ಸಚಿನ್ ಗಿಲ್ಲ ಗೆಲುವಿನ ಉಡುಗೊರೆ: ಮುಂಬೈಗೆ ಬೆನ್ ಸ್ಟೋಕ್ಸ್ ಶಾಕ್!

ಟೀಮ್ ಮೆಂಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್​ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಗೆಲುವಿನ ಉಡುಗೊರೆ ನೀಡುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಗಿದ್ದು, ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್​ಜೈಂಟ್ ವಿರುದ್ಧ 3 ರನ್ ಗಳ ವಿರೋಚಿತ ಸೋಲು ಕಂಡಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ
Updated on

ಮುಂಬೈ: ಟೀಮ್ ಮೆಂಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್​ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಗೆಲುವಿನ ಉಡುಗೊರೆ ನೀಡುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಗಿದ್ದು, ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ  ರೈಸಿಂಗ್ ಪುಣೆ ಸೂಪರ್​ಜೈಂಟ್ ವಿರುದ್ಧ 3 ರನ್ ಗಳ ವಿರೋಚಿತ ಸೋಲು ಕಂಡಿದೆ.

ಐಪಿಎಲ್ 10 ಟೂರ್ನಿಯಲ್ಲಿ ಸತತ 6 ಗೆಲುವು ಸಾಧಿಸಿ ಬೀಗುತ್ತಿದ್ದ ರೋಹಿತ್ ಶರ್ಮ ಪಡೆಗೆ ಇದೀಗ ಮತ್ತೆ ಪುಣೆ ತಂಡವೇ ಬ್ರೇಕ್ ಹಾಕಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ  ನಾಯಕ ರೋಹಿತ್ ಶರ್ಮ (58ರನ್, 39 ಎಸೆತ, 6 ಬೌಂಡರಿ, 3 ಸಿಕ್ಸರ್) ಹೋರಾಟದ ನಡುವೆಯೂ ಕೇವಲ 3 ರನ್​ ಗಳಿಂದ ಪುಣೆ ತಂಡಕ್ಕೆ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪುಣೆ, ವೇಗಿ ಜಸ್​ಪ್ರೀತ್ ಬುಮ್ರಾ(29ಕ್ಕೆ 2) ಮತ್ತು ಸ್ಪಿನ್ನರ್ ಕರ್ಣ್ ಶರ್ಮ(39ಕ್ಕೆ 2) ಶಿಸ್ತಿನ ದಾಳಿಯ ನಡುವೆ 6 ವಿಕೆಟ್​ ಗೆ 160 ರನ್ ದಾಖಲಿಸಿತು. ಪ್ರತಿಯಾಗಿ ಮುಂಬೈ ತಂಡ, ಟೂರ್ನಿಯ  ದುಬಾರಿ ವಿದೇಶಿ ಆಟಗಾರ ಬೆನ್ ಸ್ಟೋಕ್ಸ್ (21ಕ್ಕೆ2) ಶಿಸ್ತಿನ ದಾಳಿಗೆ ಎಡವಿ 8 ವಿಕೆಟ್​ ಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಪುಣೆ ಎದುರು 3 ರನ್ ಗಳ ವಿರೋಚಿತ ಸೋಲು ಕಂಡಿತು.

ರೋಹಿತ್ ಶರ್ಮ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರೂ ಗೆಲುವಿನ ಫಿನಿಶ್ ನೀಡಲು ವಿಫಲರಾದರು. ವೇಗಿ ಸ್ಟೋಕ್ಸ್ ಮತ್ತು ಜಯದೇವ್ ಉನಾದ್ಕತ್(40ಕ್ಕೆ2) ಪರಿಣಾಮಕಾರಿ ದಾಳಿ ನಡೆಸಿ ಮುಂಬೈ ಗೆಲುವಿಗೆ ಅಡ್ಡಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com