

ಕೊಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್ ಅವರ ಕಳಚಿದ ಶೂವನ್ನು ತಂದುಕೊಟ್ಟು ಶಾಹಿದ್ ಅಫ್ರಿದಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 5 ವಿಕೆಟ್ ನಷ್ಟಕ್ಕೆ ಭರ್ಜರಿ 201 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿತು. ಶಾಹಿದ್ ಅಫ್ರಿದಿ 8ನೇ ಓವರ್ ನಲ್ಲಿ ಶಕೀಬ್ ಅಲ್ ಹಸನ್ ಸಿಂಗಲ್ ರನ್ ಗಳಿಸುವ ಆತುರದಲ್ಲಿ ಅವರ ಶೂ ಕಳಚಿತು. ಈ ವೇಳೆ ಅಫ್ರಿದಿ ಅವರು ಶೂವನ್ನು ಶಕೀಬ್ ಅವರಿಗೆ ತಂದು ಕೊಟ್ಟ ಪ್ರಸಂಗ ನಡೆಯಿತು.