ಸಿಕ್ಸರ್ ಮೂಲಕ 10ಕ್ಕೂ ಹೆಚ್ಚು ಬಾರಿ ಪಂದ್ಯ ಗೆಲ್ಲಿಸಿದ ಧೋನಿ

ಪ್ರತಿಷ್ಠಿತ ಟ್ರೋಫಿಗಳ ಗೆಲುವಿನಲ್ಲಿ ಸಿಕ್ಸ್ ಮೂಲಕ ಮ್ಯಾಚ್ ಫಿನಿಶ್ ಮಾಡಿದ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ...
ಎಂಎಸ್ ಧೋನಿ
ಎಂಎಸ್ ಧೋನಿ

ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ನಾಯಕರಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಬ್ಬರು. ಅಂತ ಧೋನಿ ಹಲವು ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪ್ರಮುಖ ಟ್ರೋಫಿಗಳಾ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಲೀಗ್ ಗೆದ್ದಿದ್ದಾರೆ. ಇಂತಹ ಪ್ರತಿಷ್ಠಿತ ಟ್ರೋಫಿಗಳ ಗೆಲುವಿನಲ್ಲಿ ಸಿಕ್ಸ್ ಮೂಲಕ ಮ್ಯಾಚ್ ಫಿನಿಶ್ ಮಾಡಿದ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 10ಕ್ಕೂ ಹೆಚ್ಚು ಪಂದ್ಯಗಳಲ್ಲಿ ಸಿಕ್ಸರ್ ಮೂಲಕ ಧೋನಿ ಪಂದ್ಯವನ್ನು ಮುಗಿಸಿದ್ದಾರೆ.

2011ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಕುಲಶೇಖರ ಎಸೆತದಲ್ಲಿ ಸಿಕ್ಸರ್ ಬಾರಿಸಿ ಭಾರತಕ್ಕೆ 2ನೇ ವಿಶ್ವಕಪ್ ತಂದುಕೊಟ್ಟರು.

2015ರಲ್ಲಿ ಜಿಂಬಾಬ್ವೆ ವಿರುದ್ಧ ಆಕ್ಲೆಂಡ್ ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದರು. 2013ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಬಾರಿಸಿ ಗೆಲವು.

2008ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಧೋನಿ ಪಾಕಿಸ್ತಾನದ ಯೂನಿಸ್ ಖಾನ್ ಎಸೆತದಲ್ಲಿ ಸಿಕ್ಸರ್ ಹೊಡೆದು ಪಂದ್ಯವನ್ನು ಗೆದ್ದಿದ್ದರು. 2007ರಲ್ಲಿ ಗ್ಯಾಲಿಯಾರ್ ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲೂ ಧೋನಿ ಸಿಕ್ಸರ್ ಬಾರಿಸಿ ಅಭಿಮಾನಿಗಳಿಗೆ ಗೆಲುವಿನ ನಗೆ ಬೀರಿದ್ದರು.

ಸಿಕ್ಸ್ ಮೂಲಕ ಪಂದ್ಯ ಮುಗಿಸುವುದೇ ಧೋನಿ ಕಲೆ. ಅಲ್ಲದೆ ಒಂದೇ ಪಂದ್ಯದಲ್ಲೂ 17 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com