ಮೊಹಾಲಿ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಭಾರತ ಮಹಿಳಾ ಕ್ರಿಕೆಟ್ ತಂಡ

ಟಿ20 ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಎಂದೇ ಕರೆಯಲಾಗುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ಪಂದ್ಯಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಸಾಕ್ಷಿಯಾಗಿದ್ದರು.
ಇಂಡೋ-ಆಸಿಸ್ ಪಂದ್ಯದ ವೇಳೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ
ಇಂಡೋ-ಆಸಿಸ್ ಪಂದ್ಯದ ವೇಳೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ

ಮೊಹಾಲಿ: ಟಿ20 ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಎಂದೇ ಕರೆಯಲಾಗುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ಪಂದ್ಯಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು  ಸಾಕ್ಷಿಯಾಗಿದ್ದರು.

ಮೊಹಾಲಿಯಲ್ಲಿ ಮಧ್ಯಾಹ್ನ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿದ್ದ ಮಹಿಳಾ ಕ್ರಿಕೆಟ್ ತಂಡ 3 ರನ್ ಗಳ ಅಂತರದಿಂದ ರೋಚಕ ಸೋಲು ಕಂಡಿತ್ತು. ಅದೇ ಮೈದಾನದಲ್ಲಿ ಪುರುಷರ ತಂಡ  ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದ್ದರಿಂದ ತಂಡವನ್ನು ಚಿಯರ್ ಮಾಡುವ ನಿಟ್ಟಿನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಅಲ್ಲೇ ಉಳಿಯಿತು.

ಕೇವಲ ಪಂದ್ಯವನ್ನು ನೋಡುವುದಷ್ಟೇ ಅಲ್ಲದೇ ಭಾರತೀಯ ಕ್ರಿಕೆಟಗರನ್ನು ಕೂಡ ಹುರಿದುಂಬಿಸಿದರು. ಆಸ್ಟ್ರೇಲಿಯಾದ ವಿಕೆಟ್ ಬಿದ್ದಾಗ ಮತ್ತು ಭಾರತದ ಪರ ಕೊಹ್ಲಿ ಮತ್ತು ಯುವರಾಜ್ ಸಿಂಗ್  ಬೌಂಡರಿಗಳನ್ನು ಭಾರಿಸುತ್ತಿದ್ದಾಗ ಮಹಿಳಾ ಕ್ರಿಕೆಟ್ ತಂಡ ಸದಸ್ಯರು ಸಂಭ್ರಮಾಚರಣೆ ಮಾಡುತ್ತಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಇನ್ನು ಈ ಪಂದ್ಯಕ್ಕೂ ಮೊದಲು ನಡೆದ ಮಹಿಳಾ  ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು. ಆಗ ಭಾರತದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಅವರು ಕ್ರೀಡಾಂಗಣದಲ್ಲಿದ್ದು, ಮಹಿಳಾ ಕ್ರಿಕೆಟ್ ತಂಡವನ್ನು  ಹುರಿದುಂಬಿಸಿದ್ದರು.

ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ವೇಳೆಯಲ್ಲಿಯೂ ಭಾರತ ಹಾಕಿ ತಂಡ ಬಿಸಿಸಿಐ ಆಹ್ವಾನದ ಮೇರೆಗೆ ಕ್ರೀಡಾಂಗಣಕ್ಕೆ ಆಗಮಿಸಿ ಭಾರತ ಕ್ರಿಕೆಟ್ ತಂಡವನ್ನು ಹುರಿದುಂಬಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com