ಎಂಎಸ್ ಧೋನಿ ನಾಯಕತ್ವ ವಜಾಕ್ಕೆ ಚರ್ಚಿಸಿದ್ದೆವು: ಸಂದೀಪ್ ಪಾಟೀಲ್

ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನಾವು ಕೆಲ ಬಾರಿ ಚರ್ಚೆ ಮಾಡಿದ್ದೇವು ಎಂದು ರಾಷ್ಟ್ರೀಯ ಆಯ್ಕೆ ಮಂಡಳಿಯ ನಿರ್ಗಮನ...
ಸಂದೀಪ್ ಪಾಟೀಲ್-ಎಂಎಸ್ ಧೋನಿ
ಸಂದೀಪ್ ಪಾಟೀಲ್-ಎಂಎಸ್ ಧೋನಿ
Updated on

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನಾವು ಕೆಲ ಬಾರಿ ಚರ್ಚೆ ಮಾಡಿದ್ದೆವು ಎಂದು ರಾಷ್ಟ್ರೀಯ ಆಯ್ಕೆ ಮಂಡಳಿಯ ನಿರ್ಗಮನ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಾರೆ.

ನಾಯಕತ್ವವನ್ನು ಧೋನಿ ಬದಲಿಗೆ ಬೇರೆಯವರಿಗೆ ನೀಡಲು ನಾವು ಯೋಚಿಸಿದ್ದೇವು. ಆದರೆ ನಂತರ 2015ರ ವಿಶ್ವಕಪ್ ಆಸುಪಾಸಿನಲ್ಲಿ ಇಂಥ ನಿರ್ಧಾರ ಬೇಡವೆಂದುಕೊಂಡಿದ್ದೇವು. ಆದರೆ ಧೋನಿ ದಿಢೀರ್ ಅಂತ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು ನಮಗೆ ಶಾಕ್ ನೀಡಿತ್ತು. ಬಳಿಕ ಕೊಹ್ಲಿಗೆ ಟೆಸ್ಟ್ ತಂಡದ ನಾಯಕತ್ವ ದೊರಕಿತು ಎಂದು ಹೇಳಿದ್ದಾರೆ.

ಇನ್ನು ಹಿರಿಯ ಆಟಗಾರರಾದ ಗಂಭೀರ್ ಮತ್ತು ಯುವರಾಜ್ ಸಿಂಗ್ ತಂಡದಿಂದ ಹೊರಬೀಳಲು ಧೋನಿ ಕಾರಣ ಎಂಬ ವರದಿಗಳನ್ನು ತಳ್ಳಿ ಹಾಕಿದ ಸಂದೀಪ್ ಧೋನಿ ಎಂದೂ ಯಾರ ಆಯ್ಕೆಯನ್ನೂ ವಿರೋಧಿಸಿಲ್ಲ. ಆ ನಿರ್ಧಾರ ಆಯ್ಕೆಗಾರರದ್ದೇ ಆಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com