ಕೋಲ್ಕತಾ: ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್‌ರೈಡರ್ಸ್ 17 ರನ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ತವರಿನಲ್ಲಿ ಎರಡನೇ ಬಾರಿ ಜಯ ಗಳಿಸಿದೆ.
ಸನ್‌ರೈಸರ್ಸ್ ಟಾಸ್ ಗೆದ್ದ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನೈಟ್‌ರೈಡರ್ಸ್ ಕರ್ನಾಟಕದ ರಾಬಿನ್ ಉತ್ತಪ್ಪ (68) ಮತ್ತು ಮನೀಷ್ ಪಾಂಡೆ (46) ಅವರ ಉತ್ತಮ ಆಟದಿಂದಾಗಿ 172 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.
172 ರನ್ ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಪರ ವಾರ್ನರ್(26), ಶಿಖರ್ ಧವನ್ (23)ಹಾಗೂ ಯುವರಾಜ್ ಸಿಂಗ್ (26) ಉತ್ತಮ ಆಟವಾಡಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.
ಸನ್‌ರೈಸರ್ಸ್ 6 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ನೈಟ್‌ರೈಡರ್ಸ್ 17 ರನ್ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು.