ಕಳಪೆ ಪ್ರದರ್ಶನ: ಕರುಣ್ ನಾಯರ್ ಬೆಂಬಲಕ್ಕೆ ದ್ರಾವಿಡ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿರುವ ಕರುಣ್ ನಾಯರ್ ರನ್ನು ತಂಡದ ನಾಯಕರನ್ನಾಗಿ ಆಯ್ಕೆ...
ರಾಹುಲ್ ದ್ರಾವಿಡ್-ಕರುಣ್ ನಾಯರ್
ರಾಹುಲ್ ದ್ರಾವಿಡ್-ಕರುಣ್ ನಾಯರ್
Updated on: 
ಮೊಹಾಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿರುವ ಕರುಣ್ ನಾಯರ್ ರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದ ನಿರ್ಧಾರವನ್ನು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ.
ಟೂರ್ನಿಯಲ್ಲಿ ಕರುಣ್ ನಾಯರ್ ಕಳಪೆ ಪ್ರದರ್ಶನ ನೀಡುತ್ತಿದ್ದು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ತಂಡ ಹೀನಾಯ ಸೋಲು ಕಂಡ ಬಳಿಕ ಪ್ರತಿಕ್ರಿಯಿಸಿದ ದ್ರಾವಿಡ್ ಪ್ರದರ್ಶನಕ್ಕೂ-ನಾಯಕತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಜಹೀರ್ ಖಾನ್ ಒಂದೊಮ್ಮೆ ಗಾಯಗೊಂಡರೆ ಕರುಣ್ ಗೆ ಆ ಜವಾಬ್ದಾರಿ ನೀಡಬೇಕೆಂದು ಮೊದಲೇ ತೀರ್ಮಾನಿಸಿದ್ದೇವು. ಏಕೆಂದರೆ ಕಳೆದ ಬಾರಿ ಉಫನಾಯಕರಾಗಿದ್ದ ಡುಮಿನಿ, ಡಿಕಾಕ್ ಇದೀಗ ತಂಡದಲ್ಲಿ ಇಲ್ಲ ಎಂದು ದ್ರಾವಿಡ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com