
ಬೆಂಗಳೂರು: ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ಉಂಟಾದ ಕಲಹದ ಬಗ್ಗೆ ಪ್ರತಿಕ್ರಿಯಿಸಿರುವ ವೇಗಿ ಆಶೀಶ್ ನೆಹ್ರಾ ಅವರು, ನಾನು ಹಳೇಯ ನೊಕಿಯಾ ಮೊಬೈಲ್ ಬಳಸುತ್ತಿದ್ದೇನೆ. ಹೀಗಾಗಿ ನಾನು ಫೇಸ್ ಬುಕ್, ಟ್ವೀಟರ್, ವಾಟ್ಸ್ ಆಪ್ ಗಳನ್ನು ನೋಡುವುದಿಲ್ಲ ಹೀಗಾಗಿ ನನಗೆ ಭಾರತ-ಬಾಂಗ್ಲಾ ಕ್ರಿಕೆಟ್ ವೈರತ್ವದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಭಾರತ-ಬಾಂಗ್ಲಾ ಕ್ರಿಕೆಟ್ ವೈರತ್ವದ ಬಗ್ಗೆ ಬಾಂಗ್ಲಾ ಪರ್ತಕರ್ತರು ಕೇಳಿದ ಪ್ರಶ್ನೆ ಉತ್ತರಿಸಿದ ನೆಹ್ರಾ, ನೀವು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸುವ ಸೂಕ್ತ ವ್ಯಕ್ತಿ ನಾನಲ್ಲ. ನನ್ನ ಬಳಿ ಹಳೆಯ ನೋಕಿಯಾ ಮೊಬೈಲ್ ಇದೆ. ಅದರಲ್ಲಿ ಸಾಮಾಜಿಕ ಜಾಲತಾಣಗಳನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಬಾಂಗ್ಲಾ-ಭಾರತ ಪಂದ್ಯ ನಡೆಯಲಿದ್ದು ಈ ಕುರಿತು ಮಾತನಾಡಿದ ಅವರು, ನಮ್ಮ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಎಲ್ಲ ಆಟಗಾರರು ಉತ್ತಮವಾಗಿ ಆಟವಾಡುತ್ತಿದ್ದಾರೆ ಎಂದರು.
Advertisement