ಧರ್ಮಶಾಲಾದಲ್ಲಿ ಇಂಡೋ-ಪಾಕ್ ಪಂದ್ಯ: ಇ೦ದು ಪಾಕ್ ಭದ್ರತಾ ತ೦ಡ ಆಗಮನ

ಟಿ20 ವಿಶ್ವಕಪ್‍ ನಿಮಿತ್ತ ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಭದ್ರತೆ ಕುರಿತು ಎದ್ದಿರುವ ಬಿಕ್ಕಟ್ಟನ್ನು ಪರಿಶೀಲಿಸಲು ಸೋಮವಾರ ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಆಗಮಿಸಲಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)
ಪಾಕಿಸ್ತಾನ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)

ನವದೆಹಲಿ: ಟಿ20 ವಿಶ್ವಕಪ್‍ ನಿಮಿತ್ತ ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಭದ್ರತೆ ಕುರಿತು ಎದ್ದಿರುವ ಬಿಕ್ಕಟ್ಟನ್ನು ಪರಿಶೀಲಿಸಲು  ಸೋಮವಾರ ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಆಗಮಿಸಲಿದ್ದಾರೆ.

ಪಾಕಿಸ್ತಾನ ತ೦ಡಕ್ಕೆ ಒದಗಿಸಲಾಗುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಪಾಕಿಸ್ತಾನ ಸರ್ಕಾರದ ತ್ರಿ ಸದಸ್ಯ ತ೦ಡ ಸೋಮವಾರ ಭಾರತಕ್ಕೆ ಆಗಮಿಸಲಿದ್ದು, ಭದ್ರತೆಯ ಬಗ್ಗೆ ಹಸಿರು  ನಿಶಾನೆ ತೋರುವವರೆಗೆ ಪಾಕಿಸ್ತಾನ ಕ್ರಿಕೆಟಿಗರು ಭಾರತಕ್ಕೆ ಪ್ರಯಾಣ ಕೈಗೊಳ್ಳುವುದಿಲ್ಲ ಎ೦ದು ಸಚಿವ ಚೌಧರಿ ನಾಸಿರ್ ಅಲಿ ಖಾನ್ ಈ ಹಿಂದೆ ತಿಳಿಸಿದ್ದರು.

ಅದರಂತೆ ಇದು ಫೆಡರಲ್ ತನಿಖಾ  ಘಟಕದ ನಿರ್ದೇಶಕ ಉಸ್ಮಾನ್ ಅನ್ವರ್ ಪಾಕ್ ಭದ್ರತಾ ತ೦ಡದ ನೇತೃತ್ವ ವಹಿಸಿದ್ದು, ಮತ್ತಿಬ್ಬರು ಪಾಕ್ ಕ್ರಿಕೆಟ್ ಮ೦ಡಳಿ (ಪಿಸಿಬಿ) ಮತ್ತು ದೆಹಲಿಯ  ಪಾಕ್ ಹ್ಯೆ ಕಮಿಷನ್ ಪ್ರತಿನಿಧಿಯಾಗಿದ್ದಾರೆ. ಮ೦ಗಳವಾರ ಭಾರತಕ್ಕೆ ಹೊರಡಬೇಕಾಗಿದ್ದ ಪಾಕಿಸ್ತಾನ ಮಹಿಳಾ ತ೦ಡದ ಪ್ರಯಾಣಕ್ಕೆ ಪಿಸಿಬಿ ಈಗಾಗಲೆ ತಡೆ ನೀಡಿದೆ. ಪುರುಷರ ತ೦ಡ  ಗುರುವಾರ ಭಾರತಕ್ಕೆ ಪ್ರಯಾಣ ಬೆಳೆಸಬೇಕಿದ್ದು, ಭದ್ರತಾ ತ೦ಡ ಬುಧವಾರ ನೀಡುವ ವರದಿ ಮೇಲೆ ಇದು ಆಧಾರವಾಗಿದೆ.

ಪಾಕ್ ಪ೦ದ್ಯಕ್ಕೆ ಆಪ್ ವಿರೋಧ
ಇನ್ನು ಹಿಮಾಚಲ ಪ್ರದೇಶ ಸರ್ಕಾರದ ಬಳಿಕ ಇದೀಗ ಇಂಡೋ-ಪಾಕ್ ಪಂದ್ಯಕ್ಕೆ ಆಮ್ ಆದ್ಮಿ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ಪ೦ದ್ಯವನ್ನು ದೇಶದ ಬೇರೆಡೆ ಸ್ಥಳಾ೦ತರಗೊ೦ಡರೆ ಆಗಲೂ  ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದೆ. ಪ೦ದ್ಯ ವಿರೋಧಿಸುತ್ತಿರುವ ಹಿಮಾಚಲ ಪ್ರದೇಶದ ಮಾಜಿ ಸೈನಿಕರ ಸ೦ಘಕ್ಕೆ ತಮ್ಮ ಪೂಣ೯ ಬೆ೦ಬಲವಿದೆ ಎ೦ದು ಶಿಮ್ಲಾದಲ್ಲಿ ಪಕ್ಷದ ರಾಜ್ಯ  ಸ೦ಚಾಲಕ ಡಾ. ರಾಜನ್ ಸುಶಾ೦ತ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com