ಪುಣೆ: ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಮನೀಶ್ ಪಾಂಡೆ ಆನ್ ಫೀಲ್ಡ್ ನಲ್ಲಿ ಕನ್ನಡದಲ್ಲಿ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ವೇಳೆ ಮನೀಶ್ ಪಾಂಡೆ ಮತ್ತೊಬ್ಬ ಕನ್ನಡಿಗ ರಾಬಿನ್ ಉತ್ತಪ್ಪ ಅವರ ಜತೆ ಕನ್ನಡದಲ್ಲಿ ಮಾತನಾಡಿದರು. ಈ ವೇಳೆ ಕಾಮೆಂಟೆಟರ್ ಪಾಮಿ ಎಂಬಾಂಗ್ವಾ ಅವರು ಕನ್ನಡದ ಭಾಷೆಯನ್ನು ಗುರುತಿಸಿ ಪ್ರತಿಕ್ರಿಯಿಸಿದ್ದು ಕನ್ನಡಿಗರಿಗೆ ಸಕತ್ ಖುಷಿಕೊಟ್ಟಿದೆ.
ಅಲ್ಲದೆ ಪಾಮಿ ಅವರು ಹೆಂಗಿದ್ದೀರಾ ಮನೀಶ್ ಎಂದು ಕೇಳುತ್ತಾರೆ. ಇದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಮೂಡಿಸಿತು. ನಂತರ ಮನೀಶ್ ತಮ್ಮ ಬಾಲ್ಯದ ಕನಸು ಆರ್ಮಿ ಸೇರಲು ಬಯಸಿದ್ದು ನಂತರ ಕ್ರಿಕೆಟರ್ ಆಗಿದ್ದನ್ನು ಚುಟುಕಾಗಿ ಹೇಳುತ್ತಾರೆ.
ಪುಣೆ ತಂಡ ಬ್ಯಾಟಿಂಗ್ ಮಾಡುತ್ತಿತ್ತು ಈ ವೇಳೆ ಮೈಕ್ ನಲ್ಲಿ ಮಾತನಾಡುತ್ತಿದ್ದ ಮನೀಶ್ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪಗೆ ಕನ್ನಡದಲ್ಲಿ ಹೇಳಿದ್ದು ಇದೀಗ ವೈರಲ್ ಆಗಿದೆ.