ಕೊಲ್ಕತ್ತಾ: ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್‌ಗಳ ಗೆಲುವು ಸಾಧಿಸಿತು. ವಿಶ್ವಕಪ್ ಪಂದ್ಯಗಳಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನದ ವಿರುದ್ಧ ಭಾರತ ಯಾವತ್ತೂ ಸೋಲಲೇ ಇಲ್ಲ. ಪ್ರತೀ ಸಾರಿಯೂ ಭಾರತ ವಿರುದ್ಧ ಗೆಲುವು ಸಾಧಿಸಲು ಪಾಕಿಸ್ತಾನ ಹಪಾಹಪಿಸುತ್ತಿದ್ದರೂ, ಅವರ ಗೆಲುವಿನ ಕನಸು ನನಸಾಗಲು ಟೀಂ ಇಂಡಿಯಾ ಬಿಡಲೇ ಇಲ್ಲ.