ಟಿ20 ವಿಶ್ವಕಪ್: ಭಾರತಕ್ಕೆ ಬರಲು ಸರ್ಕಾರದ ಅನುಮತಿ ಪಡೆದ ಪಾಕ್ ತಂಡ

ಈಗ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವುದಕ್ಕಾಗಿ ತನ್ನ ರಾಷ್ಟ್ರೀಯ ಪುರುಷರ ಹಾಗೂ ಮಹಿಳಾ ಕ್ರಿಕೆಟ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಈಗ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವುದಕ್ಕಾಗಿ ತನ್ನ ರಾಷ್ಟ್ರೀಯ ಪುರುಷರ ಹಾಗೂ ಮಹಿಳಾ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಸರ್ಕಾರ ಶುಕ್ರವಾರ ಅಧಿಕೃತವಾಗಿ ಅನುಮತಿ ನೀಡಿದೆ. ಇದರೊಂದಿಗೆ ಮಾರ್ಚ್ 19ರಂದು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಿಗದಿಯಾಗಿದ್ದ ಭಾರತ-ಪಾಕ್ ಪಂದ್ಯಕ್ಕಿದ್ದ ಆತಂಕ ದೂರವಾಗಿದೆ.
ಇಂದು ರಾತ್ರಿ ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡಗಳು ವಿಮಾನದ ಮೂಲಕ ಭಾರತಕ್ಕೆ ತೆರಳಲಿವೆ ಎಂದು ಜಿಯೋ ಟಿವಿ ವರದಿ ಮಾಡಿದೆ.
ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವ ಪಾಕಿಸ್ತಾನ ತಂಡಕ್ಕೆ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭರವಸೆ ನೀಡಿದ ನಂತರ ಪಾಕ್ ಸರ್ಕಾರ ತನ್ನ ತಂಡವನ್ನು ಕಳುಹಿಸಲು ಒಪ್ಪಿಗೆ ನೀಡಿದೆ.
ತಂಡದ ಭದ್ರತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಲಿಖಿತ ಭರವಸೆ ನೀಡುಬೇಕು ಎಂದು ಪಾಕ್ ಸರ್ಕಾರ ನಿನ್ನೆ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಭಾರತ ಪಾಕ್ ತಂಡಕ್ಕೆ ಸಂಪೂರ್ಣ ಭದ್ರತೆ ನೀಡುವುದಾಗಿ ಪಾಕಿಸ್ತಾನ ಹೈಕಮಿಷನರ್ ಗೆ ಭರವಸೆ ನೀಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕ್ರಿಕೆಟ್ ತಂಡ ಭಾರತಕ್ಕೆ ತೆರಳಲು ಅನುಮತಿ ನೀಡಲು ಸಾಧ್ಯವಿಲ್ಲ. ಪಾಕ್ ಆಟಗಾರರು ಭಾರತದಲ್ಲಿ ಆಡುವಾಗ ಯಾವುದೇ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಪಾಕ್ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭದ್ರತೆ ಕುರಿತು ಬೆದರಿಕೆ ಇರುವಾಗ ನಿರಾಳವಾಗಿ ಕ್ರಿಕೆಟ್ ಆಡಲು ಹೇಗೆ ಸಾಧ್ಯ. 1 ಲಕ್ಷ ವೀಕ್ಷಕರ ಸಾಮರ್ಥವಿರುವ ಈಡನ್ ಗಾರ್ಡನ್ ನಲ್ಲಿ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಪಾಕ್ ಆಂತರಿಕ ಸಚಿವರು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com