

ಕರಾಚಿ: ಪಾಕಿಸ್ತಾನ ಮತ್ತು ಭಾರತದ ನಡುವೆ ದ್ವೀಪಕ್ಷೀಯ ಕ್ರಿಕೆಟ್ ಒಪ್ಪಂದ ಮತ್ತೆ ಆರಂಭವಾಗಲು ಜನ ಬಯಸುತ್ತಾರೆ ಎಂದು ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಮಿಶ್ಬಾ ಉಲ್ ಹಕ್ ಹೇಳಿದ್ದಾರೆ.
ಕರಾಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಪಾಕ್ ನಡುವೆ ಕ್ರಿಕೆಟ್ ಸಂಬಂಧ ದ್ವಿಪಕ್ಷೀಯ ಒಪ್ಪಂದಗಳು ನಡೆಯಬೇಕಾದರೇ ಕ್ರೀಡೆಯಿಂದ ರಾಜಕೀಯವನ್ನು ಹೊರಗಿಡಬೇಕು ಎಂದು ಹೇಳಿದ್ದಾರೆ.
ಒಬ್ಬ ಕ್ಯಾಪ್ಟನ್ ಆಗಿ, ನಾನು ಭಾರತದ ವಿರುದ್ಧ ಆಟವಾಡಲು ಬಯಸುತ್ತೇನೆ. 2010 ರಿಂದ ಟೆಸ್ಟ್ ಕ್ರಿಕೆಟ್ ತಂಡದನಾಯಕನಾಗಿರುವ ಮಿಸ್ಬಾ, ಎಲ್ಲಾ ರಾಜಕೀಯ ವೈಷಮ್ಯಗಳನ್ನು ಬದಿಗೊತ್ತಿ ಭಾರತದ ವಿರುದ್ಧ ಪಂದ್ಯವಾಡಬೇಕು.
2007 ರಿಂದ ಭಾರತ ಪಾಕಿಸ್ತಾನ ಜೊತೆ ಕ್ರಿಕೆಟ್ ಆಡುತ್ತಿಲ್ಲ ಎಂದು ಹೇಳಿರುವ ಅವರು, ಸೌಹಾರ್ದಯುತ ಕ್ರಿಕೆಟ್ ಆಡಲು ದ್ವಿಪಕ್ಷೀಯ ಮಾತುಕತೆ ಆರಂಭಿಸಲು ಪಾಕಿಸ್ತಾನ ಬಯಸುತ್ತಿದೆ. ಆದರೆ ಭಾರತ ಮಾತ್ರ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.