ಮಳೆಯಿಂದಾಗಿ ಬೆಂಗಳೂರು ಪಂದ್ಯ ರದ್ದು: ಆರ್ಸಿಬಿ ಪ್ಲೇ-ಆಫ್ ಕನಸು ಕ್ಷೀಣ!

ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ...
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು
Updated on
ಬೆಂಗಳೂರು: ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ರದ್ದಾಗಿದ್ದು ಪರಿಣಾಮ ಐಪಿಎಲ್ ಪ್ಲೇ-ಆಫ್ ಗೆ ಎಂಟ್ರಿ ಕೊಡುವ ಆರ್ಸಿಬಿ ಕನಸು ಕ್ಷೀಣಗೊಂಡಿದೆ. 
ಸದ್ಯ ಟೂರ್ನಿಯಲ್ಲಿ 7 ಪಂದ್ಯಗಳ ಪೈಕಿ 2 ಪಂದ್ಯಗಳನ್ನು ಗೆದ್ದಿದ್ದ ಆರ್ಸಿಬಿ 4 ಅಂಕಗಳನ್ನು ಪಡೆದಿತ್ತು. 8ನೇ ಪಂದ್ಯ ಮಳೆಯಿಂದ ರದ್ದಾಗಿದ್ದು ಉಭಯ ತಂಡಗಳಿಗೆ ತಲಾ 1 ಅಂಕಗಳನ್ನು ನೀಡಲಾಗಿದೆ. ಇದರೊಂದಿಗೆ ಆರ್ಸಿಬಿ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 
ವಿರಾಟ್ ಕೊಹ್ಲಿ ಪಡೆ ಉಳಿದಿರುವ ಆರೂ ಪಂದ್ಯಗಳನ್ನು ಗೆದ್ದರೂ ಪ್ಲೇ-ಆಫ್ ಸ್ಥಾನಕ್ಕೇರುವುದು ಕಷ್ಟಸಾಧ್ಯ. ತಂಡದ ನೆಟ್ ರನ್ ರೇಟ್(-1.210) ತೀರಾ ಕಳಪೆಯಾಗಿದೆ. ಆರ್ಸಿಬಿಗೆ ಗುಜರಾತ್ ಲಯನ್ಸ್ ಪುಣೆ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯಗಳು ಬಾಕಿ ಇವೆ. ಇದರಲ್ಲಿ ಮೂರು ಪಂದ್ಯಗಳು ತವರಿನಲ್ಲಿ ನಡೆದರೆ ಇನ್ನುಳಿದ ಮೂರು ತವರಿನಾಚೆಯ ಪಂದ್ಯಗಳಾಗಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com