ಅಂತೆಯೇ ಭಾರತದ ವಿಚಾರಕ್ಕೆ ಬರುವುದಾದರೆ ಆಸ್ಚ್ರೇಲಿಯಾ ವಿರುದ್ಧದ ದೊಡ್ಡ ಮೊತ್ತದ ಗುರಿಯ ಪಂದ್ಯವನ್ನು ಹೊರತು ಪಡಿಸಿದರೆ ಭಾರತ ಗೆದ್ದ ಉಳಿದೆಲ್ಲಾ ಪಂದ್ಯಗಳಲ್ಲಿ ತನ್ನ ಬೌಲಿಂಗ್ ಸಾಮರ್ಥ್ಯದಿಂದಲೇ ಗೆದ್ದಿದೆ. ಬಾಂಗ್ಲಾದೇಶದ ವಿರುದ್ಧ ಸೋಲುವ ಪಂದ್ಯವನ್ನು ಮತ್ತು ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದು, ಭಾರತೀಯ ಬೌಲರ್ ಗಳು ಎಂಬುದನ್ನು ಮರೆಯಬಾರದು. ಹೀಗಾಗಿ ಭಾರತದ ಬೌಲಿಂಗ್ ಪಡೆಯನ್ನು ಆ ತಂಡ ಪ್ರಮುಖ ಅಸ್ತ್ರವೆಂದು ಪರಿಗಣಿಸಿದರೂ ತಪ್ಪಿಲ್ಲ. ಅಶ್ವಿನ್, ರವೀಂದ್ರ ಜಡೇಜಾ, ಬಾಂಗ್ಲಾ ಪಂದ್ಯದ ಹೀರೋ ಪಾಂಡ್ಯಾ, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾಹ್ ಮತ್ತು ಹಿರಿಯ ವೇಗಿ ಆಶೀಶ್ ನೆಹ್ರಾ ತಂಡ ಪ್ರಮುಖ ಬೌಲಿಂಗ್ ಅಸ್ತ್ರಗಳಾದರೆ, ರೈನಾ ಪಾರ್ಟ್ ಟೈಮ್ ಬೌಲರ್ ಆಗಿ ಯಶಸ್ವಿಯಾಗಿರುವುದು ತಂಡಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.