ಐಪಿಎಲ್ 2017: ಪಂಜಾಬ್ ವಿರುದ್ಧ ನೈಟ್ ರೈಡರ್ಸ್ ಗೆ 8 ವಿಕೆಟ್ ಭರ್ಜರಿ ಜಯ

ಐಪಿಎಲ್ ಸೀಸನ್ 10ನಲ್ಲಿ ಕೋಲ್ಕತಾ ತಂಡದ ಗೆಲುವಿನ ಸರಣಿ ಮುಂದುವರೆದಿದ್ದು, ಗುರುವಾರ ಕೋಲ್ಕತಾದಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಕ್ರಿಕ್ ಇನ್ಱೋ ಚಿತ್ರ
ಕ್ರಿಕ್ ಇನ್ಱೋ ಚಿತ್ರ
Updated on: 

ಕೋಲ್ಕತಾ: ಐಪಿಎಲ್ ಸೀಸನ್ 10ನಲ್ಲಿ ಕೋಲ್ಕತಾ ತಂಡದ ಗೆಲುವಿನ ಸರಣಿ ಮುಂದುವರೆದಿದ್ದು, ಗುರುವಾರ ಕೋಲ್ಕತಾದಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಉತ್ತಮ ಆರಂಭ ಪಡೆದುಕೊಂಡ ಪಂಜಾಬ್ ಗೆ ವೇಗಿ ಗ್ರ್ಯಾಂಡ್ ಹೊಮ್ಮ್ ಮೊದಲ ಆಘಾತ ನೀಡಿದರು. 25 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ  ಹಶೀಮ್ ಆಮ್ಲಾ ಅವರನ್ನು ಔಟ್ ಮಾಡಿದರು. ಬಳಿಕ ವೋಹ್ರಾ ಕೂಡ ಚಾವ್ಲಾ ಬೌಲಿಂಗ್ ನಲ್ಲಿ ಔಟ್ ಆದರು. ಎರಡನೇ ಕ್ರಮಾಂಕದ ಆಟಗಾರ ಸ್ಟಾಯ್ನಿಸ್ ರನ್ನು ನರೇನ್ ಔಟ್ ಮಾಡಿದರು. ಬಳಿಕ ಮ್ಯಾಕ್ಸೆವೆಲ್ (25ರನ್), ಮಿಲ್ಲರ್  (28ರನ್) ಮತ್ತು ಸಾಹಾ (25ರನ್) ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಮುನ್ಸೂಚನೆ ನೀಡಿದರಾದರೂ, ಉಮೇಶ್ ಯಾದವ್ ಮಾರಕ ಬೌಲಿಂಗ್ ನಲ್ಲಿ ಈ ಮೂವರು ಆಟಗಾರರು ಪೆವಿಲಿಯನ್ ಸೇರಿಕೊಂಡರು.

ಬಳಿಕ ಪಂಜಾಬ್ ನ ಯಾವುದೇ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲ್ಲಿಲ್ಲ. ಅಂತಿಮವಾಗಿ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಕೋಲ್ಕತಾ ಪರ ಉಮೇಶ್ ಯಾದವ್ 4  ವಿಕೆಟ್ ಪಡೆದರೆ, ವೋಕ್ಸ್ 2 ವಿಕೆಟ್ ಪಡೆದರು. ನರೇನ್, ಚಾವ್ಲಾ ಮತ್ತು ಗ್ರ್ಯಾಂಡ್ ಹೊಮ್ಮ್ ತಲಾ 1 ವಿಕೆಟ್ ಪಡೆದರು.

171 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಕೋಲ್ಕತಾ ನಾಯಕ ಗೌತಮ್ ಗಂಭೀರ್ ಅವರ ಭರ್ಜರಿ ಆಟದ ನೆರವಿನಿಂದ ಕೇವಲ 2 ವಿಕೆಟ್ ಕಳೆದುಕೊಂಡು 16.3 ಓವರ್ ಗಳಲ್ಲೇ 171 ರನ್ ಗಳಿಸಿ ಗುರಿ ಮುಟ್ಟಿತು, ಆರಂಭಿಕ  ಆಟಗಾರ ನರೇನ್ 37 ರನ್ ಗಳಿಸಿ ಔಟ್ ಆದರೆ, ಉತ್ತಪ್ಪ 26 ರನ್ ಗಳಿಸಿದರು. ಇನ್ನು ನಾಯಕ ಗೌತಮ್ ಗಂಭೀರ್ ತಮ್ಮ ಭರ್ಜರಿ ಆಟದಿಂದ ಕೇವಲ 49 ಎಸೆತಗಳಲ್ಲಿ 72 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ  ಪಾತ್ರವಹಿಸಿದರು. ಗಂಭೀರ್ ಗೆ ಮನೀಷ್ ಪಾಂಡೇ ಉತ್ತಮ ಸಾಥ್ ನೀಡಿದರು.

ಪಂಜಾಬ್ ಪರ ವರುಣ್ ಆ್ಯರೋನ್ ಮತ್ತು ಪಟೇಲ್ ತಲಾ 1 ವಿಕೆಟ್ ಕಬಳಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ನಿರ್ವಹಣೆ ತೋರಿದ ನರೇನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com