
ಬೆಂಗಳೂರು: ಕ್ರೀಡಾಸಕ್ತರನ್ನು ಸೆಳೆಯುವ ದೃಷ್ಠಿಯಿಂದ ರಿಲಯನ್ಸ್ ಜಿಯೋ ಇಫೋಕಾಮ್ ಲಿಮಿಟೆಡ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಿದೆ.
ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಪ್ರೇಮಿಗಳು ಹೈ-ಸ್ಪೀಡ್ ವೈಫೈ ಬಳಸಿಕೊಳ್ಳಬಹುದು. ಕ್ರಿಕೆಟ್ ವೀಕ್ಷಿಸಲು ಬರುವ ಪ್ರೇಕ್ಷಕರು ತಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಸೇವೆ ಪಡೆಯಬಹುದು. ಇಡೀ ಸ್ಟೇಡಿಯಂನಲ್ಲಿ ಈ ಸೇವೆ ಚಾಲ್ತಿಯಲ್ಲಿರುತ್ತದೆ.
ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಒಟ್ಟು ಆರು ಅಂತಾರಾಷ್ಟ್ರೀಯ ಸ್ಟೇಡಿಯಂಗಳಲ್ಲಿ ಫ್ರೀ ವೈಫೈ ವ್ಯವಸ್ಥೆ ಮಾಡಲಾಗಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ, ಕೋಲ್ಕತದ ಈಡನ್ ಗಾರ್ಡನ್ಸ್, ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನ, ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂ ಹಾಗೂ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವೈಫೈ ಸೇವೆ ಲಭ್ಯವಿದೆ.
ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ವೇಳೆಯಲ್ಲೂ ಜಿಯೋ ಇಫೋಕಾಮ್ ಲಿಮಿಟೆಡ್ ವೈಫೈ ವ್ಯವಸ್ಥೆ ಮಾಡಿತ್ತು.
Advertisement