ತಂಡದ ಸಂಘಟಿತ ಹೋರಾಟಕ್ಕೆ ಸಿಕ್ಕ ಪ್ರತಿಫಲ: ಡೇವಿಡ್ ವಾರ್ನರ್

ಗೆಲುವಿನ ಸಂಪೂರ್ಣ ಶ್ರೇಯ ತಂಡದ ಬೌಲರ್ ಗಳಿಗೆ ಸಲ್ಲಬೇಕು. ಒತ್ತಡದ ಸಂದರ್ಭವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು ಎಂದು ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ...
ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (ಸಂಗ್ರಹ ಚಿತ್ರ)
ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (ಸಂಗ್ರಹ ಚಿತ್ರ)

ಬೆಂಗಳೂರು: ಗೆಲುವಿನ ಸಂಪೂರ್ಣ ಶ್ರೇಯ ತಂಡದ ಬೌಲರ್ ಗಳಿಗೆ ಸಲ್ಲಬೇಕು. ಒತ್ತಡದ ಸಂದರ್ಭವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು ಎಂದು ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೇವಿಡ್ ವಾರ್ನರ್ "ತಂಡದ ಸಂಘಟಿತ ಹೋರಾಟದ ಫಲವಾಗಿ ಬೆಂಗಳೂರು ತಂಡದ ವಿರುದ್ಧ ಗೆದ್ದು ಐಪಿಎಲ್ ಚಾಂಪಿಯನ್ ಆಗಲು  ಸಾಧ್ಯವಾಯಿತು. ಎಲ್ಲಾ ಆಟಗಾರರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಇಂಥಹ ತಂಡದ ನಾಯಕತ್ವ ವಹಿಸಿಕೊಳ್ಳುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ಟೂರ್ನಿಯ ಎಲ್ಲಾ  ಪಂದ್ಯಗಳಲ್ಲಿಯೂ ಅತ್ಯುತ್ತಮ ಆಟ ಪ್ರದರ್ಶಿಸಿ ಫೈನಲ್ ಪ್ರವೇಶಿಸಿದ್ದೇವೆನ್ನುವ ಸಮಾಧಾನ ನಮಗಿದೆ. ತಂಡದ ಈ ಸಾಧನೆಗಾಗಿ ನಾವು ಸಾಕಷ್ಟು ಶ್ರಮಿಸಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಎದುರಾಳಿ ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾರ್ನರ್ "ವಿರಾಟ್ ಕೊಹ್ಲಿ ಒಬ್ಬ ಅತ್ಯುತ್ತಮ ನಾಯಕ. ಇಂತಹ ಆಟಗಾರನನ್ನು ಎದುರಿಸುವಾಗ ನಮ್ಮ  ಸವಾಲು 200 ದಾಟಿರಬೇಕೆಂದುಕೊಂಡಿದ್ದೆವು. ಅಂತೆಯೇ ಉತ್ತಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನವನ್ನು ನೀಡಿದೆವು. ಇದರ ಪ್ರತಿಫಲವೇ ಚಾಂಪಿಯನ್​ಪಟ್ಟ  ನಮ್ಮದಾಗಿದೆ ಎಂದು ಹೇಳಿದರು.  

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ 8 ರನ್ ಗೆಲುವು ಸಾಧಿಸಿ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ  ತನ್ನದಾಗಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com