ಕೊಹ್ಲಿಯ ಫಿಟ್ನೆಸ್ ರಹಸ್ಯ ಆ 'ಮಿನರಲ್ ವಾಟರ್‌'!

ಒಂದು ಲೀಟರ್‌ಗೆ 600 ರು. ಬೆಲೆಯಿರುವ ಮಿನರಲ್ ವಾಟರ್‌ನ್ನೇ ವಿರಾಟ್ ಕೊಹ್ಲಿ ಕುಡಿಯುತ್ತಾರಂತೆ. ಫ್ರೆಂಚ್ ಕಂಪನಿ ಎವಿಯನ್‌ನ ಮಿನರಲ್‌ವಾಟರ್ ಇದು. ಆಲ್ಫ್ಸ್ ...
ವಿರಾಟ್  ಕೊಹ್ಲಿ
ವಿರಾಟ್ ಕೊಹ್ಲಿ
ಗಂಟೆಗೆ 140 ಕಿಮೀ ವೇಗದಲ್ಲಿ ಬರುವ ಕ್ರಿಕೆಟ್ ಬಾಲ್‌ನ್ನು ಅದರ ದುಪಟ್ಟು ವೇಗದಲ್ಲಿ ಸಿಕ್ಸರ್ ಹೊಡೆಯುತ್ತಿದ್ದ ಮಹೇಂದ್ರ ಸಿಂಗ್ ಧೋನಿಯಲ್ಲಿ, ನಿಮಗೆ ಅಷ್ಟೊಂದು ಶಕ್ತಿ ಎಲ್ಲಿಂದ ಬರುತ್ತದೆ? ಎಂದು ಕೇಳಿದಾಗ ಆತ ನಾನು ದಿನಾ ಆರು ಲೀಟರ್ ಹಾಲು ಕುಡಿಯುತ್ತೇನೆ ಎಂದಿದ್ದರು (ಅದು ಸುಮ್ನೆ ತಮಾಷೆಗೆ ಹೇಳಿದ್ದು ಎಂದು ಆಮೇಲೆ ಗೊತ್ತಾಯ್ತು). ಇದೀಗ ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸುತ್ತಿರುವ ವಿರಾಟ್‌ಕೊಹ್ಲಿ ಮತ್ತು ಕ್ರೀಸ್‌ನಲ್ಲಿ ಹೊಡೆಬಡಿ ಆಟವಾಡುವ ಕ್ರಿಸ್ ಗೇಲ್ ರನ್ನು ನೋಡಿದಾಗ, ಅವರ ಫಿಟ್ನೆಸ್, ಸಾಮರ್ಥ್ಯವನ್ನು ನೋಡಿದಾಗ ಇವರು ಹೊಟ್ಟೆಗೇನು ತಿನ್ನುತ್ತಾರಪ್ಪಾ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಯಾವುದೇ ಕ್ರೀಡಾಪಟುವಾಗಲಿ ಆತನ ಆಹಾರ ಕ್ರಮ ಸರಿಯಾಗಿದ್ದರೆ ಆರೋಗ್ಯವೂ ಫಿಟ್ ಆಗಿರುತ್ತದೆ. ಇದೀಗ ಟಿ20 ಕ್ರಿಕೆಟ್ ಅಬ್ಬರವಿರುವುದರಿಂದ ಕೆಲವೊಂದು ಕ್ರಿಕೆಟ್‌ಪಟುಗಳ ಆಹಾರದ ಮೆನು ಏನಿದೆ? ಎಂದು ನೋಡೋಣ
ವಿರಾಟ್ ಕೊಹ್ಲಿ
ಒಂದು ಲೀಟರ್‌ಗೆ 600 ರು. ಬೆಲೆಯಿರುವ ಮಿನರಲ್ ವಾಟರ್‌ನ್ನೇ ವಿರಾಟ್ ಕೊಹ್ಲಿ ಕುಡಿಯುತ್ತಾರಂತೆ. ಫ್ರೆಂಚ್ ಕಂಪನಿ ಎವಿಯನ್‌ನ ಮಿನರಲ್‌ವಾಟರ್  ಇದು. ಆಲ್ಫ್ಸ್ ಪರ್ವತಗಳಲ್ಲಿ ಹರಿವ ಕಣಿವೆಗಳಿಂದ ತಂದ ಶುದ್ಧಜಲವಾಗಿದೆ ಇದು. ವಿದೇಶ ಪ್ರವಾಸಗಳಲ್ಲಿರುವಾಗ ಆಡಿನ ಮಾಂಸ, ಪಿಂಕ್ ಸಾಲ್ಮನ್ ಮೀನು ಕೊಹ್ಲಿಗೆ ಇಷ್ಟವಾದುದು. ಚಾಕ್ಲೇಟ್ ಕೂಡಾ ಈತನಿಗೆ ಇಷ್ಟವಂತೆ
ಫಾಫ್ ಡ್ಯೂ ಪ್ಲೆಸಿಸ್ 
 ಹಾಲು ಮತ್ತು ಜೇನು ಈತನ ಮೆನುವಿನಲ್ಲಿ ಇದ್ದೇ ಇರುತ್ತದೆ. ನಾರಿನಂಶವಿರುವ ಆಹಾರಕ್ಕಾಗಿ ಈತ ಓಟ್ಸ್‌ನ್ನು ಹಾಲು -ಜೇನು ಮಿಶ್ರಣದಲ್ಲಿ ಬೆರೆಸಿ ಕುಡಿಯುತ್ತಾನೆ. ಕೋಳಿ ಮಾಂಸ ಮತ್ತು ಮೀನು ಈತನಿಗಿಷ್ಟ. ಪಿಜ್ಜಾ ಮತ್ತು ಚಾಕ್ಲೇಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆದಲ್ಲ ಎಂದು ಗೊತ್ತಿದ್ದರೂ ಡ್ಯುಪ್ಲೆಸಿ ಅದನ್ನು ತಿನ್ನದೇ ಬಿಡುವುದಿಲ್ಲ.
ಕ್ರಿಸ್ ಗೇಲ್
ಹಣ್ಣು, ತರಕಾರಿ ಮತ್ತು ಮಾಂಸ ಎಲ್ಲವೂ ಈತನ ಬೆಳಗ್ಗಿನ ತಿಂಡಿಯಲ್ಲಿರುತ್ತದೆ. ಕಾರ್ಬೋಹೈಡ್ರೇಟ್ಸ್ ಲಭಿಸಲು ದಿನಾ ಎರಡು ಬಾರಿ ಈತ ಪಾಸ್ತಾ ಸೇವಿಸುತ್ತಾನೆ. ಕರೀಬಿಯನ್ ದ್ವೀಪದ ಸಾಂಪ್ರದಾಯಿಕ ತಿಂಡಿಗಳೆಂದರೆ ಈತನಿಗೆ ಅಚ್ಚುಮೆಚ್ಚು.
ರೋಹಿತ್ ಶರ್ಮಾ
ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೈಪ್ರೋಟೀನ್ ಇರುವ ಆಹಾರಗಳು. ಆಲೂ ಪರಾಟ ಈತನ ಫೇವರಿಟ್ 
ಯುವರಾಜ್ ಸಿಂಗ್ 
ಮೊಟ್ಟೆ, ಕೋಳಿ ಮಾಂಸ ಮತ್ತು ಹಾಲು
ಫೇವರಿಟ್ - ಕಡೀ ಚಾವಲ್, ಮಟರ್ ಪನೀರ್
ಮಹೇಂದ್ರ ಸಿಂಗ್ ಧೋನಿ
ಗಂಜಿ, ಬೇಳೆ ಕಾಳು, ಹಣ್ಣಿನ ರಸ, ಡ್ರೈ ಫ್ರೂಟ್ಸ್
ಫೇವರಿಟ್ - ಬಟರ್ ಚಿಕನ್
ಶೇನ್ ವಾಟ್ಸನ್
ಧವಸ ಧಾನ್ಯ  ಮತ್ತು ಹಣ್ಣು ಹಂಪಲುಗಳು
ಫೇವರಿಟ್- ಪೈನಾಪಲ್ ಪಿಜ್ಜಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com