ಐಪಿಎಲ್ ಪ್ಲೇ ಆಫ್ ರೇಸ್ ನಲ್ಲಿ ಬಲಿಷ್ಠ 6 ತಂಡಗಳು

ಐಪಿಎಲ್ 9ನೇ ಆವೃತ್ತಿಯ ಮಹಾ ಸಮರದ ಹಾದಿ ಇದೀಗ ಕಠಿಣವಾಗುತ್ತಿದೆ. ಪ್ಲೇ ಆಫ್ ರೇಸ್ ನಲ್ಲಿರುವ 6 ತಂಡಗಳಿಗೆ ಮುಂದಿನ ಪಂದ್ಯಗಳು ಮಾಡು ಇಲ್ಲವೆ ಮಡಿ...
ತಂಡಗಳು
ತಂಡಗಳು
Updated on

ಐಪಿಎಲ್ 9ನೇ ಆವೃತ್ತಿಯ ಮಹಾ ಸಮರದ ಹಾದಿ ಇದೀಗ ಕಠಿಣವಾಗುತ್ತಿದೆ. ಪ್ಲೇ ಆಫ್ ರೇಸ್ ನಲ್ಲಿರುವ 6 ತಂಡಗಳಿಗೆ ಮುಂದಿನ ಪಂದ್ಯಗಳು ಮಾಡು ಇಲ್ಲವೆ ಮಡಿ ಪಂದ್ಯಗಳಾಗಿವೆ.

ಐಪಿಎಲ್ ನಲ್ಲಿ ಇಲ್ಲಿಯವರೆಗೂ 48 ಪಂದ್ಯ ನಡೆದಿದ್ದು, ಇನ್ನು 8 ಲೀಗ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಪ್ಲೇ ಆಫ್ಗೇರಲು ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ಶುರುವಾಗಿದೆ. ಇದರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮಾತ್ರ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರೆ. ಇನ್ನು ಉಳಿದ ಮೂರು ಸ್ಥಾನಕ್ಕೆ ಕೆಕೆಆರ್, ಮುಂಬೈ, ಡೆಲ್ಲಿ, ಆರ್ಸಿಬಿ ಹಾಗೂ ಗುಜರಾತ್ ಲಯನ್ಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.

ಬೌಲಿಂಗ್ ವೈಪಲ್ಯದಿಂದಾಗಿ ಸತತ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಹಿಂದಿನ ಪಂದ್ಯಗಳಲ್ಲಿ ಜಯ ಗಳಿಸಿ ಪ್ಲೇ ಆಫ್ ಕನಸನ್ನು ಜೀವಂತ ಉಳಿಸಿಕೊಂಡಿದೆ. ಇನ್ನು ಉಳಿದಿರುವ ಎರಡು ಪಂದ್ಯಗಳಲ್ಲಿ ಗೆದ್ದರೆ ಉತ್ತಮ ರನ್ ರೇಟ್ ಹೊಂದಿರುವ ಆರ್ಸಿಬಿ ಪ್ಲೇ ಆಫ್ ಗೆ ಸುಲಭವಾಗಿ ಎಂಟ್ರಿ ಕೊಡಲಿದೆ.

ಸನ್ ರೈಸರ್ಸ್ ಹೈದರಾಬಾದ್
ಐಪಿಎಲ್ 9ನೇ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇನ್ನೆರಡು ಪಂದ್ಯದಲ್ಲಿ ಹೀನಾಯವಾಗಿ ಸೋತರು ವಾರ್ನರ್ ಪಡೆಗೆ ಯಾವುದೇ ತೊಂದರೆ ಇಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್
ಐಪಿಎಲ್ 9ನೇ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ 7 ಪಂದ್ಯಗಳಲ್ಲಿ ಗೆದ್ದು 14 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನಿರುವ ಎರಡು ಪಂದ್ಯ ಗೆಲ್ಲಬೇಕಿದೆ. ಕೆಕೆಆರ್ ಗೆ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಗೇರುವ ಅವಕಾಶವಿದ್ದರು, ಉಳಿದ ತಂಡಗಳ ಪಂದ್ಯಗಳ ಫಲಿತಾಂಶ ಅವಲಂಬಿಸಬೇಕಾಗುತ್ತದೆ.

ಮುಂಬೈ ಇಂಡಿಯನ್ಸ್
ಐಪಿಎಲ್ ನ ಹಾಲಿ ಚಾಂಪಿಯನ್ ಆಗಿರುವ ಮುಂಬೈ ತಂಡ 13 ಪಂದ್ಯಗಳನ್ನಾಡಿ 7 ಪಂದ್ಯದಲ್ಲಿ ಗೆದ್ದು 14 ಅಂಕಗಳ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು ಉಳಿದಿರುವ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಸ್ಥಾನ ಖಾತ್ರಿಯಾಗಲು ಡೆಲ್ಲಿ ಹಾಗೂ ಆರ್ಸಿಬಿ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ರನ್ ರೇಟ್ ಲೆಕ್ಕಾಚಾರದಲ್ಲಿ ಇವೆರಡು ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡ ಹಿಂದಿದೆ.

ಡೆಲ್ಲಿ ಡೇರ್ ಡೆವಿಲ್ಸ್

ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ 11 ಪಂದ್ಯಗಳನ್ನು ಆಡಿದ್ದು 6 ರಲ್ಲಿ ಜಯ ಗಳಿಸಿ 12 ಅಂಕಗಳನ್ನು ಪಡೆದಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ಜೀವಂತ. ಒಂದು ವೇಳೆ 2 ಪಂದ್ಯಗಲ್ಲಿ ಗೆದ್ದರೂ ಪ್ಲೇ ಆಫ್ ಕನಸು ಕೈಬಿಡಬೇಕಾಗುತ್ತದೆ.

ಗುಜರಾತ್ ಲಯನ್ಸ್
ಐಪಿಎಲ್ ಟೂರ್ನಿಯಲ್ಲಿ ಸತತ ಗೆಲುವಿನ ಬಳಿಕ ಇದೀಗ ಮಂಕಾಗಿರುವ ಗುಜರಾತ್ ಲಯನ್ಸ್ ತಂಡ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 1 ಪಂದ್ಯವನ್ನು ಗೆದ್ದರೆ ರನ್ ರೇಟ್ ಲೆಕ್ಕಾಚಾರವನ್ನು ಅವಲಂಬಿಸಬೇಕಾಗುತ್ತದೆ. ಟೂರ್ನಿಯಲ್ಲಿ ಆಡಿರುವ 12 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿ 12 ಅಂಕಗಳ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ನಿನ್ನೆ ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಆರ್ಸಿಬಿ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೆ ಯಾವುದೇ ಅಡೆ ತಡೆ ಇಲ್ಲದೆ ಸರಾಗವಾಗಿ ಪ್ಲೇ-ಆಫ್ ಗೇರಬಹುದು. ಉತ್ತಮ ರನ್ ರೇಟ್ ಹೊಂದಿರುವ ಆರ್ಸಿಬಿ ಒಂದು ಪಂದ್ಯ ಗೆದ್ದರೂ ರನ್ ರೇಟ್ ವರದಾನವಾಗಲಿದೆ. ಇನ್ನು ತವರಿನಲ್ಲಿ ಪಂಜಾಬ್ ವಿರುದ್ಧ ಸೆಣಸಲಿದೆ. ಮುಂದಿನ ಪಂದ್ಯ ಡೆಲ್ಲಿ ಮತ್ತು ಆರ್ಸಿಬಿಗೆ ಕೊನೇ ನಾಕೌಟ್ ಪಂದ್ಯವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com