ಭಾರತ ಸುರಕ್ಷತೆಯ ಭರವಸೆ ನೀಡದಿದ್ದರೆ ಪಾಕ್ ಟಿ20 ವಿಶ್ವಕಪ್‌ನಲ್ಲಿ ಆಡುವುದು ಅಸಾಧ್ಯ

ಟಿ20 ವಿಶ್ವಕಪ್ ಸಮರಕ್ಕೆ ದಿನಗಣನೆ ಶುರುವಾಗಿದ್ದು, ಈ ಮಧ್ಯೆ ಭಾರತ ಪಾಕಿಸ್ತಾನ ತಂಡಕ್ಕೆ ಸುರಕ್ಷತೆಯ ಭರವಸೆ ನೀಡಿದಿದ್ದರೆ ಟೂರ್ನಿಯಲ್ಲಿ ಭಾಗವಹಿಸುವ...
ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ
Updated on: 

ನವದೆಹಲಿ: ಟಿ20 ವಿಶ್ವಕಪ್ ಸಮರಕ್ಕೆ ದಿನಗಣನೆ ಶುರುವಾಗಿದ್ದು, ಈ ಮಧ್ಯೆ ಭಾರತ ಪಾಕಿಸ್ತಾನ ತಂಡಕ್ಕೆ ಸುರಕ್ಷತೆಯ ಭರವಸೆ ನೀಡಿದಿದ್ದರೆ ಟೂರ್ನಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಪಾಕ್ ಸರ್ಕಾರ ಹೇಳಿದೆ.

ಭಾರತ ಸರ್ಕಾರದಿಂದ ಪಾಕಿಸ್ತಾನ ಆಟಗಾರರು ಹಾಗೂ ಪ್ರೇಕ್ಷಕರಿಗೆ ಸುರಕ್ಷತೆಯ ಸ್ಪಷ್ಟ ಭರವಸೆಗಾಗಿ ಕಾಯುತ್ತಿರುವುದಾಗಿ ಪಾಕಿಸ್ತಾನ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಮಾರ್ಚ್ 19 ರಂದು ಪಾಕಿಸ್ತಾನ-ಭಾರತ ನಡುವಣ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಸುರಕ್ಷತೆಯ ದೃಷ್ಠಿಯಿಂದಾಗಿ ಐಸಿಸಿ ಪಂದ್ಯವನ್ನು ಧರ್ಮಶಾಲಾದಿಂದ ಕೊಲ್ಕತ್ತಾಗೆ ವರ್ಗಾಯಿಸಲಾಗಿತ್ತು. ಐಸಿಸಿಯ ಈ ಕ್ರಮವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಹ್ವಾನಿಸಿತ್ತು.

ಸುರಕ್ಷತೆಯ ದೃಷ್ಠಿಯಿಂದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಭಾರತ ನಡುವ ಹೈವೋಲ್ಟೋಜ್ ಪಂದ್ಯವನ್ನು ಕೊಲ್ಕತ್ತಾದ ಈಡನ್ ಗಾರ್ಡನ್ ವರ್ಗಾಯಿಸಲಾಗಿದೆ ಎಂದು ಐಸಿಸಿ ಮುಖ್ಯ ಕಾರ್ಯದರ್ಶಿ ಡೇವಿಡ್ ರಿಚರ್ಡ್ ಸನ್ ಹೇಳಿದ್ದರು.

ಸದ್ಯ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು, ಬಾಂಗ್ಲಾದೇಶ, ಆಫ್ಗಾನಿಸ್ತಾನ, ಐರ್ಲೆಂಡ್ ಹಾಗೂ ಒಮನ್ ತಂಡಗಳು ಸೆಣೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com