

ನಾಗ್ಪುರ: 2016ರ ಟಿ20 ವಿಶ್ವಕಪ್ ಗೆ ಕ್ಷಣಗಣನೆ ಶುರುವಾಗಿದ್ದು ಇಂದಿನಿಂದ ಆರಂಭಗೊಳ್ಳಲಿರುವ ಪ್ರಧಾನ ಘಟ್ಟದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
2007ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ಹಾಗೂ ಪ್ರಶಸ್ತಿ ಫೇವರಿಟ್ ಎಂದೇ ಕರೆಸಿಕೊಳ್ಳುತ್ತಿರುವ ಧೋನಿ ಪಡೆಗೆ ಮೊದಲ ಪಂದ್ಯವೇ ಅಗ್ನಿ ಪರೀಕ್ಷೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಟಿ20 ಪಂದ್ಯಾವಳಿಯಲ್ಲಿ ಒಮ್ಮೆಯೂ ನ್ಯೂಜಿಲೆಂಡ್ ವಿರುದ್ಧ ಭಾರತ ಜಯ ಸಾಧಿಸಿಲ್ಲ. ಹೀಗಾಗಿ ಪಂದ್ಯ ಗೆದ್ದು ಇತಿಹಾಸವನ್ನು ಪುನರ್ರಚಿಸುಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ ಇದೆ.
ನ್ಯೂಜಿಲೆಂಡ್ ಹಾಗೂ ಭಾರತ ಇದುವರೆಗೂ ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಕಿವೀಸ್ ಸಂಪೂರ್ಣ ಪ್ರಾಬಲ್ಯ ಮೆರೆದಿರುವುದು ಅದರ ಪ್ರಭುತ್ವಕ್ಕೆ ಸಾಕ್ಷಿಯಾಗಿದೆ. ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿರುವ ಭಾರತ ನಾಲ್ಕನೇ ರ್ಯಾಂಕಿಂಗ್ ನಲ್ಲಿರುವ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಪ್ರತಿಷ್ಠೆಯ ಪಂದ್ಯವಾಗಿದೆ.
ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾದಿ೯ಕ್ ಪಾ೦ಡ್ಯ, ಎಂಎಸ್ ಧೋನಿ, ರವೀ೦ದ್ರ ಜಡೇಜಾ, ಆರ್. ಅಶ್ವಿನ್, ಜರ್ಪೀತ್ ಬುಮ್ರಾ, ಆಶಿಶ್ ನೆಹ್ರಾ, ಮೊಹಮ್ಮದ್ ಶಮಿ.
ನ್ಯೂಜಿಲೆ೦ಡ್: ಮಾಟಿ೯ನ್ ಗುಪ್ಟಿಲ್, ಕೇನ್ ವಿಲಿಯಮ್ಸನ್, ಕಾಲಿನ್ ಮುನ್ರೋ, ರಾಸ್ ಟೇಲರ್, ಕೋರಿ ಆ೦ಡರ್‍ಸನ್, ಗ್ರಾ೦ಟ್ ಎಲಿಯಟ್, ಲ್ಯೂಕ್ ರಾ೦ಚಿ, ಮಿಚೆಲ್ ಸ್ಯಾ೦ಟೆ್ನರ್/ನಾಥನ್ ಮೆಕ್ಕಲ೦, ಟಿಮ್ ಸೌಥಿ, ಟ್ರೇ೦ಟ್ ಬೌಲ್ಟ್, ಮಿಚೆಲ್ ಮೆಕ್ಲೀನಘನ್ /ಆಡ೦ ಮಿಲ್ನೆ