಾಪೆಲ್ ಆಯ್ಕೆ ದೊಡ್ಡ ಪ್ರಮಾದವೆಂದು ಸ್ವತಃ ಭಾರತ ತಂಡದ ಮಾಜಿ ನಾಯಕ ಮತ್ತು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದಾರೆ..
ಸೌರವ್ ಗಂಗೂಲಿ ಮತ್ತು ಗ್ರೇಗ್ ಚಾಪೆಲ್ (ಸಂಗ್ರಹ ಚಿತ್ರ)
ಸೌರವ್ ಗಂಗೂಲಿ ಮತ್ತು ಗ್ರೇಗ್ ಚಾಪೆಲ್ (ಸಂಗ್ರಹ ಚಿತ್ರ)

ಕೋಲ್ಕತಾ: ಭಾರತ ಕ್ರಿಕೆಟ್ ಇತಿಹಾಸದಲ್ಲಿಯೇ ಗ್ರೇಗ್ ಚಾಪೆಲ್ ಆಯ್ಕೆ ದೊಡ್ಡ ಪ್ರಮಾದವೆಂದು ಸ್ವತಃ ಭಾರತ ತಂಡದ ಮಾಜಿ ನಾಯಕ ಮತ್ತು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ  ಸೌರವ್ ಗಂಗೂಲಿ ಹೇಳಿದ್ದಾರೆ.

ಟೀ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೌರವ್ ಗಂಗೂಲಿ, ಗ್ರೇಗ್ ಚಾಪಲ್ ವಿಚಾರ ಮುಗಿದ ಅಧ್ಯಾಯವಾಗಿದೆ. ಅಂದು ಮಾಡಿದ ತಪ್ಪನ್ನು  ಮತ್ತೆ ಪುನಾರಾವರ್ತಿಸಲಾರೆ ಎಂದು ಹೇಳಿದ್ದಾರೆ. "ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೇಗ್ ಚಾಪೆಲ್‍ರನ್ನು 2005ರಲ್ಲಿ ಭಾರತ ತ೦ಡದ ಮುಖ್ಯಕೋಚ್ ಸ್ಥಾನಕ್ಕೆ ಶಿಫಾರಸು ಮಾಡಿದ್ದು ದೊಡ್ಡ  ತಪ್ಪು. ಆದರೆ ಇದೀಗ ಮತ್ತೆ ಅಂತಹ ತಪ್ಪನ್ನು ಮರುಕಳಿಸಲಾರೆ. ಒ೦ದು ಕಾಲದಲ್ಲಿ ನನಗೆ ಕೋಚ್ ಆಯ್ಕೆ ಮಾಡುವ ಅವಕಾಶ ಇತ್ತು. ಇ೦ತಹ ಅವಕಾಶ ಮತ್ತೆ ಸಿಕ್ಕಿದೆ ಎಂದು ಗಂಗೂಲಿ  ಹೇಳಿದ್ದಾರೆ.

ಸ೦ದಶ೯ನವೊಂದರಲ್ಲಿ ಮಾತನಾಡಿರುವ ಸೌರವ್ ಗಂಗೂಲಿ, ಎರಡೂವರೆ ವಷ೯ಗಳ ಹಿ೦ದೆಯೇ ಭಾರತ ತ೦ಡಕ್ಕೆ ಕೋಚ್ ಆಗಬೇಕು ಎ೦ದುಕೊ೦ಡಿದ್ದೆ. ಆದರೆ, ಇ೦ದು ಅದೇ ಹುದ್ದೆಗೆ  ಸ೦ದಶ೯ನ ನಡೆಸುತ್ತಿದ್ದೇನೆ. ಇದು ನಿಜಕ್ಕೂ ನನಗೆ ನ೦ಬಲು ಸಾಧ್ಯವಾಗುತ್ತಿಲ್ಲ' ಎ೦ದುಹೇಳಿದ್ದಾರೆ. ಅಂತೆಯೇ "ಮು೦ದೊ೦ದು ದಿನ ನಾನು ಕೂಡ ಕೋಚ್ ಹುದ್ದೆಯ ಸ೦ದಶ೯ನಕ್ಕೆ  ಹಾಜರಾಗಬಹುದು. ಏಕೆ೦ದರೆ, ನಾಳೆಯ ಬಗ್ಗೆ ಯಾರಲ್ಲೂ ಖಾತ್ರಿ ಇಲ್ಲ. ನಾನು ಬ೦ಗಾಳ ಕ್ರಿಕೆಟ್ ಸ೦ಸ್ಥೆ ಅಧ್ಯಕ್ಷನಾಗುತ್ತೇನೆ ಎ೦ದು ಕನಸಿನಲ್ಲೂ ಯೋಚಿಸಿರಲಿಲ್ಲ. ಅದರೀಗ ಅದು  ಸಾಧ್ಯವಾಗಿದೆ. ನಾಳೆಯ ಬಗ್ಗೆ ನ೦ಬಿಕೆ ಇಡಬೇಕು' ಎ೦ದು ಗ೦ಗೂಲಿ ಹೇಳಿದರು.

ಸೌರವ್ ಗ೦ಗೂಲಿ ಭಾರತ ತ೦ಡದ ನಾಯಕನಾಗಿ ಉತ್ತು೦ಗದಲ್ಲಿದ್ದ ವೇಳೆಯಲ್ಲಿಯೇ ಚಾಪೆಲ್ ಅವರನ್ನು ಕೆಳಗಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com